Corona Third Wave: ಈ ನಿಯಮಗಳನ್ನು ಅನುಸರಿಸಿದರೆ ಕರೋನಾ ಮೂರನೇ ತರಂಗ ತಪ್ಪಿಸಬಹುದು- ಏಮ್ಸ್ ಮುಖ್ಯಸ್ಥ ಡಾ. ಗುಲೇರಿಯಾ

ದೇಶದಲ್ಲಿ ಕೊರೊನಾವೈರಸ್ನ ಮೂರನೇ ತರಂಗವನ್ನು ತಪ್ಪಿಸಬಹುದೇ? ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಈ ಬಗ್ಗೆ ಒಂದು ಪ್ರಮುಖ ವಿಷಯವನ್ನು ಹೇಳಿದ್ದಾರೆ.

Written by - Yashaswini V | Last Updated : Jul 24, 2021, 07:45 AM IST
  • ಕರೋನಾ ಪ್ರೋಟೋಕಾಲ್ ಅನ್ನು ಅನುಸರಿಸುವುದು ಅವಶ್ಯಕ
  • ಮೂರನೇ ತರಂಗದ ಆಗಮನದ ಬಗ್ಗೆ ಇನ್ನೂ ತಿಳಿದಿಲ್ಲ
  • ಕರೋನಾ ಪ್ರೋಟೋಕಾಲ್ ಅನುಸರಿಸುವ ಮೂಲಕ ಕರೋನದ ಮೂರನೇ ತರಂಗವನ್ನು ತಪ್ಪಿಸಬಹುದು
Corona Third Wave: ಈ ನಿಯಮಗಳನ್ನು ಅನುಸರಿಸಿದರೆ ಕರೋನಾ ಮೂರನೇ ತರಂಗ ತಪ್ಪಿಸಬಹುದು- ಏಮ್ಸ್ ಮುಖ್ಯಸ್ಥ ಡಾ. ಗುಲೇರಿಯಾ title=
Corona Third Wave

ನವದೆಹಲಿ: ದೇಶದಲ್ಲಿ ಕೊರೊನಾವೈರಸ್ನ ಎರಡನೇ ತರಂಗದ ಪ್ರಭಾವ ಇನ್ನೂ ಕೂಡ ಪೂರ್ತಿಯಾಗಿ ಕಡಿಮೆಯಾಗಿಲ್ಲ. ಏತನ್ಮಧ್ಯೆ, ಕರೋನಾ ಮೂರನೇ ತರಂಗದ (Corona Third Wave) ಆತಂಕ ಹೆಚ್ಚಾಗಿದೆ. ಆದರೆ ದೇಶದಲ್ಲಿ ಕೊರೊನಾವೈರಸ್ನ ಮೂರನೇ ತರಂಗವನ್ನು ತಪ್ಪಿಸಬಹುದೇ? ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಈ ಬಗ್ಗೆ ಒಂದು ಪ್ರಮುಖ ಮಾಹಿತಿ ನೀಡಿದ್ದಾರೆ.

'ಕರೋನಾ ಪ್ರೋಟೋಕಾಲ್ ಅನ್ನು ಅನುಸರಿಸುವುದು ಅವಶ್ಯಕ':
ದೇಶದಲ್ಲಿ ನಿಜವಾಗಿಯೂ ಕರೋನದ ಮೂರನೇ ತರಂಗ (Corona Third Wave) ಇನ್ನೂ ಹೆಚ್ಚಿನ ಹಾನಿ ಉಂಟುಮಾಡಲಿದೆಯೇ? ಅಥವಾ ಅದನ್ನು ತಪ್ಪಿಸಬಹುದೇ? ಎಂಬ ಕುರಿತು ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮತ್ತೊಮ್ಮೆ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದ್ದಾರೆ. ನಾವು ಕರೋನಾ ಪ್ರೋಟೋಕಾಲ್ ಅನ್ನು ಸರಿಯಾಗಿ ಅನುಸರಿಸಿದರೆ, ಈ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ತಪ್ಪಿಸಬಹುದು ಎಂದು ಡಾ. ಗುಲೇರಿಯಾ ಹೇಳಿದ್ದಾರೆ.

ಇದನ್ನೂ ಓದಿ- Corona Vaccine New Guidelines: ಗರ್ಭಿಣಿಯರಿಗೆ ಕರೋನ ಲಸಿಕೆ ಸುರಕ್ಷಿತವಾಗಿದೆಯೇ? ಇಲ್ಲಿದೆ ಹೊಸ ಮಾರ್ಗಸೂಚಿ

ಮೂರನೇ ತರಂಗದ ಬಗ್ಗೆ ಇನ್ನೂ ತಿಳಿದಿಲ್ಲ:-
ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ  (Dr Randeep Guleria), 'ವೈರಸ್ ಹೇಗೆ ವರ್ತಿಸುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ, ಆದರೆ ಮುಂಬರುವ ತಿಂಗಳುಗಳಲ್ಲಿ ವೈರಸ್ ಅಷ್ಟು ನಾಟಕೀಯವಾಗಿ ರೂಪಾಂತರಗೊಳ್ಳುವುದಿಲ್ಲ ಎಂದು ತೋರುತ್ತದೆ. ಸಿರೊ ಸಮೀಕ್ಷೆಯ ಪ್ರಕಾರ, ಜನರಲ್ಲಿ ಸಾಕಷ್ಟು ಪ್ರಮಾಣದ ಪ್ರತಿರಕ್ಷಾ ರೂಪುಗೊಂಡಿದೆ. ಹಾಗಾಗಿ ಕರೋನದ ಮೂರನೇ ತರಂಗ ಯಾವಾಗ ಬರುತ್ತದೆ ಎಂದು ಹೇಳುವುದು ಕಷ್ಟ ಎಂದಿದ್ದಾರೆ.

ಕರೋನಾದ ಮೂರನೇ ತರಂಗವನ್ನು ತಪ್ಪಿಸಬಹುದು :
ದೇಶಾದ್ಯಂತ ಎಲ್ಲ ಜನರಿಗೂ ಕರೋನಾ ಲಸಿಕೆ (Corona Vaccine) ಹಾಕುವವರೆಗೆ ಜನರು ಜನದಟ್ಟಣೆ ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಬೇಕು ಎಂದು ಡಾ. ರಣದೀಪ್ ಗುಲೇರಿಯಾ ಅವರು ಹೇಳಿದರು. ನಾವು ಕೋವಿಡ್‌ನ ಈ ಪರಿಸ್ಥಿತಿಯಲ್ಲಿ  ಸೂಕ್ತವಾಗಿ ವರ್ತಿಸಿದರೆ, ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ಮತ್ತಷ್ಟು ತಪ್ಪಿಸಬಹುದು ಅಥವಾ ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ- Corona ರೋಗಿಗಳಲ್ಲಿ ಎದುರಾದ ಮತ್ತೊಂದು ಕಂಟಕ, Liverಗೆ ಸಂಬಂಧಿಸಿದ ಗಂಭೀರ ಕಾಯಿಲೆಯ ಅಪಾಯ

'ಮಕ್ಕಳಿಗೆ ಸೆಪ್ಟೆಂಬರ್‌ನಲ್ಲಿ ಕರೋನಾ ಲಸಿಕೆ ಸಿಗುತ್ತದೆ':
ದೆಹಲಿ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ  (Dr Randeep Guleria) ಮಾತನಾಡಿ, ಕರೋನಾ ಸಕಾರಾತ್ಮಕತೆ ದರವು ತುಂಬಾ ಕಡಿಮೆಯಿರುವ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಬಹುದು. ಸರ್ಕಾರವು ಶಾಲೆಗಳನ್ನು ಶ್ರೇಣೀಕೃತ ರೀತಿಯಲ್ಲಿ ತೆರೆಯಬೇಕು. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕರೋನಾ ಲಸಿಕೆ ಲಭ್ಯವಾಗಬಹುದು. ಇದರೊಂದಿಗೆ, ಕೊರೊನಾವೈರಸ್ ವಿರುದ್ಧ ಹೋರಾಡಲು ಮಕ್ಕಳಿಗೆ ದೊಡ್ಡ ಆಯುಧ ಸಿಗುತ್ತದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News