ಬಾಲಸೂರು: ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಮಂಗಳವಾರ 8.30 ಕ್ಕೆ ಭಾರತವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಪರಮಾಣು ಸಾಮರ್ಥ್ಯದ ಅಗ್ನಿ-1 (ಎ) ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಭಾರತೀಯ ಸೈನ್ಯದ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ಈ ಪರೀಕ್ಷೆಯನ್ನು ನಡೆಸಿತು.
ಬಾಲಸೋರ್ನಲ್ಲಿರುವ ಅಬ್ದುಲ್ ಕಲಾಮ್ ದ್ವೀಪದಲ್ಲಿ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಬಿಡುಗಡೆಯಾದ ಪಾಡ್ -4 ರಿಂದ 700 ಕಿ.ಮೀ. ವ್ಯಾಪ್ತಿಯ ಕ್ಷಿಪಣಿಯ 18ನೇ ಆವೃತ್ತಿಯಾಗಿದೆ.
15 ಮೀಟರ್ ಉದ್ದದ, 12 ಟನ್ ತೂಕದ ಅಗ್ನಿ -1 , 1,000 ಕೆ.ಜಿ. ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕಳೆದ ಬಾರಿಯ ಪರೀಕ್ಷಾ ಉಡಾವಣೆಯು ನವೆಂಬರ್ 22, 2016 ರಂದು ಇದೇ ಬೇಸ್ನಿಂದ ಯಶಸ್ವಿಯಾಗಿ ನಡೆಸಲಾಗಿತ್ತು.
ಈ ಕ್ಷಿಪಣಿ ಸೇವೆಯನ್ನು 2004 ರಲ್ಲಿ ಸೇರ್ಪಡೆ ಮಾಡಲಾಯಿತು. ಸಶಸ್ತ್ರ ಪಡೆಗಳಿಂದ ನಿಯಮಿತವಾದ ತರಬೇತಿಯ ಭಾಗವಾಗಿ ಮೇಲ್ಮೈನಿಂದ ಮೇಲ್ಮೈಗೆ, ಏಕ-ಹಂತದ ಕ್ಷಿಪಣಿಗಳನ್ನು ಉಡಾಯಿಸಲಾಗಿತ್ತು.