ನವದೆಹಲಿ: ದೇಶದಲ್ಲಿ ಕರೋನಾ ವೈರಸ್‌ನ ಬದಲಾಗುತ್ತಿರುವ ಲಕ್ಷಣಗಳು ಸರ್ಕಾರಕ್ಕೆ ದೊಡ್ಡ ಸವಾಲನ್ನು ಒಡ್ಡುತ್ತಿವೆ. ಭಾರತದಲ್ಲಿ ಹೆಚ್ಚಿನ ಜನರು ಸೌಮ್ಯವಾದ ಸೋಂಕಿಗೆ ಒಳಗಾಗುತ್ತಿದ್ದರೂ ದೇಶದಲ್ಲಿ ಕರೋನಾ ಸೋಂಕಿನ ಯಾವುದೇ ಲಕ್ಷಣಗಳನ್ನು ಹೊಂದಿರದ ಆದರೆ ಅವರನ್ನು ಪರೀಕ್ಷಿಸಿದಾಗ ಕೋವಿಡ್-19 ( COVID-19) ಸೋಂಕು ಪತ್ತೆಯಾಗುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ವಿಶೇಷ ಚಿಕಿತ್ಸೆಯಿಂದ ಕೋವಿಡ್ -19 ರೋಗಿಯ ಸ್ಥಿತಿಯಲ್ಲಿ ಸುಧಾರಣೆ
ಕೊರೋನಾ ಪೀಡಿತರಲ್ಲಿ ಶೇ. 80ರಷ್ಟು ರೋಗಿಗಳಲ್ಲಿ ಕೊರೋನಾ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದು ಐಸಿಎಂಆರ್ ವಿಜ್ಞಾನಿ ಡಾ.ರಾಮನ್ ಆರ್. ಗಂಗಖೇಡ್ಕರ್ ಹೇಳಿದ್ದಾರೆ. ಕರೋನಾದ 100 ರೋಗಿಗಳಿದ್ದರೆ 80 ಜನರಲ್ಲಿ ಅದರ ರೋಗಲಕ್ಷಣಗಳು ಕಂಡು ಬರುವುದಿಲ್ಲ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಐಸಿಎಂಆರ್ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಈಗ ಸರ್ಕಾರದ ಮುಂದೆ ಒಂದು ದೊಡ್ಡ ಸವಾಲು ಉದ್ಭವಿಸಿದ್ದು ಯಾರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು ಎಂಬುದು ದೊಡ್ಡ ಸವಾಲಾಗಿದೆ. ಆದಾಗ್ಯೂ ಐಸಿಎಂಆರ್ ಪರೀಕ್ಷಾ ಕಾರ್ಯತಂತ್ರವು ಬದಲಾಗಿದೆ ಮತ್ತು ಇದನ್ನು ಹಾಟ್‌ಸ್ಪಾಟ್‌ಗಳಲ್ಲಿ ಹೊಸದಾಗಿ ಜಾರಿಗೆ ತರಲಾಗುತ್ತಿದೆ.
ರಸ್ತೆ, ರೆಸ್ಟೋರೆಂಟ್‌ಗಳನ್ನು ತೆರೆಯಲು ಮುಂದಾದ ಕೇರಳ ಸರ್ಕಾರದ ನಿರ್ಧಾರಕ್ಕೆ MHA ಕೆಂಡಾಮಂಡಲ
ಐಸಿಎಂಆರ್ ಪ್ರಕಾರ ಕೊರೊನಾವೈರಸ್ (Coronavirus) ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯುವುದು ಕಷ್ಟಕರವಾಯಿತು? ಇದನ್ನು ಪರಿಹರಿಸಲು ಇರುವ ಒಂದೇ ಮಾರ್ಗವೆಂದರೆ ಕರೋನಾ ವ್ಯಕ್ತಿಯ ಸಂಪರ್ಕ ಹೊಂದಿರುವ ಎಲ್ಲರನ್ನು ಪರೀಕ್ಷಿಸುವುದು. ಏಕೆಂದರೆ ಎಲ್ಲ ಜನರ ಪರೀಕ್ಷೆ ಸುಲಭವಲ್ಲ ಆದರೆ ಸಲಹೆಯನ್ನು ನೀಡಲಾಗುತ್ತಿದೆ. ಭಯಪಡುವ ಅಗತ್ಯವಿಲ್ಲ, ಸರ್ಕಾರ ನೀಡಿದ ಸೂಚನೆಗಳನ್ನು ಪಾಲಿಸುವುದು ಅವಶ್ಯಕ ಎನ್ನಲಾಗಿದೆ.
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಭರ್ಜರಿ ಉದ್ಯೋಗಾವಕಾಶ
ಕರೋನಾ ಸೋಂಕನ್ನು ಪರೀಕ್ಷಿಸಲು ಆರೋಗ್ಯ ಸಚಿವಾಲಯವು ಈಗಾಗಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ ಮತ್ತು ಪ್ರೋಟೋಕಾಲ್ ಅನ್ನು ಸಿದ್ಧಪಡಿಸಲಾಗಿದೆ.