Virat-Anushka: ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದ ಅನುಷ್ಕಾ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರು ಅವರ ಸಂಗಾತಿಯನ್ನು ಜೊತೆಗೆ ಕರೆತರಲು ಯುಕೆ ಸರ್ಕಾರ ಬಿಸಿಸಿಐಗೆ ಅನುಮತಿ ನೀಡಿತ್ತು.

Written by - Yashaswini V | Last Updated : Jun 3, 2021, 08:42 AM IST
  • ಅನುಷ್ಕಾ ಕೂಡ ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದರು
  • ಟೀಮ್ ಇಂಡಿಯಾ ಸುಮಾರು 4 ತಿಂಗಳು ಇಂಗ್ಲೆಂಡ್‌ನಲ್ಲಿ ಉಳಿಯಲಿದೆ
  • ಟೀಮ್ ಇಂಡಿಯಾ ಜೂನ್ 3 ರಂದು ಲಂಡನ್ ತಲುಪಲಿದೆ
Virat-Anushka: ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದ ಅನುಷ್ಕಾ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋ title=
ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದ ಅನುಷ್ಕಾ

ನವದೆಹಲಿ: ಟೀಮ್ ಇಂಡಿಯಾ ಆಟಗಾರರು ಸುಮಾರು ಒಂದು ತಿಂಗಳ ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೂಡ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ (England Tour) ಭಾರತೀಯ ಕ್ರಿಕೆಟಿಗರನ್ನು ಅವರ ಹೆಂಡತಿಯರೊಂದಿಗೆ ಕರೆತರಲು ಯುಕೆ ಸರ್ಕಾರ ಬಿಸಿಸಿಐಗೆ ಅನುಮತಿ ನೀಡಿತ್ತು.

ಅನುಷ್ಕಾ ಕೂಡ ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದರು:
ಸೋಷಿಯಲ್ ಮೀಡಿಯಾದಲ್ಲಿ (Social Media) ಒಂದು ಚಿತ್ರ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಇಂಗ್ಲೆಂಡ್‌ಗೆ ತೆರಳುತ್ತಿದ್ದಾರೆ. ಅವರ ಮಗಳು ವಮಿಕಾ (Vamika) ಕೂಡ ಈ ದಂಪತಿಯೊಂದಿಗೆ ಕಾಣಿಸಿಕೊಂಡಿದ್ದಾಳೆ. ಟೀಮ್ ಇಂಡಿಯಾ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಿದೆ. ಆಟಗಾರರು ಮೊದಲು ಲಂಡನ್ ತಲುಪಲಿದ್ದಾರೆ.

ಇದನ್ನೂ ಓದಿ- ICC ODI World Cup:ಜಾಗತಿಕ ಕ್ರಿಕೆಟ್ ಸಂಸ್ಥೆಯಿಂದ ಇಲ್ಲೊಂದು ಮಹತ್ವದ ಪ್ರಕಟಣೆ

ಟೀಮ್ ಇಂಡಿಯಾ 4 ತಿಂಗಳು ಇಂಗ್ಲೆಂಡ್‌ನಲ್ಲಿ ಉಳಿಯಲಿದೆ:
ಜೂನ್ 18 ರಿಂದ 22 ರವರೆಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಟೀಮ್ ಇಂಡಿಯಾ (Team India) ಆಡಬೇಕಿದೆ. ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಸುಮಾರು ನಾಲ್ಕು ತಿಂಗಳು ಪ್ರವಾಸದಲ್ಲಿರುತ್ತದೆ. ಇದರ ನಂತರ, ಆಗಸ್ಟ್ 4 ರಿಂದ ಭಾರತವು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗುತ್ತದೆ.

ಇದನ್ನೂ ಓದಿ- David Warner On Covid-19 Situation In India:'ಭಾರತದಲ್ಲಿ ವಾಸಿಸುವುದು ಒಂದು ಭಯಾನಕ ಅನುಭವ'

ಟೀಮ್ ಇಂಡಿಯಾ ಜೂನ್ 3 ರಂದು ಲಂಡನ್ ತಲುಪಲಿದೆ:
ಟೀಮ್ ಇಂಡಿಯಾದ ಕ್ರಿಕೆಟಿಗರು ಜೂನ್ 3 ರಂದು ಲಂಡನ್ ತಲುಪಲಿದ್ದಾರೆ. ಅಲ್ಲಿಂದ ತಂಡವು ಸೌತಾಂಪ್ಟನ್‌ಗೆ ಹೋಗಿ ಕ್ವಾರೆಂಟೈನ್‌ನಲ್ಲಿ ಉಳಿಯುತ್ತದೆ. ಟೀಮ್ ಇಂಡಿಯಾ ಸೌತಾಂಪ್ಟನ್‌ನ ಹೋಟೆಲ್‌ನಲ್ಲಿ 10 ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿ ಉಳಿಯಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News