ದೇಶದಲ್ಲಿ ಭಯೋತ್ಪಾದಕ ದಾಳಿಯ ಎಚ್ಚರಿಕೆ , PoKಯಲ್ಲಿ ಅಡಗಿರುವ ಜೈಶ್ ಎ ಮಹಮ್ಮದ್ ನ ಐವರು ಆತಂಕವಾದಿಗಳು

ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೋಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.   

Written by - Ranjitha R K | Last Updated : Aug 29, 2021, 03:10 PM IST
  • ದೇಶದಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ
  • ಎಲ್‌ಒಸಿ ಬಳಿ ನಿರಂತರವಾಗಿ ಹಾದು ಹೋಗಿರುವ ಭಯೋತ್ಪಾದಕರು
  • 'ಪಿಒಕೆಯಲ್ಲಿ ಪಿಉರಿ ನಡೆಸುತ್ತಿರುವ ಉಗ್ರರು
ದೇಶದಲ್ಲಿ ಭಯೋತ್ಪಾದಕ ದಾಳಿಯ ಎಚ್ಚರಿಕೆ , PoKಯಲ್ಲಿ ಅಡಗಿರುವ ಜೈಶ್ ಎ ಮಹಮ್ಮದ್ ನ ಐವರು ಆತಂಕವಾದಿಗಳು  title=
Terror alert in India (file photo)

ನವದೆಹಲಿ : ದೇಶದಲ್ಲಿ ಭಯೋತ್ಪಾದಕ ದಾಳಿ (Terror attack) ಬಗ್ಗೆ ಬಿಗ್ ಅಲರ್ಟ್ ನೀಡಲಾಗಿದೆ. ಮಾಹಿತಿಯ ಪ್ರಕಾರ, ಭಯೋತ್ಪಾದಕ ಸಂಘಟನೆ 'ಜೈಶ್-ಎ-ಮೊಹಮದ್' (Jaish E Mohhamed) ದೇಶದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಮೂಲಗಳ ಪ್ರಕಾರ, ಜೈಶ್ ನ ಐವರು ಭಯೋತ್ಪಾದಕರು  ಪಿಒಕೆ (POK) ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ (Jammu-Kashmir) ನುಸುಳಿದ್ದಾರೆ  ಎನ್ನಲಾಗಿದೆ.  ಐಇಡಿ (IED) ಸ್ಫೋಟಕದ ಮೂಲಕ ಪ್ರಮುಖ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. 

ಗುಪ್ತಚರ ಸಂಸ್ಥೆಗಳ ಎಚ್ಚರಿಕೆ : 
ಭಯೋತ್ಪಾದಕ ದಾಳಿ (Terror attack) ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೋಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.   ಈ ಎಚ್ಚರಿಕೆಯ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದ (POK) ಜಾಂಡ್ರಾಟ್ ಪ್ರದೇಶದಲ್ಲಿ ಜೈಶ್-ಎ-ಮೊಹಮ್ಮದ್ ನ  (Jaish E Mohhamed) ಐವರು ಭಯೋತ್ಪಾದಕರು ನುಸುಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಐವರ ಜೊತೆ ಒಬ್ಬ ಗೈಡ್ ಕೂಡಾ ಇದ್ದಾನೆ ಎನ್ನಲಾಗಿದೆ.  

ಇದನ್ನೂ ಓದಿ : ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆ ಮುಟ್ಟುವುದು ಅಪರಾಧವಲ್ಲ: ಬಾಂಬೆ ಹೈಕೋರ್ಟ್

ಭದ್ರತಾಪಡೆಗಳನ್ನು ಗುರಿಯಾಗಿಸುವ ಸಾಧ್ಯತೆ : 
ಗುಪ್ತಚರ ಮಾಹಿತಿಯ ಪ್ರಕಾರ, ಭಯೋತ್ಪಾದಕರು (Terrorist) ಭದ್ರತಾ ಪಡೆಗಳನ್ನು ಗುರಿಯಾಗಿಸಬಹುದು. ಭಯೋತ್ಪಾದಕರು ಫಾರ್ವಡ್ ಲೊಕೇಶನ್ ಮತ್ತು ಎಲ್‌ಒಸಿ (LOC) ಬಳಿ ನಿರಂತರವಾಗಿ ಹಾದು ಹೋಗಿದ್ದಾರೆ ಎನ್ನಲಾಗಿದೆ.  ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ (Afghanistan) ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಅದೇ ಸಮಯದಲ್ಲಿ, ಕಾಬೂಲ್ ವಿಮಾನ ನಿಲ್ದಾಣದಲ್ಲಿ (Kabul airport) ನಡೆದ ದಾಳಿಯ ನಂತರ ಗುಪ್ತಚರ ಸಂಸ್ಥೆಗಳು ಮೊದಲಿಗಿಂತ ಹೆಚ್ಚು ಜಾಗರೂಕರಾಗಿವೆ. ಭಯೋತ್ಪಾದಕ ಸಂಘಟನೆಗಳು ಈಗ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು (Terror attack) ನಡೆಸುವ ಯೋಜನೆ ರೂಪಿಸುತ್ತಿವೆ ಎನ್ನಲಾಗಿದೆ. 

ಇದನ್ನೂ ಓದಿ : Amazon Electronics Sale: ಎಲೆಕ್ಟ್ರಾನಿಕ್ ವಸುಗಳ ಮೇಲೆ ಭಾರೀ ಡಿಸ್ಕೌಂಟ್, MacBook Air ಮೇಲೆ ಸಿಗುತ್ತಿದೆ 23 ಸಾವಿರಗಳ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News