ಮಾಜಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ವಿರುದ್ದ ದೂರು ದಾಖಲಿಸಿದ ಬಳಿಕ ಸಿಬಿಐ ಅಧಿಕಾರಿ ವರ್ಗಾವಣೆ

ಮಾಜಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್ ಮತ್ತು ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ ಅಧಿಕಾರಿಯೊಬ್ಬರು ದೂರು ದಾಖಲಿಸಿಕೊಂಡ ಬಳಿಕ ಅವರನ್ನು ವರ್ಗಾವಣೆಗೊಳಿಸಲಾಗಿದೆ.

Last Updated : Jan 27, 2019, 11:47 AM IST
ಮಾಜಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ವಿರುದ್ದ ದೂರು ದಾಖಲಿಸಿದ ಬಳಿಕ ಸಿಬಿಐ ಅಧಿಕಾರಿ ವರ್ಗಾವಣೆ  title=

ನವದೆಹಲಿ : ಮಾಜಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್ ಮತ್ತು ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ ಅಧಿಕಾರಿಯೊಬ್ಬರು ದೂರು ದಾಖಲಿಸಿಕೊಂಡ ಬಳಿಕ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಬ್ಯಾಂಕಿಂಗ್ ಮತ್ತು ಸೆಕ್ಯುರಿಟೀಸ್ ಫ್ರಾಡ್ ಸೆಲ್ ಭಾಗವಾಗಿದ್ದ ಸುಧಾಂಶು ಧರ್ ಮಿಶ್ರಾ ಅವರನ್ನು ಗುರುವಾರ ರಾಂಚಿಯಲ್ಲಿನ ಆರ್ಥಿಕ ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ.ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಆಗಿದ್ದ ಚಂದ ಕೋಚಾರ್ ಅವರು 2012 ಅಕ್ಟೋಬರ್ನಲ್ಲಿ 3,250 ಕೋಟಿ ರೂ ಸಾಲವನ್ನು ವೀಡಿಯೋಕಾನ್ ಗ್ರೂಪ್ ಗೆ ನೀಡಿದ್ದರು. ಈ ಪ್ರಕರಣ ಕಳೆದ ವರ್ಷ ಬೆಳಕಿಗೆ ಬಂದಿತ್ತು, ಈ ವಹಿವಾಟಿನ ಲಾಭವನ್ನು ಚಂದಾ ಕೊಚಾರ್ ಅವರ ಪತಿ ದೀಪಕ್ ಕೋಚಾರ್ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ಐಸಿಐಸಿಐ-ವೀಡಿಯೋಕಾನ್ ಸಾಲದ ಪ್ರಕರಣದಲ್ಲಿ ಸಿಬಿಐ ಎಫ್ಐಆರ್ ದಾಖಲಿಸಿರುವ ನಿರ್ಧಾರಕ್ಕೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದರು. ಸಿಬಿಐನ ಈ ನಡೆಯನ್ನು ಅವರು   "ತನಿಖಾ ಸಾಹಸಿ" ಎಂದು ಕರೆದಿದ್ದರು.

Trending News