ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಹತ್ಯೆ: ವರದಿ

ಇದುವರೆಗೂ ಜಮ್ಮು-ಕಾಶ್ಮೀರದಲ್ಲಿ ನಡೆಸಿರುವ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು 66 ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. 

Last Updated : Apr 22, 2019, 07:26 PM IST
ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಹತ್ಯೆ: ವರದಿ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಸಿಆರ್​​ಪಿಎಫ್ ಯೋಧರ ಹತ್ಯಾಕಾಂಡಕ್ಕೆ ಕಾರಣವಾದ ಉಗ್ರರ ಆತ್ಮಹತ್ಯಾ ಬಾಂಬ್ ದಾಳಿಯ ಬಳಿಕ ಭದ್ರತಾ ಪಡೆಗಳು  ಜೈಷ್​​-ಎ-ಮೊಹಮದ್​ ಉಗ್ರ ಸಂಘಟನೆಯ ಎಲ್ಲಾ ಉಗ್ರರನ್ನು ಹೊಡೆದುರುಳಿಸಿದೆ ಎನ್ನಲಾಗಿದೆ.

ಇದುವರೆಗೂ ಜಮ್ಮು-ಕಾಶ್ಮೀರದಲ್ಲಿ ನಡೆಸಿರುವ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು 66 ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಇವರಲ್ಲಿ 27 ಉಗ್ರರು ಪಾಕಿಸ್ತಾನದ ಜೈಷ್​​-ಎ-ಮೊಹಮದ್​ ಸಂಘಟನೆಗೆ ಸೇರಿದವರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ, ಕಳೆದ ಕೆಲ ವರ್ಷಗಳಲ್ಲಿ ಭದ್ರತಾ ಪಡೆ ಹತ್ಯೆ ಮಾಡಿದ ಜೈಶ್ ಸಂಘಟನೆಯ ಕೆಲವು ಕಮಾಂಡರ್ ಗಳ ಭಾವಚಿತ್ರಗಳನ್ನೂ ಬಿಡುಗಡೆ ಮಾಡಲಾಗಿದೆ.

ಪುಲ್ವಾಮಾ ದಾಳಿ ನಡೆಸಿದ 45 ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಜೈಷೆ ಸಂಘಟನೆಯ ಇಡೀ ತಂಡವನ್ನು ನಿರ್ನಾಮ ಮಾಡಲಾಗಿದೆ. ಕೆಲ ಉಗ್ರರ ಬಂಧನ, ಕೆಲ ಉಗ್ರರ ಹತ್ಯೆ ಮತ್ತೆ ಕೆಲ ಉಗ್ರರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಶ್ಮೀರ ಕಣಿವೆಯಲ್ಲಿ ಜೈಷೆ ಸಂಘಟನೆಯ ಬಗ್ಗೆ ಅನುಕಂಪ ಹೊಂದಿರುವ ಸುಮಾರು 40 ಮಂದಿಯಿಂದ ಮಾಹಿತಿ ಪಡೆದು ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ನಿಸಾರ್​ ಅಹಮದ್​ ತಂತ್ರೆ ಮತ್ತು ಸಾಜದ್​ ಎಂಬಿಬ್ಬರು ಉಗ್ರರರು ಸದ್ಯಕ್ಕೆ NIA ವಶದಲ್ಲಿದ್ದಾರೆ.

More Stories

Trending News