Shocking News: ಬ್ಲೂಟೂತ್ ಹೆಡ್‌ಫೋನ್‌ ಸ್ಫೋಟದಿಂದ ಯುವಕ ಸಾವು..!

ಬ್ಲೂಟೂತ್ ಹೆಡ್‌ಫೋನ್‌ ಸ್ಫೋಟಕ್ಕೆ 28 ವರ್ಷದ ಯುವಕ ಬಲಿಯಾಗಿದ್ದಾನೆ.

Written by - Zee Kannada News Desk | Last Updated : Aug 7, 2021, 03:05 PM IST
  • ಬ್ಲೂಟೂತ್ ಹೆಡ್‌ಫೋನ್‌ ಹಾಕಿಕೊಂಡು ಮಾತನಾಡುತ್ತಿದ್ದ 28 ವರ್ಷದ ಯುವಕ
  • ಹೆಡ್‌ಫೋನ್‌ ಸ್ಫೋಟಗೊಂಡ ಪರಿಣಾಮ ಪ್ರಜ್ಞೆತಪ್ಪಿ ಕೆಳಗಡೆ ಬಿದ್ದ ರಾಕೇಶ್ ಕುಮಾರ್ ನಗರ್
  • ಹೆಡ್‌ಫೋನ್‌ ಚಾರ್ಜ್‌ಗಿಟ್ಟು ಬಳಕೆ ಮಾಡುತ್ತಿದ್ದ ವೇಳೆ ಸ್ಫೋಟಗೊಂಡಿರಬಹುದು ಎಂದ ಪೊಲೀಸರು
Shocking News: ಬ್ಲೂಟೂತ್ ಹೆಡ್‌ಫೋನ್‌ ಸ್ಫೋಟದಿಂದ ಯುವಕ ಸಾವು..! title=
ಬ್ಲೂಟೂತ್ ಹೆಡ್‌ಫೋನ್‌ ಸ್ಪೋಟಕ್ಕೆ ಯುವಕ ಬಲಿ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಬ್ಲೂಟೂತ್ ಹೆಡ್‌ಫೋನ್‌(Bluetooth Headphone)ಸ್ಪೋಟಗೊಂಡ ಪರಿಣಾಮ 28 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ಇದು ದೇಶದಲ್ಲಿಯೇ ಸಂಭವಿಸಿರುವ ಅಪರೂಪದಲ್ಲಿಯೇ ಅಪರೂಪವಾದ ಘಟನೆಯಾಗಿದೆ.

ಜೈಪುರದ ಉದಯಪುರಿಯ ಗ್ರಾಮದ ರಾಕೇಶ್ ಕುಮಾರ್ ನಗರ್ ಎಂಬಾತನೇ ಬ್ಲೂಟೂತ್ ಹೆಡ್‌ಫೋನ್‌ ಸ್ಪೋಟ(Headphone Explode)ಗೊಂಡು ಸಾವನ್ನಪ್ಪಿದ ಯುವಕ. ಹೆಡ್‌ಫೋನ್‌ ಹಾಕಿಕೊಂಡು ರಾಕೇಶ್ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಹೆಡ್‌ಫೋನ್‌ ಸ್ಫೋಟಗೊಂಡಿದೆ. ಪರಿಣಾಮ ಪ್ರಜ್ಞೆ ತಪ್ಪಿ ಆತ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನಿಗೆ ಚಿಕಿತ್ಸೆ ನೀಡಲು ಸಿದ್ಧಿ ವಿನಾಯಕ ಆಸ್ಪತ್ರೆಗೆ ಕರೊದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಕೇಶ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Jammu-Kashmir: ಬುಡ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ, ಮುಂದುವರೆದ ಶೋಧ ಕಾರ್ಯ

ಪೊಲೀಸರ ಪ್ರಕಾರ, ರಾಕೇಶ್ ತನ್ನ ಮನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡುತ್ತಿದ್ದ. ಹೆಡ್‌ಫೋನ್‌(Headphone)ಚಾರ್ಜ್‌ಗಿಟ್ಟು ಅದನ್ನು ಬಳಕೆ ಮಾಡುತ್ತಿದ್ದ ವೇಳೆ ಅದು ಸ್ಫೋಟಗೊಂಡಿದೆ. ಹೀಗಾಗಿ ರಾಕೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ’ ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: Indian Railways: ರೈಲು ಪ್ರಯಾಣಿಕರಿಗೆ ಬಿಗ್ ಶಾಕ್, ಇನ್ಮುಂದೆ ರೈಲಿನಲ್ಲಿ ಸಿಗಲ್ಲ ಈ ಸೌಕರ್ಯ

ರಾಕೇಶ್‌ ಬಹುಶಃ ಹೃದಯಾಘಾತ(Heart Attack)ದಿಂದ ಸಾವಿಗೀಡಾಗಿರಬಹುದು ಅಂತಾ ಡಾ.ಎಲ್‌.ಎನ್‌.ರುಂದ್ಲಾ ಹೇಳಿದ್ದಾರೆ. ಹೆಡ್‌ಫೋನ್‌ ಸ್ಫೋಟದಿಂದಾಗಿ ರಾಕೇಶ್ ಕಿವಿಗೆ ಗಂಭೀರವಾದ ಗಾಯವಾಗಿತ್ತು ಎಂದು ತಿಳಿದುಬಂದಿದೆ. ಈ ರೀತಿಯ ಘಟನೆ ದೇಶದಲ್ಲಿಯೇ ಇದೆ ಮೊದಲು ಅಂತಾ ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News