ಮುಂಬೈ / ದೆಹಲಿ: ಕೊರೊನಾವೈರಸ್ ಸೋಂಕಿನ ಮಧ್ಯೆ ಪಕ್ಷಿ ಜ್ವರವು ದೊಡ್ಡ ಬೆದರಿಕೆಯಾಗಿ ಕಾಡತೊಡಗಿದೆ. ಮಹಾರಾಷ್ಟ್ರದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡ ಬರ್ಡ್ ಫ್ಲೂ ಕಂಡು ಬಂದಿದೆ.
ಮಹಾರಾಷ್ಟ್ರದ ಪರಭಾನಿ ಜಿಲ್ಲೆಯ ಮುರಂಬಾ ಗ್ರಾಮದಲ್ಲಿ ಪಕ್ಷಿ ಜ್ವರಕ್ಕೆ 900 ಕೋಳಿಗಳು ಬಲಿಯಾಗಿವೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ 8 ಪಕ್ಷಿಗಳಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ. ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಪಕ್ಷಿ ಜ್ವರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಇಂದು ಸಂಜೆ 5 ಗಂಟೆಗೆ ತುರ್ತು ಸಭೆ ಕರೆದಿದ್ದಾರೆ.
ಪಕ್ಷಿ ಜ್ವರದ ಹಿಡಿತದಲ್ಲಿ 9 ರಾಜ್ಯಗಳು :
ಕೇರಳದಿಂದ ಪ್ರಾರಂಭವಾದ ಬರ್ಡ್ ಫ್ಲೂ (Bird Flu) ಇದುವರೆಗೆ 9 ರಾಜ್ಯಗಳಲ್ಲಿ ಪಸರಿಸಿದೆ. ಕೇರಳದ ಹೊರತಾಗಿ ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ (Maharashtra), ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷಿ ಜ್ವರ ಆತಂಕ ಸೃಷ್ಟಿಸಿದೆ. ಈ ರಾಜ್ಯಗಳಲ್ಲಿ ಕಾಗೆಗಳನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಸಾವನ್ನಪ್ಪಿವೆ.
ಇದನ್ನೂ ಓದಿ : Bird flu ಮೊಟ್ಟೆ, ಚಿಕನ್ ತಿಂದರೆ ಕೋಳಿ ಜ್ವರ ಬರುತ್ತಾ..? ಈ ಹೊತ್ತಲ್ಲಿ ಗೊತ್ತಿರಲೇಬೇಕಾದ ವಾಸ್ತವಾಂಶಗಳು ಇವು..!
ಮಹಾರಾಷ್ಟ್ರದಲ್ಲಿ ಪಕ್ಷಿಗಳ ಖರೀದಿಗೆ ನಿಷೇಧ :
ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ 900 ಕೋಳಿಗಳ ಸಾವಿನ ನಂತರ, ಮಾದರಿಗಳನ್ನು ಭೋಪಾಲ್ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಯಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ. ಇದರ ನಂತರ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೋಳಿ ಮತ್ತು ಇತರ ಪಕ್ಷಿಗಳನ್ನು ನಿರ್ಮೂಲನೆ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ 10 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಕ್ಷಿಗಳ ಖರೀದಿಯನ್ನು ನಿಷೇಧಿಸಲಾಗಿದೆ. ಆಡಳಿತವು ಈ ಗ್ರಾಮವನ್ನು ಸೋಂಕಿತ ಜೋನ್ ಎಂದು ಘೋಷಿಸಿದ್ದು, ಗ್ರಾಮದ ಎಲ್ಲ ಜನರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.
ದೆಹಲಿಯಲ್ಲಿ ಜೀವಂತ ಪಕ್ಷಿಗಳ ಆಮದು ನಿಷೇಧ :
ಪಕ್ಷಿ ಜ್ವರ ಅಪಾಯವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಪೂರ್ವ ದೆಹಲಿಯ ಗಾಜಿಪುರ ಮುರ್ಗಾ ಮಂಡಿಯನ್ನು 10 ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಿದೆ. ಇದಲ್ಲದೆ ಜೀವಂತ ಪಕ್ಷಿಗಳ ಆಮದನ್ನು ಸರ್ಕಾರ ನಿಷೇಧಿಸಿದೆ.
ಇದನ್ನೂ ಓದಿ : Bird Flu: 'ರಾಜ್ಯದಲ್ಲಿ 'ಕೋಳಿ ಮೊಟ್ಟೆ', 'ಮಾಂಸ' ಮಾರಾಟಕ್ಕೆ ನಿರ್ಬಂಧ ಇಲ್ಲ'
ನಿಯಂತ್ರಣ ಕೊಠಡಿ ರಚಿಸಿದ ಕೇಂದ್ರ ಸರ್ಕಾರ :
ಪಕ್ಷಿ ಜ್ವರ ಅಪಾಯವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಮತ್ತು ಕೇಂದ್ರ ಪಶುಸಂಗೋಪನಾ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಕೆಲವು ತಂಡಗಳನ್ನು ಹಲವು ರಾಜ್ಯಗಳ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗಿದ್ದು ತೀವ್ರ ನಿಗಾ ಇರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.