ಮೊಘಲ್ ಆಳ್ವಿಕೆ ಸಂಬಂಧಿಸಿದ ಅನೇಕ ವಿಷಯಗಳಿವೆ. ಆದರೆ ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಮೊಘಲರ ಕಾಲದ ಬಗ್ಗೆ ಹೇಳುವುದಾದರೆ, ಮೊದಲ ಉಲ್ಲೇಖ ಬರುವುದು ಅಕ್ಬರ್. ಅಕ್ಬರ್ ಭಾರತವನ್ನು ಬಹಳ ಕಾಲ ಆಳಿದ ಅರಸ. ಇನ್ನು ಅಕ್ಬರನ ಆಳ್ವಿಕೆಯಲ್ಲಿ ಹರಾಮ್ ಆಚರಣೆಯು ಹೆಚ್ಚಾಗಿದ್ದರ ಬಗ್ಗೆ ನಿಮಗೆ ತಿಳಿದಿದೆಯೇ?
ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!
ಹರಾಮ್ ಎಂದರೆ ಮಹಿಳೆಯರನ್ನು ಇರಿಸುವ ಸ್ಥಳ. ಇನ್ನು ಈ ಸ್ಥಳದ ಜವಾಬ್ದಾರಿಯನ್ನು ಓರ್ವ ತೃತೀಯಲಿಂಗಿಗೆ ನೀಡಲಾಗಿತ್ತು ಎಂದು ಉಲ್ಲೇಖಗಳು ಹೇಳುತ್ತವೆ. ಇದಕ್ಕೆ ಕಾರಣ ಅಕ್ಬರ್ ತೃತೀಯಲಿಂಗಿ ಜೊತೆ ಬಹಳ ವಿಶೇಷವಾದ ಸಂಬಂಧವನ್ನು ಹೊಂದಿದ್ದನು.
ಅಂದಹಾಗೆ, ಮೊಘಲ್ ದೊರೆಗಳ ಆಸ್ಥಾನದಲ್ಲಿ ತೃತೀಯಲಿಂಗಿಗಳಿಗೆ ವಿಶೇಷ ಸ್ಥಾನಮಾನವಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ತೃತೀಯಲಿಂಗಿಗಳಿಗೆ ವಾಸಿಸಲು ಐಷಾರಾಮಿ ಸ್ಥಳಗಳು, ಸೇವಕರು ಮತ್ತು ಧರಿಸಲು ದುಬಾರಿ ಬಟ್ಟೆಗಳನ್ನು ಸಹ ನೀಡಲಾಗುತ್ತಿತ್ತು.
ಇವೆಲ್ಲದಕ್ಕೂ ಮುಖ್ಯವಾಗಿ ಮೊಘಲ್ ಚಕ್ರವರ್ತಿಗಳು ಭದ್ರತೆ ಮತ್ತು ಹಣಕಾಸು ಸಂಬಂಧಿತ ವಿಶೇಷ ಜವಾಬ್ದಾರಿಗಳನ್ನು ತೃತೀಯಲಿಂಗಿಗಳ ಕೈಗೆ ನೀಡಿದ್ದರು.
ಇನ್ನು ಅಕ್ಬರನ ಆಳ್ವಿಕೆಯ ಸಮಯದಲ್ಲಿ ಅತ್ಯಂತ ಬಲಿಷ್ಠ ತೃತೀಯಲಿಂಗಿಯೊಬ್ಬ ಇದ್ದ. ಅವನ ಹೆಸರು ಇತಿಮಾದ್ ಖಾನ್. ಅಕ್ಬರನ ಅತ್ಯಂತ ನಿಕಟ ಮತ್ತು ಶಕ್ತಿಶಾಲಿ ಪ್ರತಿನಿಧಿ ಎಂದೇ ಈತನನ್ನು ಕರೆಯಲಾಗುತ್ತಿತ್ತು.
ಇದನ್ನೂ ಓದಿ: Shubh Rajyog 2023 : 700 ವರ್ಷಗಳ ನಂತರ 5 ರಾಜಯೋಗಗಳು, ಈ ನಾಲ್ಕು ರಾಶಿಯವರಿಗೆ ಭಾರಿ ಆರ್ಥಿಕ ಲಾಭ!
ಇನ್ನು ಅಕ್ಬರ್ ಇತಿಮಾದ್’ಗೆ ಭದ್ರತೆ ಮತ್ತು ಹಣಕಾಸು ಸಂಬಂಧಿತ ಎಲ್ಲ ಪ್ರಮುಖ ಜವಾಬ್ದಾರಿಗಳನ್ನು ನೀಡಿದ್ದನಂತೆ. ಅಷ್ಟೇ ಅಲ್ಲದೆ ಗಂಭೀರ ವಿಷಯಗಳಲ್ಲಿ ಅಕ್ಬರ್ ಇತಿಮಾದ್ ಖಾನ್ ನ ಸಲಹೆಯನ್ನೂ ಪಡೆಯುತ್ತಿದ್ದ ಎಂದು ಅನೇಕ ಉಲ್ಲೇಖಗಳು ಹೇಳುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.