Zee Exclusive: ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗಳೇ ದಂಡ ಪಾವತಿಸಬೇಕು: ಆರ್‌ಬಿಐ

ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಹಲವು ಬಾರಿ ನೀವೂ ನಿರಾಶೆಗೊಂಡಿರುವಿರೇ? 

Last Updated : Jun 14, 2019, 04:17 PM IST
Zee Exclusive: ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗಳೇ ದಂಡ ಪಾವತಿಸಬೇಕು: ಆರ್‌ಬಿಐ  title=

ನವದೆಹಲಿ: ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ಹಲವು ಬಾರಿ ನೀವೂ ನಿರಾಶೆಗೊಂಡಿರುವಿರೇ? ಇನ್ಮುಂದೆ ದೀರ್ಘಕಾಲದವರೆಗೆ ಬ್ಯಾಂಕುಗಳ ಎಟಿಎಂಗಳು ನಗದುರಹಿತವಾಗಿರುವುದಿಲ್ಲ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಕಠಿಣ ಸೂಚನೆಗಳನ್ನು ನೀಡಿದೆ. ಜೀ ಮೀಡಿಯಾಗೆ ಲಭಿಸಿರುವ ಮಾಹಿತಿಯ ಪ್ರಕಾರ, ಎಟಿಎಂನಲ್ಲಿ ಮೂರು ಗಂಟೆಗಳವರೆಗೆ ಹಣವಿಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗುವುದು ಎಂದು ಆರ್‌ಬಿಐ ಸೂಚನೆ ನೀಡಿದೆ.

ಹಲವು ದಿನಗಳವರೆಗೆ ಎಟಿಎಂನಲ್ಲಿ ಹಣ ಇರುವುದೇ ಇಲ್ಲ ಎಂದು ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ದೂರುಗಳು ಕೇಳಿ ಬಂದಿವೆ.  ಇದರಿಂದಾಗಿ ಸಣ್ಣ ಪ್ರಮಾಣದ ಹಣ ಡ್ರಾ ಮಾಡಲೂ ಕೂಡ ಜನರು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ.

ಎಟಿಎಂಗಳಿಂದ ನಗದು ಸಂವೇದಕ(ಸೆನ್ಸಾರ್) ಮಾಹಿತಿ:
ವಾಸ್ತವವಾಗಿ, ಎಟಿಎಂಗಳಲ್ಲಿರುವ ಸೆನ್ಸಾರ್ ಗಳ ಮೂಲಕ ರಿಯಲ್ ಟೈಮ್ ಆಧಾರದ ಮೇಲೆ ಬ್ಯಾಂಕುಗಳು ನಗದು ಮಾಹಿತಿಯನ್ನು ಪಡೆಯುತ್ತವೆ. ಎಟಿಎಂನಲ್ಲಿನ ನಗದು ತಟ್ಟೆಯಲ್ಲಿ ಎಷ್ಟು ನಗದು ಲಭ್ಯವಿರುತ್ತದೆ ಮತ್ತು ಹಿಂಪಡೆಯುವಿಕೆಯ ಸರಾಸರಿ ಪ್ರಕಾರ ಎಷ್ಟು ಸಂಸ್ಕರಣಾ ಅಗತ್ಯವಿದೆ ಎಂಬುದನ್ನು ಬ್ಯಾಂಕುಗಳು ಕಂಡುಕೊಳ್ಳುತ್ತವೆ. ಆದರೆ ಬ್ಯಾಂಕ್ ಕೆಲವೊಮ್ಮೆ ಅದನ್ನು ನಿರ್ಲಕ್ಷಿಸುತ್ತದೆ. ಇಂತಹ ಸಂದರ್ಭದಲ್ಲಿ ಸಣ್ಣ ಪಟ್ಟಣಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಕರೆಸ್ಪೊಂಡೆಂಟ್ ಮೊರೆಹೊಗಲಾಗುತ್ತದೆ. ಈ ವೇಳೆ ಗ್ರಾಹಕರು ವ್ಯವಹಾರಕ್ಕಾಗಿ ವಿವಿಧ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಮೂರು ಗಂಟೆಗಳ ಕಾಲ ಎಟಿಎಂನಲ್ಲಿ ನಗದು ಲಭ್ಯವಿಲ್ಲದಿದ್ದರೆ, ಬ್ಯಾಂಕುಗಳಿಗೆ ದಂಡ ವಿಧಿಸಲಾಗುವುದು ಎಂದು ಮೂಲಗಳು ಹೇಳಿವೆ. ಈ ನಿಯಮ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ  ಆಯಾ ಪ್ರದೇಶ ಪ್ರಕಾರ ವಿಭಿನ್ನವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಗದು ಹಣದ ದೂರುಗಳು ಬಹಳಷ್ಟು ಇವೆ. 

ಇತ್ತೀಚೆಗೆ, ಎಟಿಎಂ ಇಂಟರ್ಚೇಂಜ್ ಶುಲ್ಕ ರಚನೆಯನ್ನು ಪರಿಶೀಲಿಸಲು ಆರ್‌ಬಿಐ  ಒಂದು ಕಮಿಟಿಯನ್ನು ರಚಿಸಿತು, ಇದು ಎಟಿಎಂ ಶುಲ್ಕಗಳು ಮತ್ತು ಶುಲ್ಕದ ಸಂಪೂರ್ಣ ಗ್ಯಾಮಟ್ ಅನ್ನು ಪರಿಶೀಲಿಸುತ್ತದೆ.

ಎಟಿಎಂ ವ್ಯವಹಾರಗಳಿಗೆ ವೆಚ್ಚ, ಶುಲ್ಕಗಳು ಮತ್ತು ಇಂಟರ್ಚೇಂಜ್ ಶುಲ್ಕದ ಅಸ್ತಿತ್ವದಲ್ಲಿರುವ ರಚನೆಗಳು ಮತ್ತು ಮಾದರಿಗಳನ್ನು ಉನ್ನತ ಮಟ್ಟದ ಕಮಿಟಿ ಪರಿಶೀಲಿಸುತ್ತದೆ. ಕಾರ್ಡ್ ಹೋಲ್ಡರ್ಸ್ ಗಳಿಂದ ಎಟಿಎಂಗಳ ಬಳಕೆಯ ಒಟ್ಟಾರೆ ಮಾದರಿಗಳನ್ನು ಸಹ ಪರಿಶೀಲಿಸುತ್ತದೆ. ಇದರಲ್ಲಿ ಎಟಿಎಂಗಳ ಮೇಲೆ ಬರುತ್ತಿರುವ ದೂರುಗಳು ಮತ್ತು ಇಂಟರ್ಚೇಂಜ್ ಶುಲ್ಕದ ಮೇಲೆ ಪರಿಣಾಮ ಎಲ್ಲವನ್ನೂ ಮೌಲ್ಯಮಾಪನ ಮಾಡುತ್ತದೆ.

ಇದಲ್ಲದೆ, ಇದು ಎಟಿಎಂ ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸುತ್ತದೆ ಮತ್ತು ಸೂಕ್ತವಾದ ಶುಲ್ಕ / ಇಂಟರ್ಚೇಂಜ್ ಶುಲ್ಕ ರಚನೆ ಮಾದರಿಯ ಬಗ್ಗೆ ಶಿಫಾರಸುಗಳನ್ನು ಮಾಡುತ್ತದೆ.
 

Trending News