ಚಿತ್ತೂರು ಬಳಿ ಕಾರಿಗೆ ಬೆಂಕಿ; ಬೆಂಗಳೂರಿನ ಐವರು ಸಜೀವ ದಹನ

ಚಿತ್ತೂರು ಜಿಲ್ಲೆಯ ಗಂಗಾವರಂ ಮಂಡಲದ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಉರುಳಿದ ಪರಿಣಾಮ ಕಾರಿನ ಇಂಜಿನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.

Updated: Sep 14, 2019 , 12:01 PM IST
ಚಿತ್ತೂರು ಬಳಿ ಕಾರಿಗೆ ಬೆಂಕಿ; ಬೆಂಗಳೂರಿನ ಐವರು ಸಜೀವ ದಹನ

ಚಿತ್ತೂರು: ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ಆಂಧ್ರಪ್ರದೇಶದ ಚಿತ್ತೂರಿನ ಪಲಮನೇರು ಮಂಡಲಂ ಬಳಿ ನಡೆದಿದೆ. 

ಚಿತ್ತೂರು ಜಿಲ್ಲೆಯ ಗಂಗಾವರಂ ಮಂಡಲದ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಉರುಳಿದ ಪರಿಣಾಮ ಕಾರಿನ ಇಂಜಿನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸುಟ್ಟಗಾಯಗಳಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ.

ಮೃತರನ್ನು ಜಾಹ್ನವಿ, ರಾಮ್, ಸಾಯಿ ಆಶ್ರೀತ್, ಪವನ್ ಹಾಗೂ ಕಲಾ ಎಂದು ಗುರುತಿಸಲಾಗಿದ್ದು, ಈ ಐವರೂ ಬೆಂಗಳೂರಿನವರು ಎನ್ನಲಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.