ವೈರಲ್ ಫೋಟೋ: 80 ವರ್ಷ ವೃದ್ಧನ ಕೈ-ಕಾಲುಗಳನ್ನು ಹಗ್ಗಗಳಿಂದ ಕಟ್ಟಿಹಾಕಿರುವ ಸೊಸೆ

ಛಾಯಾಚಿತ್ರಗಳು ವೈರಲ್ ಆದ ನಂತರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.  

Last Updated : Apr 7, 2018, 10:12 AM IST
ವೈರಲ್ ಫೋಟೋ: 80 ವರ್ಷ ವೃದ್ಧನ ಕೈ-ಕಾಲುಗಳನ್ನು ಹಗ್ಗಗಳಿಂದ ಕಟ್ಟಿಹಾಕಿರುವ ಸೊಸೆ title=

ನವದೆಹಲಿ: ಮಾನವೀಯತೆಯು ಜನರೊಳಗೆ ಅಂತ್ಯಗೊಳ್ಳುತ್ತಿದೆ ಎಂಬುದು ನಿಜವೇ? ಅಂತಹ ಒಂದು ಘಟನೆ ಉತ್ತರ ಪ್ರದೇಶದ ಭಡೋಹಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಂತಹ ಮುಜುಗರದ ಕೆಲವು ಚಿತ್ರಗಳು ಇತ್ತೀಚಿಗೆ ಭಡೋಹಿ ಜಿಲ್ಲೆಯ ಸೋಶಿಯಲ್ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಛಾಯಾಚಿತ್ರಗಳಲ್ಲಿ, 80 ವರ್ಷ ವಯಸ್ಸಿನ ವೃದ್ಧನಿಗೆ ಹಿಂಸೆ ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಆತನ ಸೊಸೆ ವೃದ್ಧನ ಕೈ-ಕಾಲುಗಳನ್ನು ಹಗ್ಗಗಳಿಂದ ಕಟ್ಟಿಹಾಕಿರುವ ಅಮಾನವೀಯ ದೃಶ್ಯ ಅದು. ಈ ಪ್ರಕರಣ ದುನಿಯಾಪುರ್ ಗ್ರಾಮದ ಔರಾಯಿಯ ಕೊಟ್ವಾಲಿಯಿಂದ ಬಂದಿದೆ. 

ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಎಸ್ ಪಿ ವಿಚಾರಣೆಗೆ ಆದೇಶಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. 

ವೃದ್ಧ ಮಾನಸಿಕ ಅಸ್ವಸ್ಥ
ಮಾಹಿತಿ ಪ್ರಕಾರ, ದುನಿಯಾಪುರ್ ನಿವಾಸಿಯಾಗಿರುವ ಜಗನ್ ತಿವಾರಿ, 80 ವರ್ಷದ ವೃದ್ಧ ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದೆ. ಮಾವನ ವಿದ್ವಂಸಕತೆಯಿಂದ ತೊಂದರೆಗೀಡಾಗಿ ಬೇಸತ್ತ ಸೊಸೆ ಮಾವನ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿದ್ದಾಳೆ.

ಸ್ಥಳೀಯರು ತಿಳಿಸಿರುವ ಮಾಹಿತಿ ಪ್ರಕಾರ, ಸೊಸೆಯು ತನ್ನ ಮಕ್ಕಳು ಹಾಗೂ ಮಾವನೊಂದಿಗೆ ವಾಸವಿದ್ದು, ಕುಟುಂಬದ ಉಳಿದವರು ಹಾಗೂ ಆಕೆಯ ಪತಿ(ವೃದ್ಧನ ಹಿರಿಯ ಮಗ) ದೂರದ ಊರಿನಲ್ಲಿ ವಾಸಿಸುತ್ತಿದ್ದಾರೆ. ವೃದ್ಧ ಜಗನ್ ತಿವಾರಿ ತನ್ನ ಮಾನಸಿಕ ಅಸ್ವಸ್ಥತೆಯ ಕಾರಣ ಕೆಲೆವೊಮ್ಮೆ ಇದ್ದಕ್ಕಿದ್ದಂತೆ ಕೈಗೆ ಸಿಕ್ಕಿದ್ದನ್ನು ಎಸೆಯುವುದು, ಗಲಾಟೆ ಮಾಡುವುದನ್ನು ಮಾಡುವುದರಿಂದ ಆತನನ್ನು ಹಾಗೆ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಪೊಲೀಸರು ಛಾಯಾಚಿತ್ರಗಳನ್ನು ತೋರಿಸಿ ಘಟನೆಯ ಬಗ್ಗೆ  ಆಕೆಯನ್ನು ಪ್ರಶ್ನಿಸಿದಾಗ ಆಕೆ ಅದನ್ನು ಒಪ್ಪಿಕೊಂಡಳು.  ಆದರೆ ಆ ವೃದ್ಧನೊಂದಿಗೆ ಮಾತನಾಡುವುದನ್ನು ನಿರಾಕರಿಸಿದರು ಎನ್ನಲಾಗಿದೆ.

ಆಕೆಯ ಗಂಡ ಮತ್ತು ಮನೆಯ ಇತರ ಜನರು ಕೂಡ ಹೊರಗೆ ವಾಸಿಸುತ್ತಾರೆ. ಮಾನಸಿಕ ಸ್ಥಿತಿಯ ಕೊರತೆಯಿಂದಾಗಿ, ಅವರು ಮನೆಯಿಂದ ಹೊರಗೆ ಹೋಗುತ್ತಾರೆ ಮತ್ತು ಅನೇಕ ಬಾರಿ ಅವರು ಮನೆಯಲ್ಲಿರುವ ವಸ್ತುಗಳನ್ನು ನಾಶ ಮಾಡುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು, ಅವರನ್ನು ಈ ರೀತಿ ಬಂಧಿಸಿರುವುದಾಗಿ ಸೊಸೆ ಪೊಲೀಸರಿಗೆ ತಿಳಿಸಿದ್ದಾರೆ.

Trending News