ರಾಜೋರಿ: ಭಿಕ್ಷೆ ಬೇಡುತ್ತಿದ್ದ ವೃದ್ಧ ಮಹಿಳೆಯ ಗುಡಿಸಿಲಿನ ಕಸದ ಬುಟ್ಟಿಯಲ್ಲಿ ಲಕ್ಷಾಂತರ ರೂ. ಪತ್ತೆಯಾಗಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ರಾಜೌರಿ, ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರ ಗುಡಿಸಲಿನಲ್ಲಿ ಸುಮಾರು 2,60,000 ರೂ. ಮೊತ್ತದ ಹಣ ಪತ್ತೆಯಾಗಿದೆ.
ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿಯ ನಿವಾಸಿಯಾಗಿರುವ ವೃದ್ಧ ಮಹಿಳೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇತ್ತೀಚಿನ ಪರಿಸ್ಥಿತಿಯಿಂದಾಗಿ ಸ್ಥಳೀಯ ಆಡಳಿತವು ಆ ಮಹಿಳೆಯನ್ನು ವೃದ್ಧಾಶ್ರಮಕ್ಕೆ ಸೇರಿಸಲೆಂದು ಹುಡುಕಿ ಬಂದಾಗ ಆಕೆಯ ಗುಡಿಸಿಲಿನಲ್ಲಿ ಸುಮಾರು 2,60,000 ರೂ. ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ- Virat-Anushka: ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದ ಅನುಷ್ಕಾ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ
ಈ ವೃದ್ಧ ಮಹಿಳೆಯನ್ನು ವೃದ್ಧಾಶ್ರಮಕ್ಕೆ (Old Age Home) ಕರೆದೊಯ್ಯಲೆಂದು ಬುಧವಾರ ಪುರಸಭೆಯ ನೌಕರರ ತಂಡ ಈಕೆಯ ಗುಡಿಸಿಲಿನ ಬಳಿ ಬಂದಾಗ ಈ ಹಣ ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ವಾರ್ಡ್ ಸದಸ್ಯೆ, ಆ ವೃದ್ಧ ಮಹಿಳೆ ಇದೇ ಗುಡಿಸಿಲಿನಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದರು. ನಿನ್ನೆ ತಂಡವು ರಾಜೌರಿಯಿಂದ ಅವರನ್ನು ವೃದ್ಧಾಶ್ರಮಕ್ಕೆ ಕರೆದೊಯ್ಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- Jammu Kashmir- ಪುಲ್ವಾಮಾದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು
ಪುರಸಭೆಯ ನೌಕರರ ತಂಡ ಬುಧವಾರ ಈ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಕರೆದೊಯ್ದಿತು. ಮಹಿಳೆ ಕಳೆದ 30 ವರ್ಷಗಳಿಂದ ರಾಜೌರಿಯ ನೌಶೇರಾ ಸೆಕ್ಟರ್‌ನಲ್ಲಿ ವಾಸವಾಗಿದ್ದರು. ನಿನ್ನೆ ತಂಡವು ರಾಜೌರಿಯಿಂದ ಅವರನ್ನು ವೃದ್ಧಾಶ್ರಮಕ್ಕೆ ಕರೆದೊಯ್ಯಿತು. ಸದ್ಯ ವೃದ್ಧ ಮಹಿಳೆಯನ್ನು ರಾಜೌರಿಯಲ್ಲಿ ಸ್ಥಳೀಯ ಆಡಳಿತ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಇರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.