ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹವಿದ್ದ ಯುಪಿ ನೋಂದಣಿಯ ಕಾರು ಪತ್ತೆ

Anti Modi slogans: ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಬರಹವಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.   

Edited by - Chetana Devarmani | Last Updated : Jan 10, 2022, 04:45 PM IST
  • ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹ
  • ತಿರುವನಂತಪುರಂನಲ್ಲಿ ಯುಪಿ ನೋಂದಣಿಯ ಕಾರು ಪತ್ತೆ
  • ಕಾರನ್ನು ವಶಕ್ಕೆ ಪಡೆದ ಮ್ಯೂಸಿಯಂ ಪೊಲೀಸರು
ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಬರಹವಿದ್ದ ಯುಪಿ ನೋಂದಣಿಯ ಕಾರು ಪತ್ತೆ   title=
ಕಾರು

ತಿರುವನಂತಪುರಂ (ಕೇರಳ): ಮ್ಯೂಸಿಯಂ ಪೊಲೀಸರು ಭಾನುವಾರ ಪತ್ತಂನ ಖಾಸಗಿ ಹೊಟೇಲ್ ಎದುರು ಬಿಟ್ಟು ಹೋಗಿದ್ದ ಉತ್ತರ ಪ್ರದೇಶ ನೋಂದಣಿಯ ಕಾರನ್ನು (UP registered car) ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ವಾಹನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನು (Car painted with anti Modi slogans) ಬರೆಯಲಾಗಿದೆ. 

"ಪ್ರಧಾನಿ ನರೇಂದ್ರ ಮೋದಿ(PM Narendra Modi), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೊಲೆಗಾರರು. ಆರ್​ಎಸ್​ಎಸ್​ ಭಯೋತ್ಪಾದಕ​ ಸಂಘಟನೆ. ಪ್ರಧಾನಿ ಒಳ್ಳೆಯವರಲ್ಲ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಲಖೀಂಪುರದಲ್ಲಿ ನಾಲ್ವರನ್ನು ಹತ್ಯೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತ ಹೋರಾಟದ ವೇಳೆ 750 ಜನರನ್ನು ಕೊಂದಿದ್ದಾರೆ" ಎಂದು ಬರೆಯಲಾಗಿದೆ.

ಪೊಲೀಸರ ಪ್ರಕಾರ, ತಿರುವನಂತಪುರದ (Thiruvananthapuram) ಹೋಟೆಲ್​ ಒಂದಕ್ಕೆ ವ್ಯಕ್ತಿಯೊಬ್ಬ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಅಲ್ಲದೇ ಈ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ ಕಾರಣ ಹೋಟೆಲ್​ ಸಿಬ್ಬಂದಿ ವಿಚಾರಿಸಿದ್ದಾರೆ. ಕಾರಿನ ಚಾಲಕ ಅಲ್ಲಿ ಉದ್ಯೋಗಿಗಳೊಂದಿಗೆ ವಾಗ್ವಾದಕ್ಕಿಳಿದ ನಂತರ ಹೋಟೆಲ್‌ನಿಂದ ಪರಾರಿಯಾಗಿದ್ದಾನೆ.

 

 

ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ವರದಿಯಾಗಿದೆ. ಶೀಘ್ರದಲ್ಲೇ, ಕಾರನ್ನು ಮ್ಯೂಸಿಯಂ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ವಾನ ಮತ್ತು ವಿಧಿವಿಜ್ಞಾನ ತಂಡಗಳು ವಾಹನವನ್ನು ನಂದವನಂನಲ್ಲಿರುವ ಸಶಸ್ತ್ರ ಮೀಸಲು ಶಿಬಿರಕ್ಕೆ ಸ್ಥಳಾಂತರಿಸುವ ಮುನ್ನ ತಪಾಸಣೆ ನಡೆಸಿವೆ.

ಪಂಜಾಬ್ ಮೂಲದವರ ಹೆಸರಿನಲ್ಲಿ ಕಾರು ಉತ್ತರ ಪ್ರದೇಶದ ಮೀರತ್‌ನಲ್ಲಿ ನೋಂದಣಿಯಾಗಿದೆ. ಕಾರಿನಲ್ಲಿ ಬಳಸಿದ ಬಟ್ಟೆಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೇಬಲ್‌ಗಳ ಬ್ಯಾಗ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಘಟನೆಯ ಕುರಿತು ವಿಚಾರಣೆ ಆರಂಭಿಸಲಾಗಿದೆ.

ಇದನ್ನೂ ಓದಿ: ಖಲಿಸ್ತಾನಿಗಳಿಂದ ಸುಪ್ರೀಂ ಕೋರ್ಟ್ ವಕೀಲರಿಗೆ ಬೆದರಿಕೆ ಕರೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News