ನವದೆಹಲಿ: ರೈತ ಪ್ರತಿಭಟನೆ, ಕರ್ನಾಟಕದಲ್ಲಿ ಮೀಸರಾತಿ ಹೋರಾಟ ಸೇರಿದಂತೆ ದೇಶದ ಉದ್ದಗಲಕ್ಕೂ ಒಂದಲ್ಲೂ ಒಂದು ಪ್ರತಿಭಟನೆಗಳು ನಡೆಯುತ್ತಿದೆ. ಇದರ ನಡುವೆ ಭಾರತ್ ಬಂದ್, ರಸ್ತೆ ತಡೆ, ರೈಲು ತಡೆ ಕೂಡ ನಡೆಯುತ್ತಿದೆ. ಇದರ ನಡುವೆ ಇದೀಗ ವರ್ತಕರ ಸಂಘಘಟನೆ ಫೆಬ್ರವರಿ 26ಕ್ಕೆ ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ ಬಂದ್ ಮಾಡಲು ಕರೆ ನೀಡಿದೆ.
ಜಿಎಸ್‌ಟಿ(ತೆರಿಗೆ)ಯಲ್ಲಿ ಕೆಲ ತಿದ್ದುಪಡಿಗೆ ಆಗ್ರಹಿಸಿ ವರ್ತಕರ ಸಂಘಟನೆ ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ(commercial markets)ಬಂದ್ ಮಾಡಲು ಕರೆ ನೀಡಿದೆ. ಜಿಎಸ್‌ಟಿ ಅಭಿವೃದ್ಧಿಗೆ ಪೂರಕವಾಗಿರಬೇಕು. ಆದರೆ ಸದ್ಯ ಜಿಎಸ್‌ಟಿಯಲ್ಲಿನ ಕೆಲ ನಿಯಮಗಳಿಗೆ ತಿದ್ದುಪಡಿ ಅವಶ್ಯಕತೆ ಇದೆ. ಕೆಲ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ವರ್ತಕರ ಸಂಘಟನೆ ಆಗ್ರಹಿಸಿದೆ.
Senior Citizen: ಹಿರಿಯ ನಾಗರಿಕರಿಗೆ ಶಾಕಿಂಗ್ ನ್ಯೂಸ್: ಜುಲೈನಿಂದ ಟಿಡಿಎಸ್ ದರ ಹೆಚ್ಚಳ..!
ಜಿಎಸ್‌ಟಿ ಪುನರ್ ಪರಿಶೀಲನೆಗಾಗಿ ವರ್ತಕರ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಫೆಬ್ರವರಿ 26 ರಂದು ಬಂದ್(Bharat Bandh) ಮೂಲಕ ಬಿಸಿ ಮುಟ್ಟಿಸಲಿದೆ. ಅಖಿಲ ಭಾರತ ಸರಕು ಸಾಗಾಣೆ ಸೇರಿದಂತೆ ಕಲ ವರ್ತಕರ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿದೆ. ಹೀಗಾಗಿ ರಾಜ್ಯ ಹಾಗೂ ದೇಶಾದ್ಯಂತ ವಾಣಿಜ್ಯ ಮಾರುಕಟ್ಟೆ ಸಂಪೂರ್ಣ ಬಂದ್ ಆಗಲಿದೆ.
Baba Ramdev: ಕೊರೊನಾ ನಿಗ್ರಹಕ್ಕೆ ಔಷಧಿ ಅಭಿವೃದ್ಧಿಪಡಿಸಿದ 'ಪತಂಜಲಿ'..!
ನಗರ, ರಾಜ್ಯ ಹಾಗೂ ದೇಶ್ಯಾದ್ಯಂತ ವಾಣಿಜ್ಯ ಮಾರುಕಟ್ಟೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವರ್ತಕರ ಸಂಘಟನೆ ಹೇಳಿದೆ.
Jobs in Indian Navy : ಜಸ್ಟ್ SSLC ಪಾಸ್ ಸಾಕು.! ನಿಮ್ಮ ಹೆಮ್ಮೆಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣಾವಕಾಶ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.