/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಆಂಧ್ರಪ್ರದೇಶ: ‘ನಿಜವಾದ ಪ್ರೀತಿಗೆ ಎಂದಿಗೂ ಸಾವಿಲ್ಲ’ ಎಂಬುದಕ್ಕೆ ಆಂಧ್ರಪ್ರದೇಶ(Andhra Pradesh)ದ ಪ್ರಕಾಶಂ ಜಿಲ್ಲೆಯ ಮಹಿಳೆಯೊಬ್ಬರು ನಿದರ್ಶನವಾಗಿದ್ದಾರೆ. ತನ್ನ ಮೃತ ಪತಿಯ ನೆನಪಿಗಾಗಿ ಇವರು ದೇವಸ್ಥಾನವನ್ನೇ ನಿರ್ಮಿಸಿದ್ದು, ಪ್ರತಿದಿನವೂ ಗಂಡನ ಪ್ರತಿಮೆಗೆ ಪೂಜೆ ನೆರವೇರಿಸುತ್ತಿದ್ದಾರೆ.

ಹೌದು, ಮಹಿಳೆಯೊಬ್ಬರು ಅಮೃತಶಿಲೆಯಲ್ಲಿ ಪತಿಯ ಪ್ರತಿಮೆ(Husband Idol) ಸ್ಥಾಪಿಸಿ ಅದಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ವರದಿಗಳ ಪ್ರಕಾರ ಪ್ರಕಾಶ್ ಅಂಕಿರೆಡ್ಡಿ ಮತ್ತು ಪದ್ಮಾವತಿ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಳೆದ 13 ವರ್ಷಗಳಿಂದ ಸ್ಥಳೀಯ ದೇವಸ್ಥಾನವೊಂದರಲ್ಲಿ ಪ್ರಕಾಶ್ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್ ಕಳೆದ 4 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಅವರು ಸಾವನ್ನಪ್ಪಿದ್ದರು. ಪತಿ ಕಳೆದುಕೊಂಡ ಪತ್ನಿ ಪದ್ಮಾವತಿಯವರಿಗೆ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ: Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು?

ಪತಿಯ ಅಕಾಲಿಕ ಮರಣದಿಂದ ಪದ್ಮಾವತಿ ಕಂಗೆಟ್ಟಿದ್ದರು. ಪ್ರಕಾಶ್ ನಿಧನದ ನಂತರವೂ ಅವರು ಪತಿಯ ನೆನಪಿನಲ್ಲಿಯೇ ದಿನದೂಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ದಿವಂಗತ ಪತಿ ಕನಸಿನಲ್ಲಿ ಬಂದು ತನಗಾಗಿ ಒಂದು ದೇವಾಲಯ(Temple) ನಿರ್ಮಾಣ ಮಾಡಬೇಕೆಂದು ಕೆಳಿಕೊಂಡಿದ್ದರಂತೆ. ಹೀಗಾಗಿ ತನ್ನ ಗಂಡನ ಸ್ನೇಹಿತನಾದ ತಿರುಪತಿ ರೆಡ್ಡಿ ಮತ್ತು ಅವರ ಪುತ್ರ ಶಿವಶಂಕರ ರೆಡ್ಡಿಯವರ ಸಹಾಯ ಪಡೆದು ದೇವಾಲಯ ನಿರ್ಮಾಣ ಮಾಡಿಯೇಬಿಟ್ಟಿದ್ದಾರೆ. ಪತಿಯ ಆಸೆ ನೆರವೇರಿಸಲು ದೇಗುಲ ನಿರ್ಮಾಣ ಮಾಡಿರುವ ಪದ್ಮಾವತಿ ಅದರಲ್ಲಿ ಪತಿಯ ವಿಗ್ರಹ ಸ್ಥಾಪಿಸಿದ್ದಾರೆ. ಪತಿಯೇ ಪರದೈವ ಎಂದುಕೊಂಡು ಆ ವಿಗ್ರಹಕ್ಕೆ ನಿತ್ಯ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಪತಿಯ ಜನ್ಮದಿನ ಸೇರಿ ವಿಶೇಷ ದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಭಿಶೇಷಕಗಳನ್ನು ನಡೆಸಲಾಗುತ್ತದೆ ಎಂದು ಪದ್ಮಾವತಿ ಹೇಳಿಕೊಂಡಿದ್ದಾರೆ.  ಪ್ರತಿ ಹುಣ್ಣಿಮೆಗೂ ವಿಶೇಷ ಪೂಜೆ(Special Pooja) ನೆರವೇರಿಸಿ ಹಸಿದು ಬಂದವರಿಗೆ, ಬಡವರಿಗಾಗಿ ದೇಗುಲದಲ್ಲಿ ಅನ್ನಸಂತರ್ಪಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ‘ನನ್ನ ಪತಿ ಜೀವಂತವಾಗಿದ್ದಾಗಲೂ ಅವರನ್ನು ನಾನು ದೇವರಂತೆ ಕಾಣುತ್ತಿದ್ದೆ. ಪೂಜೆ ಸೇರಿ ಇತರ ಸೇವೆಗಳಿಗೆ ನಮ್ಮ ಪುತ್ರ ಶಿವಶಂಕರ್ ರೆಡ್ಡಿ  ಸಹಾಯ ಮಾಡುತ್ತಿದ್ದಾನೆ. ನೆರೆಹೊರೆಯ ಜನರು ಕೂಡ ನಮ್ಮ ದೇವಾಲಯಕ್ಕೆ ಭೇಟ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ’ ಅಂತಾ ಪದ್ಮಾವತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಈ ರಾಜ್ಯದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ: ಕಾರಣ ಇಲ್ಲಿದೆ…

ಶಾಶ್ವತವಾದ ಪ್ರೀತಿ ಮತ್ತು ಭಕ್ತಿಯ ಈ ಸಂಗತಿ ಅನೇಕ ನೆಟಿಜನ್‌ಗಳ ಮನಕಲಕಿದೆ. ಅನೇಕರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಇಂತಹ ಆದರ್ಶ ದಂಪತಿಯ ಪುತ್ರನಾಗಿ ಜನಿಸಿದ್ದು ನನ್ನ ಪುಣ್ಯ ಅಂತಾ ಪದ್ಮಾವತಿಯವರ ಪುತ್ರ ಶಿವಶಂಕರ್ ರೆಡ್ಡಿ ಹೇಳಿಕೊಂಡಿದ್ದಾರೆ. ಇದೇ ರೀತಿಯ ಘಟನೆಯಲ್ಲಿ ಕರ್ನಾಟಕ(Karnataka) ಮೂಲದ ಉದ್ಯಮಿಯೊಬ್ಬರು ತಮ್ಮ ದಿವಂಗತ ಪತ್ನಿಯ ಸವಿನೆನಪಿಗಾಗಿ ಮೇಣದ ಪತ್ರಿಮೆ ನಿರ್ಮಿಸಿ ಸುದ್ದಿಯಾಗಿದ್ದರು. ಹೊಸದಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಅಮ್ಮನಿಲ್ಲದ ಕೊರಗು ಕಾಡಬಾರದೆಂದು ಪತ್ನಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Section: 
English Title: 
Andhra Woman Builds Temple For Her Dead Husband, Performs Puja Everyday
News Source: 
Home Title: 

ಮೃತ ಪತಿಯ ನೆನಪಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಮಹಿಳೆ: ಪ್ರತಿದಿನ ನಡೆಯುತ್ತೆ ಪೂಜೆ..!

ಮೃತ ಪತಿಯ ನೆನಪಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಮಹಿಳೆ: ಪ್ರತಿದಿನ ನಡೆಯುತ್ತೆ ಪೂಜೆ..!
Caption: 
ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ ಮಹಿಳೆ (Photo Courtesy: ANI)
Yes
Is Blog?: 
No
Tags: 
Facebook Instant Article: 
Yes
Highlights: 

4 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದ ಪತಿ ಪ್ರಕಾಶ್ ಅಂಕಿರೆಡ್ಡಿ

ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿರುವ ಪತ್ನಿ ಅವರ ಪ್ರತಿಮೆಗೆ ನಿತ್ಯ ಪೂಜೆ ಮಾಡುತ್ತಿದ್ದಾರೆ

ಪತಿಯ ಜನ್ಮದಿನ ಸೇರಿ ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಹಾಗೂ ಅಭಿಶೇಷಕಗಳನ್ನು ನಡೆಸಲಾಗುತ್ತದೆ

Mobile Title: 
ಮೃತ ಪತಿಯ ನೆನಪಿಗಾಗಿ ದೇವಸ್ಥಾನವನ್ನೇ ನಿರ್ಮಿಸಿದ ಮಹಿಳೆ: ಪ್ರತಿದಿನ ನಡೆಯುತ್ತೆ ಪೂಜೆ..!
Puttaraj K Alur
Publish Later: 
No
Publish At: 
Saturday, August 14, 2021 - 15:03
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
1
Is Breaking News: 
No