ಬಿಹಾರದ ಇಬ್ಬರು ಬಾಲಕರ ಬ್ಯಾಂಕ್ ಖಾತೆಯಲ್ಲಿ 900 ಕೋಟಿ ರೂ ಹಣ ಜಮಾ ..!

ಬಿಹಾರದ ಕತಿಹಾರ್ ನ ಹಳ್ಳಿಯ ಇಬ್ಬರು ಶಾಲಾ ಮಕ್ಕಳ ಖಾತೆಯಲ್ಲಿ ರಾತ್ರೋರಾತ್ರಿ ಏಕಾಏಕಿ ಕೋಟ್ಯಂತರ ರೂಪಾಯಿ ಜಮಾ ಆಗಿರುವುದು ಈಗ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

Written by - Zee Kannada News Desk | Last Updated : Sep 16, 2021, 06:02 PM IST
  • ಬಿಹಾರದ ಕತಿಹಾರ್ ನ ಹಳ್ಳಿಯ ಇಬ್ಬರು ಶಾಲಾ ಮಕ್ಕಳ ಖಾತೆಯಲ್ಲಿ ರಾತ್ರೋರಾತ್ರಿ ಏಕಾಏಕಿ ಕೋಟ್ಯಂತರ ರೂಪಾಯಿ ಜಮಾ ಆಗಿರುವುದು ಈಗ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
  • ಅಲ್ಲಿನ ಗ್ರಾಮಸ್ಥರು ತಮಗೂ ಅಂತಹ ಅದೃಷ್ಟ ದೊರೆತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಎಟಿಎಂ ಹಾಗೂ ಬ್ಯಾಂಕ್ ಗಳಿಗೆ ಧಾವಿಸಿದ್ದಾರೆ.
ಬಿಹಾರದ ಇಬ್ಬರು ಬಾಲಕರ ಬ್ಯಾಂಕ್ ಖಾತೆಯಲ್ಲಿ 900 ಕೋಟಿ ರೂ ಹಣ ಜಮಾ ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಬಿಹಾರದ ಕತಿಹಾರ್ ನ ಹಳ್ಳಿಯ ಇಬ್ಬರು ಶಾಲಾ ಮಕ್ಕಳ ಖಾತೆಯಲ್ಲಿ ರಾತ್ರೋರಾತ್ರಿ ಏಕಾಏಕಿ ಕೋಟ್ಯಂತರ ರೂಪಾಯಿ ಜಮಾ ಆಗಿರುವುದು ಈಗ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಅಲ್ಲಿನ ಗ್ರಾಮಸ್ಥರು ತಮಗೂ ಅಂತಹ ಅದೃಷ್ಟ ದೊರೆತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಎಟಿಎಂ ಹಾಗೂ ಬ್ಯಾಂಕ್ ಗಳಿಗೆ ಧಾವಿಸಿದ್ದಾರೆ.ಇಬ್ಬರು ಹುಡುಗರು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದಾರೆ.ಶಾಲಾ ಸಮವಸ್ತ್ರವನ್ನು ಖರೀದಿಸಲು ಮತ್ತು ಸಂಬಂಧಿತ ವೆಚ್ಚಗಳನ್ನು ಪಾವತಿಸಲು ಅವರು ಸರ್ಕಾರದ ಯೋಜನೆಯಡಿ ಸ್ವಲ್ಪ ಹಣವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು.

ಇದನ್ನೂ ಓದಿ: HC To Shilpa Shetty:'ಇದೆಂಥಾ ಮಾನ ಹಾನಿ?', ಮಾಧ್ಯಮ ವರದಿಗಾರಿಕೆ ಪ್ರಶ್ನಿಸಿ HC ತಲುಪಿದ ಶಿಲ್ಪಾ ಶೆಟ್ಟಿಗೆ ಶಾಕ್ ನೀಡಿದ ನ್ಯಾಯಾಲಯ

ತಮ್ಮ ಹೆತ್ತವರೊಂದಿಗೆ, ಅವರು ಹಳ್ಳಿಯ ಸಾರ್ವಜನಿಕ ಅಂತರ್ಜಾಲ ಕೇಂದ್ರಕ್ಕೆ ಹಣ ಬಂದಿದೆಯೇ ಎಂದು ಪರೀಕ್ಷಿಸಲು ಹೋದರು. ಅವರ ಖಾತೆಯನ್ನು ಪರಿಶೀಲಿಸಿದಾಗ, ಅವರ ಖಾತೆಗೆ ಕೋಟಿಗಟ್ಟಲೆ ಹಣ ಜಮಾ ಆಗಿದ್ದನ್ನು ಕಂಡು ಅವರು ಆಘಾತಕ್ಕೊಳಗಾದರು.6 ನೇ ತರಗತಿ ವಿದ್ಯಾರ್ಥಿ ಆಶಿಶ್ ಅವರ ಬಳಿ  6.2  ಕೋಟಿ. ಇನ್ನೊಬ್ಬ ಶಾಲಾ ಬಾಲಕ ಗುರು ಚರಣ್ ವಿಶ್ವಾಸ್ ಖಾತೆಯಲ್ಲಿ ₹ 900 ಕೋಟಿಗೂ ಹೆಚ್ಚು ಹಣ ಇರುವುದನ್ನು ನೋಡಿ ಆಶ್ಚರ್ಯಚಕಿತರಾದರು.ಗ್ರಾಮದ ಮುಖ್ಯಸ್ಥರು ಈ ವಿಷಯವನ್ನು ಧೃಡಪಡಿಸಿದ್ದಾರೆ. ಬ್ಯಾಂಕ್ ವಹಿವಾಟುಗಳನ್ನು ತನಿಖೆ ಮಾಡುತ್ತಿದೆ ಎಂದು ಸ್ಥಳೀಯ ವರದಿಗಳು ಹೇಳುತ್ತವೆ.

ಇದನ್ನೂ ಓದಿ: Watch: Super Dancer Chapter 4 ಸೆಟ್ ಗೆ ಎಂಟ್ರಿ ಕೊಟ್ಟ ಶಿಲ್ಪಾಶೆಟ್ಟಿ ..!

'ಇಬ್ಬರು ಹುಡುಗರ ಬ್ಯಾಂಕ್ ಖಾತೆಗಳಲ್ಲಿ ಒಂದು ದೊಡ್ಡ ಮೊತ್ತವು ಪತ್ತೆಯಾಗಿದೆ ಎಂದು ನನಗೆ ನಿನ್ನೆ ಸಂಜೆ ಮಾಹಿತಿ ಸಿಕ್ಕಿತು.ನಾವು ಅದನ್ನು ತನಿಖೆ ಮಾಡುತ್ತಿದ್ದೇವೆ. ಅದು ಹೇಗೆ ಸಂಭವಿಸಿತು ಎಂಬುದನ್ನು ಪರೀಕ್ಷಿಸಲು ನಾವು ಇಂದು ಬೆಳಿಗ್ಗೆ ಬ್ಯಾಂಕ್ ಶಾಖೆಯನ್ನು ತೆರೆದಿದ್ದೇವೆ. ಶಾಖೆಯ ವ್ಯವಸ್ಥಾಪಕರು ಗಣಕೀಕೃತ ವ್ಯವಸ್ಥೆಯಲ್ಲಿ ಸ್ವಲ್ಪ ದೋಷವಿದೆ ಎಂದು ಹೇಳಿದರು ಎನ್ನಲಾಗಿದೆ. 

ಇದನ್ನೂ ಓದಿ: ಸಾಕ್ಷ್ಯನಾಶ ಹಿನ್ನೆಲೆ ನಟಿ ಶಿಲ್ಪಾ ಶೆಟ್ಟಿ ಪತಿ ಬಂಧನ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ಬೃಹತ್ ತಪ್ಪು ಮೊತ್ತವನ್ನು ಬ್ಯಾಂಕ್ ಗ್ರಾಹಕರಿಗೆ ಕಳುಹಿಸಿದ ಎರಡನೇ ಘಟನೆ ಇದಾಗಿದೆ.ಪಾಟ್ನಾದ ಹೊರವಲಯದಲ್ಲಿರುವ ಹಳ್ಳಿಯಲ್ಲಿರುವ ಒಬ್ಬ ವ್ಯಕ್ತಿ ತಪ್ಪಾಗಿ ತನ್ನ ಖಾತೆಗೆ ಜಮಾ ಆದ ₹ 5 ರೂ ಲಕ್ಷವನ್ನು ಹಿಂದಿರುಗಿಸದ ಕಾರಣ ಜೈಲಿಗೆ ಕಳುಹಿಸಲಾಯಿತು.ಅವರು ಪ್ರಧಾನಿ ನರೇಂದ್ರ ಮೋದಿಯವರು ಕಳುಹಿಸಿದ ಸರ್ಕಾರಿ ಪರಿಹಾರ ಎಂದು ಹೇಳುತ್ತಾ ಆ ವ್ಯಕ್ತಿ ಹಣವನ್ನು ಬ್ಯಾಂಕಿಗೆ ಹಿಂದಿರುಗಿಸಲು ನಿರಾಕರಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News