Aishwarya Rai ಬಚ್ಚನ್, ಆರಾಧ್ಯಾ ಬಚ್ಚನ್ Corona Report Positive

ಇದೀಗ ಬಂದ ಸುದ್ದಿಯ ಪ್ರಕಾರ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ.

Last Updated : Jul 12, 2020, 03:20 PM IST
Aishwarya Rai ಬಚ್ಚನ್, ಆರಾಧ್ಯಾ ಬಚ್ಚನ್ Corona Report Positive title=

ನವದೆಹಲಿ: ಕಳೆದ ರಾತ್ರಿ ಶನಮಾನದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಹಾಗೂ ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರ ಪ್ರತಿ ಎಲ್ಲರ ಆತಂಕ ಹೆಚ್ಚಾಗಿತ್ತು. ಆದರೆ, ಇದೀಗ ಬಂದ ವರದಿಯ ಪ್ರಕಾರ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರ ಕೊರೊನಾ ಟೆಸ್ಟ್ ವರದಿ ಕೂಡ ಪಾಸಿಟಿವ್ ಬಂದಿದೆ.

ಈ ಕುರಿತು Zee Newsಗೆ ಮಾಹಿತಿ ನೀಡಿರುವ BMC ಅಸಿಸ್ಟೆಂಟ್ ಕಮಿಷನರ್ ವಿಶ್ವಾಸ್ ಮೋಟೆ, ಇದೀಗ ಬಂದ ತಾಜಾ ವರದಿಯ ಪ್ರಕಾರ ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾ ಇಬ್ಬರ ಕೊರೊನಾ ವರದಿಗಳೂ ಕೂಡ ಪೋಸಿತಿವೆ ಬಂದಿವೆ. ಈ ವರದಿಯ ಬಳಿಕ ಇದೀಗ ಅವರ ಅಭಿಮಾನಿಗಳ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಇದು ಐಶ್ವರ್ಯಾ ಹಾಗೂ ಆರಾಧ್ಯಾ ಅವರ ಎರಡನೇ ವರದಿಯಾಗಿದ್ದು, ಇಂದು ಬೆಳಗ್ಗೆ ನಡೆಸಿದ್ದ ಸ್ವಾಬ್ ಟೆಸ್ಟ್ ವರದಿಯಲ್ಲಿ ಇಬ್ಬರೂ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಅವರ ಎರಡನೇ ವರದಿ ಪ್ರಕಟಗೊಂಡಿದ್ದು, ಎರಡನೇ ವರದಿಯಲ್ಲಿ ಇಬ್ಬರೂ ಟೆಸ್ಟ್ ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಇತರೆ ಕುಟುಂಬ ಸದಸ್ಯರ ಟೆಸ್ಟ್ ವರದಿ ಇಂತಿವೆ
ಐಶ್ವರ್ಯ ರೈ-ಪಾಸಿಟಿವ್ 
ಆರಾಧ್ಯಾ ಬಚ್ಚನ್ -ಪಾಸಿಟಿವ್
ಜಯಾ ಬಚ್ಚನ್- ನೆಗೆಟಿವ್
ಶ್ವೇತಾ ನಂದಾ-ನೆಗೆಟಿವ್
ಅಗಸ್ತಯಾ ನಂದಾ-ನೆಗೆಟಿವ್
ನವ್ಯಾ ನಂದಾ- ನೆಗೆಟಿವ್
 

Trending News