WhatsApp: ಮೊಬೈಲ್ ನೋಟಿಫಿಕೇಶನ್‌ನಿಂದ ಸಿಗುತ್ತಾ ಮುಕ್ತಿ? ಬರಲಿದೆ ಹೊಸ ವೈಶಿಷ್ಟ್ಯ

ವಾಟ್ಸಾಪ್‌ನ ಹೊಸ ಫೀಚರ್ ಟ್ರ್ಯಾಕಿಂಗ್ ತಾಣವಾದ WAPeteinfo ಪ್ರಕಾರ ಕಂಪನಿಯು ಅಧಿಸೂಚನೆ ವಿಭಾಗದಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ಈಗ ನೀವು ಯಾವುದೇ ಗುಂಪು ಚಾಟ್ ಅನ್ನು ಶಾಶ್ವತವಾಗಿ ಮೌನಗೊಳಿಸಬಹುದು ಅಥವಾ ಮ್ಯೂಟ್ ಮಾಡಬಹುದು.

Last Updated : Jul 30, 2020, 11:55 AM IST

Trending Photos

WhatsApp: ಮೊಬೈಲ್ ನೋಟಿಫಿಕೇಶನ್‌ನಿಂದ ಸಿಗುತ್ತಾ ಮುಕ್ತಿ? ಬರಲಿದೆ ಹೊಸ ವೈಶಿಷ್ಟ್ಯ title=

ನವದೆಹಲಿ: ಕಿರು ಸಂದೇಶಗಳಿಗಾಗಿ ಹೆಚ್ಚು ಜನಪ್ರಿಯವಾದ ವಾಟ್ಸಾಪ್ (Whatsapp) ಜನರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವನ್ನು ಅತ್ಯಂತ ಸುಲಭಗೊಳಿಸಿದೆ. ಆದರೆ ಈ ಅಪ್ಲಿಕೇಶನ್ ಅನೇಕ ಅನಾನುಕೂಲಗಳನ್ನು ಸಹ ಹೊಂದಿದೆ. ಉದಾಹರಣೆಗೆ ನೀವಿರುವ ಗ್ರೂಪ್ ನಲ್ಲಿ ಮುಂದೊಂದು ದಿನ ಯಾರಾದರೂ ನಿಮ್ಮ ಅನುಮತಿಯಿಲ್ಲದೆ ಆ ಗುಂಪಿಗೆ ಸೇರುತ್ತಾರೆ. ಅನೇಕ ಬಾರಿ ಹಾಗೆ ಮುಂದುವರೆಯಲು ನಿಮಗೆ ಮನಸ್ಸಿರುವುದಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಲ್ಲಿ ಗ್ರೂಪ್ ನಲ್ಲಿಯೇ ಇರಬೇಕು. ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ತರಲು ಯೋಜಿಸುತ್ತಿದೆ. 

ಈ ಎಡಿಟಿಂಗ್ ವೈಶಿಷ್ಟ್ಯವನ್ನು ಬಳಸಿ ವಾಟ್ಸಾಪ್ ಚಾಟಿಂಗ್ ಅನ್ನು ಆನಂದಿಸಿ

ಶಾಶ್ವತವಾಗಿ ಮ್ಯೂಟ್ ಮಾಡಬಹುದು:
ವಾಟ್ಸಾಪ್‌ನ ಹೊಸ ಫೀಚರ್ ಟ್ರ್ಯಾಕಿಂಗ್ ತಾಣವಾದ WAPeteinfo ಪ್ರಕಾರ ಅಧಿಸೂಚನೆ ವಿಭಾಗದಲ್ಲಿ ಹೊಸ ವೈಶಿಷ್ಟ್ಯವನ್ನು ತರಲು ಕಂಪನಿಯು ಸಿದ್ಧತೆ ನಡೆಸಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ಈಗ ನೀವು ಯಾವುದೇ ಗುಂಪು ಚಾಟ್ ಅನ್ನು ಶಾಶ್ವತವಾಗಿ ಮೌನಗೊಳಿಸಬಹುದು ಅಥವಾ ಮ್ಯೂಟ್ ಮಾಡಬಹುದು. ಪ್ರಸ್ತುತ ವಾಟ್ಸಾಪ್ನಲ್ಲಿ ನೀವು ಅಂತಹ ಅಧಿಸೂಚನೆಗಳನ್ನು  ಸ್ವಲ್ಪ ಸಮಯದವರೆಗೆ ಮ್ಯೂಟ್ ಮಾಡಬಹುದು.

ಈಗ ವಾಟ್ಸಪ್‌ನಲ್ಲೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಲಭ್ಯವಾದ ಮಾಹಿತಿಯ ಪ್ರಕಾರ ವಾಟ್ಸಾಪ್ ಪ್ರಸ್ತುತ ಈ ಹೊಸ ವೈಶಿಷ್ಟ್ಯವನ್ನು ಆಯ್ದ ಬಳಕೆದಾರರಿಗೆ ಕಳುಹಿಸಿದೆ. ಈ ಬಳಕೆದಾರರು ಈ ಹೊಸ ವೈಶಿಷ್ಟ್ಯವನ್ನು ಪರಿಶೀಲಿಸುತ್ತಾರೆ. ಪ್ರತಿಕ್ರಿಯೆ ಉತ್ತಮವಾಗಿದ್ದರೆ ಶೀಘ್ರದಲ್ಲೇ ಈ ಹೊಸ ವೈಶಿಷ್ಟ್ಯವನ್ನು ಸಾಮಾನ್ಯ ಬಳಕೆದಾರರಿಗೂ ಪ್ರಾರಂಭಿಸಲಾಗುವುದು. ಆದಾಗ್ಯೂ ಇದನ್ನು ಕಾರ್ಯಗತಗೊಳಿಸಲಾಗುತ್ತದೆಯೋ ಇಲ್ಲವೋ ಎಂಬುದು ಸಂಪೂರ್ಣವಾಗಿ ವಾಟ್ಸಾಪ್ ಅನ್ನು ಅವಲಂಬಿಸಿರುತ್ತದೆ.

ಈ ಅದ್ಭುತ ಟ್ರಿಕ್ ಬಳಸಿ ಬೇರೆಯವರಿಗೆ ತಿಳಿಯದಂತೆ ವಾಟ್ಸಪ್ ಸ್ಟೇಟಸ್ ಪರಿಶೀಲಿಸಿ

WABeteinfo ಈ ಹೊಸ ವೈಶಿಷ್ಟ್ಯದೊಂದಿಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದೆ. ಅಧಿಸೂಚನೆಗಳನ್ನು ಯಾವಾಗಲೂ ನಿಲ್ಲಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದೆ ಎಂದು ಸ್ಪಷ್ಟವಾಗಿ ಕಾಣಬಹುದು. ಆದ್ದರಿಂದ ನಿಮ್ಮ ಆಯ್ಕೆಯ ಯಾವುದೇ ಗುಂಪು ಚಾಟ್ ಅಧಿಸೂಚನೆಗಳನ್ನು ನೀವು ನಿಲ್ಲಿಸಬಹುದು ಅಥವಾ ಪುನರಾರಂಭಿಸಬಹುದು.

Trending News