CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, ಶೇ.30 ರಷ್ಟು ಕಡಿಮೆಯಾಯ್ತು 9 ರಿಂದ 12ನೇ ತರಗತಿಯ Syllabus

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಶಾಲೆಗಳನ್ನು ತೆರೆಯದ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣದ ಕೊರತೆಯ ಹಿನ್ನೆಲೆಯಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡಲು ಸಿಬಿಎಸ್‌ಇ ನಿರ್ಧರಿಸಿದೆ.

Last Updated : Jul 7, 2020, 07:30 PM IST
CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, ಶೇ.30 ರಷ್ಟು ಕಡಿಮೆಯಾಯ್ತು 9 ರಿಂದ 12ನೇ ತರಗತಿಯ Syllabus title=

ನವದೆಹಲಿ: ಕೊರೊನಾ ಮಹಾಮಾರಿಯ ಹಿನ್ನೆಲೆ ಮನೆಯಲ್ಲಿಯೇ ಇದ್ದುಕೊಂಡು 10ನೇ ಮತ್ತು 12ನೇ ತರಗತಿಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು, ಈ ವರ್ಗಗಳ ಪಠ್ಯಕ್ರಮವನ್ನು ಕಡಿಮೆ ಮಾಡಲು CBSE ನಿರ್ಧರಿಸಿದೆ. 9 ರಿಂದ 12 ತರಗತಿಯವರೆಗಿನ ಪಠ್ಯಕ್ರಮದಲ್ಲಿ ಶೇಕಡಾ 30 ರಷ್ಟು ಕಡಿತ ಮಾಡುವುದಾಗಿ ಮಂಡಳಿ ಪ್ರಕಟಿಸಿದೆ.

ಶಾಲೆಗಳನ್ನು ತೆರೆಯದ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣದ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಮತ್ತು ಪ್ರೌಢ ಮಂಡಳಿ (ಸಿಬಿಎಸ್‌ಇ) ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪಠ್ಯಕ್ರಮವನ್ನು ಕಡಿತಗೊಳಿಸುವ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೋವಿಡ್ -19 ಲಾಕ್‌ಡೌನ್ ಕಾಲದಲ್ಲಾಗಿರುವ ಶೈಕ್ಷಣಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ 9 ರಿಂದ 12 ನೇ ತರಗತಿಗಳ ಪಠ್ಯಕ್ರಮವನ್ನು ಶೇ.30ರಷ್ಟು ತರ್ಕಬದ್ಧಗೊಳಿಸಲಾಗಿದೆ" ಎಂದು ಹೇಳಿದ್ದಾರೆ. 

ಈ ಕುರಿತು ಮತ್ತೊಂದು ಟ್ವೀಟ್ ಮಾಡಿರುವ ಅವರು, " ಕೆಲವು ತಿಂಗಳ ಹಿಂದೆ ಈ ನಿರ್ಧಾರಕ್ಕೆ ಸಹಾಯ ಮಾಡಲು ನಾನು #SyllabusForStudents2020 ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲು ಎಲ್ಲಾ ಶಿಕ್ಷಣ ತಜ್ಞರಿಂದ ಸಲಹೆಗಳನ್ನು ಕೇಳಿದ್ದೆ. ನನ್ನ ಈ ಮನವಿಗೆ 1500 ಕ್ಕೂ ಹೆಚ್ಚು ತಜ್ಞರು ತಮ್ಮ ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತದೆ. ನಿಮ್ಮೆಲ್ಲರ ಉತ್ತಮ ಪ್ರತಿಕ್ರಿಯೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಹೇಳಿದ್ದಾರೆ.

2020-21ನೇ ಶೈಕ್ಷಣಿಕ ವರ್ಷದ ಅಕಾಡೆಮಿಕ್ ಪಠ್ಯಕ್ರಮವನ್ನು (ಸಿಬಿಎಸ್‌ಇ ಸಿಲಬಸ್ 2020) ಬಿಡುಗಡೆ ಮಾಡಿದ್ದ ಸಿಬಿಎಸ್‌ಇ, ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಹೇಳಿತ್ತು.

ಈ ಕುರಿತು ತನ್ನ ಪಠ್ಯಕ್ರಮದಲ್ಲಿ ಹೇಳಿಕೊಂಡಿದ್ದ CBSE ಕೊರೊನಾ ಮಾಹಾಮಾರಿಯ ಕಾರಣ ಶಾಲೆಗಳಲ್ಲಿ ನಡೆಯಬೇಕಿದ್ದ ಶಿಕ್ಷಣಕ್ಕೆ ಹಾನಿ ತಲುಪಿದೆ, ಹೀಗಾಗಿ ಪಠ್ಯಕ್ರಮವನ್ನು 9 ನೇ ತರಗತಿಯಿಂದ 12 ತರಗತಿಯವರೆಗೆ ಪರಿಷ್ಕರಿಸಲು ಮಂಡಳಿ ನಿರ್ಧರಿಸಿದೆ ಎಂದು ಹೇಳಿದೆ.

ಇದಕ್ಕೂ ಮೊದಲು ಪಠ್ಯಕ್ರಮವನ್ನು ಕಡಿಮೆ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಿಬಿಎಸ್‌ಇ ಮಂಡಳಿಗೆ ಸಲಹೆ ನೀಡಿತ್ತು. ಪಠ್ಯಕ್ರಮದಲ್ಲಿ ಶೇಕಡಾ 30 ರಷ್ಟು ಕಡಿತಗೊಳಿಸುವಂತೆ ಸಚಿವಾಲಯ ಸೂಚಿಸಿತ್ತು. ಸಚಿವಾಲಯದ ಸಲಹೆಯ ಮೇರೆಗೆ ಮಂಡಳಿಯು ಪಠ್ಯಕ್ರಮವನ್ನು ಶೇಕಡಾ 30 ರಷ್ಟು ಕಡಿಮೆಗೊಳಿಸಲಾಗಿದೆ.

ಕಳೆದ ವಾರವಷ್ಟೇ, ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (CISCE) ಐಸಿಎಸ್ಇ(ICSE) ಮತ್ತು ಐಎಸ್ಸಿ (IESC)ಯ ಪಠ್ಯಕ್ರಮವನ್ನು ಕೂಡ ಕಡಿತಗೊಳಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಎಲ್ಲಾ ವಿಷಯಗಳ ಪಠ್ಯಕ್ರಮವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲಾಗಿದೆ. ಆಗಸ್ಟ್‌ನಲ್ಲಿ ಶಾಲೆಗಳು ತೆರೆಯದಿದ್ದರೆ, ಪಠ್ಯಕ್ರಮವನ್ನು ಮತ್ತಷ್ಟು ಕಡಿತಗೊಳಿಸಬಹುದು ಎಂದು ಮಂಡಳಿ ಹೇಳಿದೆ.

Trending News