ನವ ದೆಹಲಿ: ದೆಹಲಿಯ ಆಗ್ನೇಯ ಭಾಗದಲ್ಲಿರುವ ತೈಮೂರ್ ನಗರದಲ್ಲಿ 50-60 ವರ್ಷ ಹಳೆಯದಾದ ಕಟ್ಟಡ ಕುಸಿದಿದ್ದು ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
50-60 yrs old building collapsed at 9:45 AM in Taimur Nagar. It belonged to a retd Govt servant Dhruv Kumar; he along with a labourer may still be under the rubble. 3 fire tenders and a team of DDMA, local police are at the spot:DCP South East Romil Baniya #Delhi pic.twitter.com/3dvF50Lp0a
— ANI (@ANI) November 24, 2017
ತೈಮೂರ್ ನಗರದಲ್ಲಿ ಬೆಳಿಗ್ಗೆ 09:45ರಲ್ಲಿ ಈ ಘಟನೆ ಸಂಭವಿಸಿದೆ. ಇದು ನಿವೃತ್ತ ಸರ್ಕಾರಿ ಅಧಿಕಾರಿ ಧ್ರುವ ಕುಮಾರ್ ಎಂಬುವವರಿಗೆ ಸೇರಿದ ಕಟ್ಟಡ ಎಂದು ತಿಳಿದು ಬಂದಿದೆ. ಧ್ರುವ ಕುಮಾರ್ ಸೇರಿದಂತೆ ಕಾರ್ಮಿಕರು ಕಟ್ಟಡದ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 3 ಅಗ್ನಿಶಾಮಕ ದಳ, ಡಿಡಿಎಂಎ ತಂಡ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.