ALERT:ಈ ಮೆಸೇಜಿಂಗ್ ಆಪ್ ನಿಮ್ಮ ಮೊಬೈಲ್ ನಲ್ಲಿಯೂ ಇದೆಯಾ? ಎಚ್ಚರ!

ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್, ಹೆಸರಾಂತ ಮೆಸೇಜಿಂಗ್ ಆಪ್ ಒಂದನ್ನು ಮತ್ತೊಮ್ಮೆ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

Last Updated : Feb 16, 2020, 11:54 AM IST
ALERT:ಈ ಮೆಸೇಜಿಂಗ್ ಆಪ್ ನಿಮ್ಮ ಮೊಬೈಲ್ ನಲ್ಲಿಯೂ ಇದೆಯಾ? ಎಚ್ಚರ! title=

ನವದೆಹಲಿ:ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್, ಹೆಸರಾಂತ ಮೆಸೇಜಿಂಗ್ ಆಪ್ ಟೂಟಾಕ್(ToTalk) ಅನ್ನು ಮತ್ತೊಮ್ಮೆ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ. ಈ ಆಪ್ ಅನ್ನು UAE ಸರ್ಕಾರ ಈ ಆಪ್ ಅನ್ನು ವ್ಯಾಪಕವಾಗಿ ತನ್ನ ಬೆಹುಕಾರಿಕಾ ಚಟುವಟಿಕೆಗಳಿಗೋಸ್ಕರ ಬಳಸುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಕಳೆದ ಡಿಸೆಂಬರ್ ನಲ್ಲಿ ಆಪಲ್ ಪ್ಲೇ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ಗಳಿಂದ ತೆಗೆದುಹಾಕಲಾಗಿತ್ತು.

9ಟು5 ಗೂಗಲ್ ನೀಡಿರುವ ವರದಿಯ ಪ್ರಕಾರ ಈ ಆಪ್ ಅನ್ನು ಇನ್ಸ್ಟಾಲ್ ಮಾಡಿರುವ ಜನರ ಡೇಟಾ ಸುರಕ್ಷಿತ ಇಲ್ಲ ಎಂದು ಹೇಳಲಾಗಿದೆ. ಏಕೆಂದರೆ, ಬಳಕೆದಾರರ ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಗಾ ಇಡಲು ಯುಎಇ ಸರ್ಕಾರ ಈ ಆಪ್ ಅನ್ನು ಬಳಸುತ್ತಿದೆ. ಈ ಚಟುವಟಿಕೆಗಳಲ್ಲಿ ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಭಾಷಣೆ, ವ್ಯಕ್ತಿಗಳ ನಡುವಿನ ಸಂಬಂಧ, ಯಾರು ಎಲ್ಲಿಗೆ ಹೋಗುತ್ತಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬ ವೈಯಕ್ತಿಕ ಸಂಗತಿಗಳ ಮೇಲೆ ನಿಗಾವಹಿಸಲಾಗುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಬಳಕೆದಾರರು ಪರಸ್ಪರ ಹಂಚಿಕೊಳ್ಳುವ ಫೋಟೋ ಮತ್ತು ಇತರೆ ಸಾಮಗ್ರಿಗಳ ಮೇಲೂ ಕೂಡ ನಿಗಾವಹಿಸಲಾಗುತ್ತದೆ ಎನ್ನಲಾಗಿದೆ.

ಗುಪ್ತಚರ ಇಲಾಖೆಗಳ ಜೊತೆ ಸಂಪರ್ಕ ಹೊಂದಿರುವ ಓರ್ವ ಅಧಿಕಾರಿಗಳ ಪ್ರಕಾರ, ಟೆಲಿಗ್ರಾಮ್ ಹಾಗೂ ಸಿಗ್ನಲ್ ಆಪ್ ಗಳಂತೆ ಈ ಆಪ್ ಕೂಡ ಕಾರ್ಯನಿರ್ವಹಿಸುತ್ತಿದ್ದು, ಮಿಡಲ್ ಈಸ್ಟ್, ಯುರೋಪ್, ಏಷ್ಯಾ, ಆಫ್ರಿಕಾ ಹಾಗೂ ಉತ್ತರ ಅಮೆರಿಕಾದ ಅಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್ ಗಳಲ್ಲಿ ಲಕ್ಷಾಂತರ ಬಾರಿ ಡೌನ್ಲೋಡ್ ಮಾಡಲಾಗಿದೆ. IANS ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಆಪ್ ಶ್ರೇಯಾಂಕ ಹಾಗೂ ಸಂಶೋಧನಾ ಸಂಸ್ಥೆಯಾಗಿರುವ ಆಪ್ ಎನಿ ಪ್ರಕಾರ ಕಳೆದ ವಾರ ಅಮೆರಿಕಾದಲ್ಲಿ ಅತಿ ಹೆಚ್ಚು ಡೌನ್ಲೋಡ್ ಗೊಳಗಾದ ಸಾಮಾಜಿಕ ಮಾಧ್ಯಮಗಳ ಪಟ್ಟಿಯಲ್ಲಿ ಟುಟಾಕ್ ಮುಂಚೂಣಿಯಲ್ಲಿತ್ತು ಎನ್ನಲಾಗಿದೆ.

ನ್ಯೂಯಾರ್ಕ್ ಟೈಮ್ಸ್ ನಡೆಸಿರುವ ಒಂದು ತನಿಖೆಯ ಪ್ರಕಾರ, ಟುಟಾಕ್ ಹೆಸರಿನ ಆಪ್ ಅನ್ನು ಬ್ರಿಜ್ ಹೋಲ್ಡಿಂಗ್ ಹೆಸರಿನ ಕಂಪನಿ ಸಿದ್ಧಪಡಿಸಿದ್ದು, ಇದು ಅಬುದಾಬಿಯಲ್ಲಿರುವ ಸೈಬರ್ ಇಂಟೆಲಿಜೆನ್ಸ್ ಹಾಗೂ ಹ್ಯಾಕಿಂಗ್ ಕಂಪನಿಯಾಗಿರುವ ಡಾರ್ಕ್ ಮ್ಯಾಟರ್ ಜೊತೆ ಸಂಪರ್ಕ ಹೊಂದಿದೆ ಎನ್ನಲಾಗಿದೆ. ಈಗಾಗಲೇ ಡಾರ್ಕ್ ಮ್ಯಾಟರ್ ಕಂಪನಿ ಸೈಬರ್ ಕ್ರೈಂ ನಡೆಸಿದ ಆರೋಪದಡಿ FBI ತನಿಖೆಯನ್ನು ಎದುರಿಸುತ್ತಿದೆ.

Trending News