ದೇಶದಲ್ಲಿ ಜಾತಿಯಾಧಾರಿತ ಜನಗಣತಿಗೆ ಶರದ್ ಪವಾರ್ ಒತ್ತಾಯ

ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಸಂವಿಧಾನದ ಕೇಂದ್ರ (127 ನೇ ತಿದ್ದುಪಡಿ) ಮಸೂದೆ, 2021 ವಿರುದ್ಧ ಕಿಡಿ ಕಾರಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ತಿದ್ದುಪಡಿಯ ವಿರುದ್ಧ ಸಾರ್ವಜನಿಕ ಒಮ್ಮತವನ್ನು ಮೂಡಿಸಲು ಪ್ರಯತ್ನಿಸುವುದಾಗಿ ಹೇಳಿದರು.

Written by - Zee Kannada News Desk | Last Updated : Aug 16, 2021, 05:10 PM IST
  • ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಸಂವಿಧಾನದ ಕೇಂದ್ರ (127 ನೇ ತಿದ್ದುಪಡಿ) ಮಸೂದೆ, 2021 ವಿರುದ್ಧ ಕಿಡಿ ಕಾರಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ತಿದ್ದುಪಡಿಯ ವಿರುದ್ಧ ಸಾರ್ವಜನಿಕ ಒಮ್ಮತವನ್ನು ಮೂಡಿಸಲು ಪ್ರಯತ್ನಿಸುವುದಾಗಿ ಹೇಳಿದರು.
  • ಈ ತಿದ್ದುಪಡಿಯಲ್ಲಿ ಬದಲಾವಣೆಗಳನ್ನು ಮಾಡಲು ನಾವು ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂದು ಅವರು ಹೇಳಿದರು.
  • ಸಂಸತ್ತಿನಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಲಾಗಿಲ್ಲ. ಈ ತಿದ್ದುಪಡಿಯ ಪರಿಣಾಮಗಳನ್ನು ಬಹಳಷ್ಟು ಸಂಸದರು ಅರ್ಥಮಾಡಿಕೊಂಡಿಲ್ಲ ಎಂದು ಹೇಳಿದರು.
ದೇಶದಲ್ಲಿ ಜಾತಿಯಾಧಾರಿತ ಜನಗಣತಿಗೆ ಶರದ್ ಪವಾರ್ ಒತ್ತಾಯ  title=
ಸಂಗ್ರಹ ಚಿತ್ರ

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಸಂವಿಧಾನದ ಕೇಂದ್ರ (127 ನೇ ತಿದ್ದುಪಡಿ) ಮಸೂದೆ, 2021 ವಿರುದ್ಧ ಕಿಡಿ ಕಾರಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ತಿದ್ದುಪಡಿಯ ವಿರುದ್ಧ ಸಾರ್ವಜನಿಕ ಒಮ್ಮತವನ್ನು ಮೂಡಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಇದನ್ನೂ ಓದಿ: ಸಸ್ಪೆನ್ಸ್ ಹೆಚ್ಚಿಸಿ, U-ಟರ್ನ್ ತೆಗೆದುಕೊಳ್ಳುತ್ತಿದೆಯೇ ಎನ್‌ಸಿಪಿ?

ರಾಜ್ಯಗಳು ಮತ್ತೆ ತಮ್ಮ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಅಧಿಕಾರವನ್ನು ಪಡೆದಿವೆ ಎಂಬ ಅನಿಸಿಕೆ ತಪ್ಪುದಾರಿಗೆಳೆಯುವಂತಿದೆ, ಏಕೆಂದರೆ 50% ಕೋಟಾ ಮಿತಿ ಇನ್ನೂ ಇದೆ ಎಂದು ಅವರು ಹೇಳಿದರು."ತಿದ್ದುಪಡಿಯು ಜನರನ್ನು ಔತಣಕೂಟಕ್ಕೆ ಆಹ್ವಾನಿಸಿದಂತೆ ಮತ್ತು ನಂತರ ಅವರ ಕೈಗಳನ್ನು ಕಟ್ಟಿ ತಿನ್ನುವಂತೆ ಕೇಳುತ್ತದೆ. ಇದು ಒಬಿಸಿ ಸಮುದಾಯವನ್ನು ವಂಚಿಸುತ್ತಿದೆ. ದೇಶದಲ್ಲಿ ಜಾತಿ ಆಧಾರಿತ ಜನಗಣತಿಯ ಅಗತ್ಯವಿದೆ "ಎಂದು ಪವಾರ್ (Sharad Pawar) ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: 'ಸರ್ಕಾರ ರಚಿಸುವುದು ನಮ್ಮ ಜವಾಬ್ದಾರಿ ಅಲ್ಲ'; ಶರದ್ ಪವಾರ್ ಭೇಟಿ ಬಳಿಕ ಸಂಜಯ್ ರೌತ್

ಈ ತಿದ್ದುಪಡಿಯಲ್ಲಿ ಬದಲಾವಣೆಗಳನ್ನು ಮಾಡಲು ನಾವು ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂದು ಅವರು ಹೇಳಿದರು. ಸಂಸತ್ತಿನಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಲಾಗಿಲ್ಲ. ಈ ತಿದ್ದುಪಡಿಯ ಪರಿಣಾಮಗಳನ್ನು ಬಹಳಷ್ಟು ಸಂಸದರು ಅರ್ಥಮಾಡಿಕೊಂಡಿಲ್ಲ ಎಂದು ಹೇಳಿದರು.ಒಂದು ಭಾಗದ ಬಿಜೆಪಿ ನಾಯಕರು ಜಾತಿ ಆಧಾರಿತ ಒಮ್ಮತದ ಪರವಾಗಿದ್ದಾರೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ತಮ್ಮ ಅಭಿಪ್ರಾಯವನ್ನು ಹೇಳಲು ಹೆಚ್ಚು ಧೈರ್ಯ ಬೇಕು ಎಂದು ಪವಾರ್ ಹೇಳಿದರು.

ಇದನ್ನೂ ಓದಿ: 'ಮಹಾ' ಸರ್ಕಾರ ರಚನೆ ಕುರಿತು ಸೋನಿಯಾ ಜೊತೆ ಯಾವುದೇ ಚರ್ಚೆ ನಡೆದಿಲ್ಲ: ಶರದ್ ಪವಾರ್

"ಬಿಜೆಪಿಯೊಳಗಿನ ಒಂದು ವಿಭಾಗವು ಜಾತಿ ಆಧಾರಿತ ಜನಗಣತಿಯ ಪರವಾಗಿ ಕಾಣುತ್ತದೆ ... ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಸದಸ್ಯರ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಬಿಜೆಪಿ ಸದಸ್ಯರು ಪ್ರಧಾನಿ ಮೋದಿ ಅವರ ಮುಂದೆ ಮಾತನಾಡುವ ಮತ್ತು ತಮ್ಮ ಅಭಿಪ್ರಾಯವನ್ನು ಹೇಳುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇದು ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ "ಎಂದು ಪವಾರ್ ಹೇಳಿದರು.

ಸಂವಿಧಾನ (127 ನೇ ತಿದ್ದುಪಡಿ) ವಿಧೇಯಕ, 2021,ರ  ಮೂಲಕ ರಾಜ್ಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಮತ್ತು ಸೂಚಿಸುವ ಮೂಲಕ ತಮ್ಮದೇ ಆದ ಒಬಿಸಿ ಪಟ್ಟಿಯನ್ನು ಮಾಡುವ ಅಧಿಕಾರವನ್ನು ಮರಳಿ ನೀಡುವ ಮಸೂದೆಗೆ ಇತ್ತೀಚೆಗೆ ರಾಜ್ಯಸಭೆಯಲ್ಲಿ 187-0 ಬಹುಮತದೊಂದಿಗೆ ಅಂಗೀಕರಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News