BSF Row: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುವುದಾಗಿ ಹೇಳಿದ ಶರದ್ ಪವಾರ್

ಅಸ್ಸಾಂ, ಪಂಜಾಬ್ ಮತ್ತು ಬಂಗಾಳ ರಾಜ್ಯಗಳಲ್ಲಿನ ಗಡಿ ಭದ್ರತಾ ಪಡೆ ಅಥವಾ ಬಿಎಸ್‌ಎಫ್‌ನ ಕಾರ್ಯವ್ಯಾಪ್ತಿ ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಅವರ ಆಲೋಚನೆಗಳನ್ನು ತಿಳಿದುಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

Written by - Zee Kannada News Desk | Last Updated : Oct 16, 2021, 08:31 PM IST
  • ಅಸ್ಸಾಂ, ಪಂಜಾಬ್ ಮತ್ತು ಬಂಗಾಳ ರಾಜ್ಯಗಳಲ್ಲಿನ ಗಡಿ ಭದ್ರತಾ ಪಡೆ ಅಥವಾ ಬಿಎಸ್‌ಎಫ್‌ನ ಕಾರ್ಯವ್ಯಾಪ್ತಿ ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಅವರ ಆಲೋಚನೆಗಳನ್ನು ತಿಳಿದುಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
BSF Row: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುವುದಾಗಿ ಹೇಳಿದ ಶರದ್ ಪವಾರ್  title=
file photo

ನವದೆಹಲಿ: ಅಸ್ಸಾಂ, ಪಂಜಾಬ್ ಮತ್ತು ಬಂಗಾಳ ರಾಜ್ಯಗಳಲ್ಲಿನ ಗಡಿ ಭದ್ರತಾ ಪಡೆ ಅಥವಾ ಬಿಎಸ್‌ಎಫ್‌ನ ಕಾರ್ಯವ್ಯಾಪ್ತಿ ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಅವರ ಆಲೋಚನೆಗಳನ್ನು ತಿಳಿದುಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

'ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರ ಆಲೋಚನೆಗಳನ್ನು ತಿಳಿಯಲು ನಾನು ಅವರನ್ನು ಭೇಟಿ ಮಾಡುತ್ತೇನೆ" ಎಂದು ಪವಾರ್ (Sharad Pawar) ಅವರು ಹೇಳಿರುವುದನ್ನು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ನಿತಿನ್ ಗಡ್ಕರಿ ಅಧಿಕಾರವನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸಿದ್ದಾರೆ: ಶರದ್ ಪವಾರ್

ಈ ವಾರದ ಆರಂಭದಲ್ಲಿ ಗೃಹ ಸಚಿವಾಲಯವು ಬಿಎಸ್‌ಎಫ್ ಮೇಲಿನ ಮೂರು ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀ ವರೆಗೆ ಕಾರ್ಯನಿರ್ವಹಿಸಬಹುದೆಂದು ಹೇಳಿದೆ; ಹಿಂದೆ ಇದರ ವ್ಯಾಪ್ತಿ 15 ಕಿ.ಮೀ.ವರೆಗೆ ಇತ್ತು. ಈ ನಿರ್ಧಾರದಿಂದಾಗಿ ಈಗ ಬಿಎಸ್‌ಎಫ್ ಪ್ರತಿ ರಾಜ್ಯದ ವಿಶಾಲ ಪ್ರದೇಶದಲ್ಲಿ ಹುಡುಕಬಹುದು ಮತ್ತು ಬಂಧಿಸಬಹುದು,ಸ್ಥಳೀಯ ಪೊಲೀಸರಿಗೆ ಸರಿಸಮಾನವಾಗಿ ಅವರಿಗೆ ಅಧಿಕಾರವನ್ನು ನೀಡಬಹುದು ಎನ್ನಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಪ್ರತಿಪಕ್ಷಗಳನ್ನು ನಿಗ್ರಹಿಸಲು ಇಡಿ ಬಳಸುತ್ತಿದೆ- ಶರದ್ ಪವಾರ್

ಇನ್ನೊಂದೆಡೆಗೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರವು ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಅಪರಾಧಗಳ ವಿರುದ್ಧ "ಶೂನ್ಯ ಸಹಿಷ್ಣುತೆ" ನಿಲುವನ್ನು ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದೆ.ಆದಾಗ್ಯೂ, ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೇಂದ್ರ ಸರ್ಕಾರದ ಈ ನಿರ್ಧಾರವು ದೇಶದ ಒಕ್ಕೂಟ ರಚನೆಯನ್ನು ನಾಶಪಡಿಸುತ್ತದೆ ಎಂದು ಆರೋಪಿಸಿದೆ.

ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಆದೇಶದ ಸಮಯವನ್ನು ಪ್ರಶ್ನಿಸಿದ್ದಾರೆ, ಇದು ಗುಜರಾತ್‌ನ ಅದಾನಿ-ನಡೆಸುವ ಮುಂಡ್ರಾ ಬಂದರಿನಲ್ಲಿ ವಶಪಡಿಸಿಕೊಂಡ ಹೆರಾಯಿನ್‌ನಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ಈ ಆದೇಶವು ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್‌ನೊಳಗೆ ಹೊಸ ವಿವಾದವನ್ನು ಹುಟ್ಟುಹಾಕಿದೆ, ಪಕ್ಷದ ನಾಯಕ ಸುನಿಲ್ ಜಖರ್ ಹೊಸ ಮುಖ್ಯಮಂತ್ರಿ ಚರಣ್ಜಿತ್ ಚನ್ನಿ ಮೇಲೆ ಈ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ.ಸಿಎಂ ಚನ್ನಿ ಅವರು ಅಮಿತ್ ಶಾ ಅವರನ್ನು ಭೇಟಿಯಾದ ಒಂದು ವಾರದ ನಂತರ ಈ ಆದೇಶ ಬಂದಿದೆ.

ಇದನ್ನೂ ಓದಿ: ದೇಶದಲ್ಲಿ ಜಾತಿಯಾಧಾರಿತ ಜನಗಣತಿಗೆ ಶರದ್ ಪವಾರ್ ಒತ್ತಾಯ

'ನೀವು ಏನನ್ನು ಕೇಳುತ್ತೀರೋ ಅದರ ಬಗ್ಗೆ ಜಾಗರೂಕರಾಗಿರಿ! ಚರಣ್ಜಿತ್ ಚನ್ನಿ ಪಂಜಾಬ್ ನ ಅರ್ಧಭಾಗವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಿರಾ? ಎಂದು ಅವರು ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರದ ಈ ಕ್ರಮವು ಮಾಜಿ ಮಿತ್ರಪಕ್ಷಗಳಾದ ಅಕಾಲಿ ದಳದ ಕೆಂಗಣ್ಣಿಗೆ ಗುರಿಯಾಗಿದೆ "ಪಂಜಾಬ್ ಅನ್ನು ಕೇಂದ್ರ ಭದ್ರತಾ ಪಡೆಗಳಿಗೆ ಹಸ್ತಾಂತರಿಸುವ ಮೂಲಕ ಹಿಂಬಾಗಿಲಿನ ಮೂಲಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವಾಗ್ದಾಳಿ ನಡೆಸಿದರು.

ಆಮ್ ಆದ್ಮಿ ಪಕ್ಷ, ಪ್ರಸ್ತುತ ಪಂಜಾಬ್‌ನಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ, ವಕ್ತಾರ ರಾಘವ್ ಚಡ್ಡಾ ಹೇಳುವಂತೆ ಕಾಂಗ್ರೆಸ್ ಪಂಜಾಬ್ ನ ಅರ್ಧ ಭಾಗವನ್ನು ಒಪ್ಪಿಸಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಈ ಕ್ರಮವನ್ನು ಬಂಗಾಳ ಸರ್ಕಾರವೂ ಟೀಕಿಸಿದೆ, ಅಲ್ಲಿ ತೃಣಮೂಲ ವಕ್ತಾರ ಕುನಾಲ್ ಘೋಷ್ ಇದನ್ನು "ರಾಜ್ಯದ ಹಕ್ಕುಗಳ ಉಲ್ಲಂಘನೆ" ಎಂದು ಕರೆದಿದ್ದಾರೆ.'ಬಿಎಸ್‌ಎಫ್ ಯಾವುದೇ ಹುಡುಕಾಟವನ್ನು ನಡೆಸಬೇಕಾದರೆ, ಅವರು ಯಾವಾಗಲೂ ರಾಜ್ಯ ಪೊಲೀಸರೊಂದಿಗೆ ಇದನ್ನು ಮಾಡಬಹುದು.ಇದು ಹಲವು ವರ್ಷಗಳಿಂದ ರೂಡಿಯಲ್ಲಿದೆ. ಇದು ಒಕ್ಕೂಟದ ರಚನೆಯ ಮೇಲೆ ದಾಳಿ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

 

Trending News