Auto Driver Viral Video: ಆಟೋ ಚಾಲಕನೊಬ್ಬ ಪ್ರಯಾಣಿಕರೊಂದಿಗೆ ಹಿಂದಿಯ ಬದಲು ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಹೇಳುತ್ತಿರುವ ಮತ್ತು ಈ ಸಂಬಂಧ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಾತಿನ ಚಕಮಕಿಯ ವೈರಲ್ ವೀಡಿಯೋ ಕರ್ನಾಟಕದ್ದು ಎಂದು ಹೇಳಲಾಗುತ್ತಿದೆಯಾದರೂ, ನಿಖರವಾದ ಸ್ಥಳ ಯಾವುದೆಂದು ತಿಳಿದುಬಂದಿಲ್ಲ.
ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!
ಇನ್ನು ವಿಡಿಯೋದಲ್ಲಿ ಕೇಳಿಬರುತ್ತಿರುವ ಆಡಿಯೋ ಒಂದು ರೀತಿಯಿದ್ದರೆ, ಸೋಶಿಯಲ್ ಮೀಡಿಯಾ ಟ್ವಿಟರ್’ನಲ್ಲಿ ಬೇರೆಯೇ ರೂಪ ಪಡೆದುಕೊಂಡಿದೆ.
ಟ್ವಿಟರ್’ನಲ್ಲಿ ಏನಿದೆ?
ವೈರಲ್ ಆದ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, "ಉತ್ತರ ಭಾರತೀಯರು-ಭಿಕ್ಷುಕರು, ನಮ್ಮ ಭೂಮಿ. ಇದು ಈ ಆಟೋ ಚಾಲಕ ಬಳಸುವ ಪದಗಳು. ಇದು ಕೇವಲ ಈ ಚಾಲಕನ ಮನಸ್ಥಿತಿ ಮಾತ್ರವಲ್ಲ, ಈ ಎಲ್ಲಾ ಜನರ ಮನಸ್ಥಿತಿಯಾಗಿದೆ. ಕರ್ನಾಟಕದವರು ಎಂದು ಹೆಮ್ಮೆ ಪಡುವುದು ಮತ್ತು ಅದರ ಹೆಮ್ಮೆ ಇತರರನ್ನು ಕನ್ನಡ ಮಾತನಾಡಲು ಒತ್ತಾಯಿಸುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ” ಎಂದು ಪೋಸ್ಟ್’ನಲ್ಲಿ ಬರೆಯಲಾಗಿದೆ.
ಜೊತೆಗೆ ಬಳಕೆದಾರರು ಟ್ವೀಟ್’ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಏನಿದು ಘಟನೆ?
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಆಟೋ ಚಾಲಕ, ಮಹಿಳಾ ಪ್ರಯಾಣಿಕರಿಗೆ ಕನ್ನಡದಲ್ಲಿ ಮಾತನಾಡುವಂತೆ ಹೇಳುತ್ತಿರುವುದನ್ನು ಕಾಣಬಹುದು.
"NorthIndians-Beggar,Our Land" These are the words used by this auto driver and this is not the only mentality of this driver but of all of these peoples.Being proud to be from Karnataka and its pride is wholly different from forcing other to speak Kannada.@AmitShah @PMOIndia pic.twitter.com/qEnANTglOW
— Anonymous (@anonymous_7461) March 10, 2023
"ಇದು ಕರ್ನಾಟಕ. ನೀವು ಕನ್ನಡದಲ್ಲಿ ಮಾತನಾಡಬೇಕು. ನಾನು ಹಿಂದಿಯಲ್ಲಿ ಏಕೆ ಮಾತನಾಡಬೇಕು" ಎಂದು ಆಟೋ ಡ್ರೈವರ್ ಹೇಳಿದಾಗ, ವಿಡಿಯೋ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು, "ಇಲ್ಲ ನಾವು ಕನ್ನಡದಲ್ಲಿ ಮಾತನಾಡುವುದಿಲ್ಲ. ನಾವು ಏಕೆ ಮಾತನಾಡಬೇಕು" ಎಂದು ಮರುಪ್ರಶ್ನೆ ಹಾಕಿದ್ದಾಳೆ. ಇದಕ್ಕೆ ಉತ್ತರ ನೀಡಿದ ಆಟೋ ಚಾಲಕ "ನೀವು ಉತ್ತರ ಭಾರತೀಯರು. ಇದು ನಮ್ಮ ಭೂಮಿ, ನಿಮ್ಮ ಭೂಮಿ ಅಲ್ಲ. ನೀವು ಕನ್ನಡದಲ್ಲಿಯೇ ಮಾತನಾಡಬೇಕು. ನಾನೇಕೆ ಹಿಂದಿಯಲ್ಲಿ ಮಾತನಾಡಬೇಕು" ಎಂದು ಹೇಳಿದ್ದಾರೆ.
ಇದನ್ನೂ ಓದಿ: 19 ಎಸೆತ, 18 ಬೌಂಡರಿ, 96 ರನ್...ಪುರುಷರಿಂದಲೂ ಸಾಧ್ಯವಾಗದ ದಾಖಲೆ ಬರೆದ ಈ ಮಹಿಳಾ ಆಟಗಾರ್ತಿ!
ಭಾರತದಲ್ಲಿ ದಶಕಗಳಿಂದ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯ ಸ್ವೀಕಾರದ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಸದ್ಯ ಈ ವಿಡಿಯೋದಲ್ಲಿ ಕಾಣಿಸುತ್ತಿರುವ ವಾಗ್ವಾದಕ್ಕೂ ಏನು ನಡೆದಿದೆ ಎಂದು ತಿಳಿದುಬಂದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.