ಮುಂಬರುವ ದಿನಗಳಲ್ಲಿ ಮತ್ತೊಂದು ಫಿಲ್ಮ್ ತೋರಿಸುತ್ತೇವೆ- ಪ್ರಧಾನಿಗೆ ಮಮತಾ ಟಾಂಗ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಂಗಭೂಮಿ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಾ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 'ದಿ ಡಿಸಾಷ್ಟ್ರಸ್ ಪ್ರೈಮ್ ಮಿನಿಸ್ಟರ್' ಎನ್ನುವ ಸಿನಿಮಾ ಬರಲಿದೆ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರಿದ್ದಾರೆ. 

Updated: Jan 11, 2019 , 04:43 PM IST
ಮುಂಬರುವ ದಿನಗಳಲ್ಲಿ ಮತ್ತೊಂದು ಫಿಲ್ಮ್ ತೋರಿಸುತ್ತೇವೆ- ಪ್ರಧಾನಿಗೆ ಮಮತಾ ಟಾಂಗ್

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಂಗಭೂಮಿ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಾ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 'ದಿ ಡಿಸಾಷ್ಟ್ರಸ್ ಪ್ರೈಮ್ ಮಿನಿಸ್ಟರ್' ಎನ್ನುವ ಸಿನಿಮಾ ಬರಲಿದೆ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರಿದ್ದಾರೆ. 

ಮಮತಾ ಬ್ಯಾನರ್ಜಿಯವರ ಹೇಳಿಕೆಯು ಪ್ರಮುಖವಾಗಿ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದ ವಿಮರ್ಶೆ ಹಿನ್ನಲೆಯಲ್ಲಿ ಬಂದಿದೆ.ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತು ಅವರ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಪುಸ್ತಕವನ್ನು ಆದರಿಸಿ ನಿರ್ಮಿಸಲಾಗಿರುವ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಕುರಿತಾಗಿ ಬಂದಿರುವ ವಿಮರ್ಶೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸುತ್ತಾ ಮುಂಬರುವ ದಿನಗಳಲ್ಲಿ ಪ್ರಧಾನಿ ಮೋದಿ ಕುರಿತಾಗಿ ಮತ್ತೊಂದು ಸಿನಿಮಾ ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.

"ಯಾರು ಚುನಾವಣೆಗೂ ಮೊದಲು ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಮೂಲಕ ನಾಟಕ ಮಾಡುತ್ತಿದ್ದಾರೋ ಅವರು ಮುಂದಿನ ದಿನಗಳಲ್ಲಿ ಮತ್ತೊಂದು ಸಿನಿಮಾ ನೋಡುತ್ತಾರೆ ಅದೇನೆಂದರೆ 'ದಿ ಡಿಸಾಷ್ಟ್ರಸ್ ಪ್ರೈಮ್ ಮಿನಿಸ್ಟರ್' " ಎಂದು  ಮಾಮತಾ ಬ್ಯಾನರ್ಜೀ ಪ್ರಧಾನಿ ವಿರುದ್ದ ಕಿಡಿಕಾರಿದ್ದಾರೆ.