Anantnag Encounter: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು, ಎನ್ಕೌಂಟರ್ನಲ್ಲಿ ಉಗ್ರನ ಹತ್ಯೆ

Anantnag Encounter: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಎನ್ಕೌಂಟರ್ ನಲ್ಲಿ, ಸೇನಾ ಸಿಬ್ಬಂದಿಯಿಂದ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Written by - Zee Kannada News Desk | Last Updated : Oct 11, 2021, 07:27 AM IST
  • ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ತಡರಾತ್ರಿ ಆರಂಭವಾದ ಎನ್ಕೌಂಟರ್
  • ಎನ್ಕೌಂಟರ್ ನಲ್ಲಿ, ಸೇನಾ ಸಿಬ್ಬಂದಿಯಿಂದ ಒಬ್ಬ ಭಯೋತ್ಪಾದಕನ ಹತ್ಯೆ
  • ಬಂಡಿಪೋರಾದಲ್ಲೂ ಮುಂದುವರಿದ ಎನ್ಕೌಂಟರ್
Anantnag Encounter: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು, ಎನ್ಕೌಂಟರ್ನಲ್ಲಿ ಉಗ್ರನ ಹತ್ಯೆ  title=
#AnantnagEncounterUpdate

ಶ್ರೀನಗರ:  Anantnag Encounter: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ  (Anantnag) ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ತಡರಾತ್ರಿ ಆರಂಭವಾದ ಎನ್ಕೌಂಟರ್ ಇನ್ನೂ ಮುಂದುವರಿದಿದೆ. ಎನ್ಕೌಂಟರ್ ನಲ್ಲಿ, ಸೇನಾ ಸೈನಿಕರು ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ. ಆದರೆ, ಭಯೋತ್ಪಾದಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.

ಸೇನೆ ಮತ್ತು ಪೊಲೀಸರ ಜಂಟಿ ಕ್ರಮ:
ಘಟನೆ ಕುರಿತಂತೆ ಮಾಹಿತಿ ನೀಡಿದ ಕಾಶ್ಮೀರ ವಲಯ ಪೊಲೀಸರು, ಅನಂತನಾಗ್‌ನ  (Anantnag) ಖಗುಂಡ್ ವೆರಿನಾಗ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ದೊರೆತಿದ್ದು, ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಜಂಟಿ ಶೋಧ ತಂಡವು ಶಂಕಿತ ಸ್ಥಳವನ್ನು ಸುತ್ತುವರಿದಾಗ, ಸ್ಥಳದಲ್ಲಿ ಅಡಗಿದ್ದ ಭಯೋತ್ಪಾದಕರು ಶೋಧ ತಂಡದ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ಇದಕ್ಕೆ ಪ್ರತಿಕ್ರಿಯಿಸಿದವು ಮತ್ತು ಎನ್ಕೌಂಟರ್  (Encounter in Anantnag) ಆರಂಭವಾಯಿತು ಎಂದು ಹೇಳಿದರು.

ಇದನ್ನೂ ಓದಿ- Power Crisis: ದೆಹಲಿ ನಂತರ ಮಹಾರಾಷ್ಟ್ರದಲ್ಲಿ ವಿದ್ಯುತ್ ಬಿಕ್ಕಟ್ಟು, ಕಲ್ಲಿದ್ದಲು ಕೊರತೆಯಿಂದ 13 ಘಟಕಗಳು ಬಂದ್

ಬಂಡಿಪೋರಾದಲ್ಲೂ ಮುಂದುವರಿದ ಎನ್ಕೌಂಟರ್ :
ಬಂಡಿಪೋರಾದ ಹಜಿನ್ ಪ್ರದೇಶದ ಗುಂಡ್ಜಹಾಂಗೀರ್ ನಲ್ಲಿ ಭದ್ರತಾ ಪಡೆಗಳು (Security Force) ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆಯುತ್ತಿದೆ. ಎರಡು ಮೂರು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಆದರೂ ಕಾರ್ಯಾಚರಣೆ ಮುಗಿದ ನಂತರ ನಿಜವಾದ ಸಂಖ್ಯೆಯನ್ನು ಹೊರಬೀಳುವ ನಿರೀಕ್ಷೆ ಇದೆ. ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಜಮ್ಮುವಿನಲ್ಲಿ ಶಂಕಿತ ಗೂಢಚಾರನನ್ನು ಬಂಧಿಸಲಾಗಿದೆ:
ಪಾಕಿಸ್ತಾನದಲ್ಲಿ (Pakistan) ನೆಲೆಸಿರುವ ಭಯೋತ್ಪಾದಕರೊಂದಿಗೆ ಪ್ರಮುಖ ಸ್ಥಾಪನೆಗಳ ಮಾಹಿತಿಯನ್ನು ಹಂಚಿಕೊಂಡ ಶಂಕೆಯ ಆಧಾರದ ಮೇಲೆ ಉತ್ತರ ಪ್ರದೇಶದ ವ್ಯಕ್ತಿಯನ್ನು ಜಮ್ಮುವಿನಲ್ಲಿ ಭಾನುವಾರ ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಆತನನ್ನು ಗಾಂಧಿ ನಗರ ಪ್ರದೇಶದಿಂದ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿ ತನ್ನ ಪಾಕಿಸ್ತಾನಿ ಯಜಮಾನರಿಗೆ ಪ್ರಾರ್ಥನಾ ಸ್ಥಳಗಳು ಸೇರಿದಂತೆ ಪ್ರಮುಖ ಸಂಸ್ಥೆಗಳ ವಿಡಿಯೋಗಳನ್ನು ಹಂಚಿಕೊಂಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ಇದನ್ನೂ ಓದಿ- Indian Space Association: ಅಕ್ಟೋಬರ್ 11 ಕ್ಕೆ ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ಗೆ ಪ್ರಧಾನಿ ಮೋದಿ ಚಾಲನೆ

ಇನ್ನೊಂದು ಪ್ರಕರಣದಲ್ಲಿ, ಜಮ್ಮುವಿನ ನಾಗ್ರೋಟಾದಲ್ಲಿ ಪಿಸ್ತೂಲ್ ಕದ್ದ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಮುಸ್ತಾಕ್ ಅಲಿಯಾಸ್ ಗುಂಗಿ ಇತ್ತೀಚೆಗೆ ಮೀರಾನ್ ಸಾಹಿಬ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಂದ ಆಯುಧವನ್ನು ಕಸಿದು ಪರಾರಿಯಾಗಿದ್ದ. ಕದ್ದ ಪಿಸ್ತೂಲ್ ಕೂಡ ಪತ್ತೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News