1.2 ಲಕ್ಷ ನಿವೃತ್ತ ರಕ್ಷಣಾ, Ex-CAPF ಸಿಬ್ಬಂದಿ ನೇಮಕಕ್ಕೆ CISF ಚಿಂತನೆ!

CISFನ ಸೀಲಿಂಗ್ ಅನ್ನು 1,80,000 ರಿಂದ 3,00,000 ಹುದ್ದೆಗಳಿಗೆ ಏರಿಸುವ ಪರಿಷ್ಕೃತ ಪ್ರಸ್ತಾಪ ಮತ್ತು 16 ಹೆಚ್ಚುವರಿ ರಿಸರ್ವ್ ಬೆಟಾಲಿಯನ್ಗಳನ್ನು ನವೆಂಬರ್ 5 ರಂದು ಎಂಹೆಚ್ಎಗೆ ಕಳುಹಿಸಲಾಗಿದೆ.  

Last Updated : Nov 21, 2019, 10:49 AM IST
1.2 ಲಕ್ಷ ನಿವೃತ್ತ ರಕ್ಷಣಾ, Ex-CAPF ಸಿಬ್ಬಂದಿ ನೇಮಕಕ್ಕೆ CISF ಚಿಂತನೆ! title=

ನವದೆಹಲಿ: ಮೊದಲ ಬಾರಿಗೆ ಅರೆಸೈನಿಕ ಪಡೆ ಸುಮಾರು 1.2 ಲಕ್ಷ ನಿವೃತ್ತ ರಕ್ಷಣಾ ಮತ್ತು ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (Ex-CAPF) ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ.

ಗೃಹ ಸಚಿವಾಲಯದ (ಎಂಎಚ್‌ಎ) ವ್ಯಾಪ್ತಿಗೆ ಬರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಈ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನೀಲನಕ್ಷೆ ಸಿದ್ಧಪಡಿಸಿದೆ ಎಂದು ಗುರುವಾರ ವರದಿ ತಿಳಿಸಿದೆ.

ಸಿಐಎಸ್ಎಫ್ ಅನ್ನು ನಿಯೋಜಿಸಬಹುದಾದ ಖಾಸಗಿ ವಲಯದ ದೊಡ್ಡ ಕೈಗಾರಿಕಾ ಸಂಸ್ಥೆಗಳನ್ನು ಗುರುತಿಸಿ ತಮ್ಮ ವರದಿಯನ್ನು ರವಾನಿಸಲು ಸಿಐಎಸ್ಎಫ್ ಮಹಾನಿರ್ದೇಶಕರು ಎಲ್ಲಾ ಇನ್ಸ್‌ಪೆಕ್ಟರ್ ಜನರಲ್ (IGs) ಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ಅದರಂತೆ, CISFನ ಸೀಲಿಂಗ್ ಅನ್ನು 1,80,000 ರಿಂದ 3,00,000 ಹುದ್ದೆಗಳಿಗೆ ಏರಿಸುವ ಪರಿಷ್ಕೃತ ಪ್ರಸ್ತಾಪ ಮತ್ತು 16 ಹೆಚ್ಚುವರಿ ರಿಸರ್ವ್ ಬೆಟಾಲಿಯನ್ಗಳನ್ನು ನವೆಂಬರ್ 5 ರಂದು ಎಂಹೆಚ್ಎಗೆ ಕಳುಹಿಸಲಾಗಿದೆ.

ಸೆಪ್ಟೆಂಬರ್ 23 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಐಎಸ್ಎಫ್ನಲ್ಲಿ ನಿವೃತ್ತ ರಕ್ಷಣಾ / ಮಾಜಿ ಸಿಎಪಿಎಫ್ ಸಿಬ್ಬಂದಿಯನ್ನು ಐದು ವರ್ಷಗಳ ಕಾಲ ಒಪ್ಪಂದಕ್ಕೆ ನೇಮಕ ಮಾಡಿಕೊಳ್ಳಬೇಕು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನು 3 ಅನುಪಾತದಲ್ಲಿ ಮರು ರಚನೆ ಮತ್ತು ನಿಯೋಜಿಸಲು ಎಂಎಚ್‌ಎ ಸಲಹೆ ನೀಡಿದ್ದರು. 3 : 2, ಇದರಲ್ಲಿ 3 ಶಾಶ್ವತ ಮತ್ತು 2 ತಾತ್ಕಾಲಿಕವಾಗಿರಬಹುದು.

Trending News