ರಾಯ್‌ಪುರ: ಮಾಜಿ ಸಂಸದ ಮತ್ತು ಕಾಂಗ್ರೆಸ್ ಹಿರಿಯ ನಾಯಕಿ ಕರುಣಾ ಶುಕ್ಲಾ ಅವರು ಮಹಾಮಾರಿ ಕೊರೋನಾದಿಂದ ನಿಧನ ಹೊಂದಿದ್ದಾರೆ.
ಇಂದು ಮುಂಜಾನ ರಾಯ್‌ಪುರದ ರಾಮಕೃಷ್ಣ ಕೇರ್ ಆಸ್ಪತ್ರೆಯಲ್ಲಿ ಕರುಣಾ ಶುಕ್ಲಾ(Karuna Shukla) ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : Assembly Election 2021: ಮೇ 2 ರ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ..!
ಶುಕ್ಲಾ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರ ಸೋದರ ಸೊಸೆ ಆಗಿದ್ದರೆ. ಇವರಿಗೆ ಕೋರೋಣ ಪಾಸಿಟಿವ್ ಬಂದ ನಂತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ : Oxygen Stock : 'ಆಕ್ಸಿಜನ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಭಾರತದಲ್ಲಿ ಸಾಕಷ್ಟು ಸ್ಟಾಕ್ ಇದೆ'
ಈ ಕುರಿತು ಸಂತಾಪ ಸೂಚಿಸಿರುವ ಛತ್ತೀಸ್ ಗಡ್ ಮುಖ್ಯಮಂತ್ರಿ ಭೂಪೇಶ್ ಬಾಗೇಲ್(Bhupesh Baghel), ಕರುಣಾ ಶುಕ್ಲಾ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು ಮತ್ತು ಅವರೊಂದಿಗೆ ರಾಜಕೀಯದ ಹೊರತಾಗಿ ನಿಕಟ ಕುಟುಂಬ ಸಂಬಂಧವಿದೆ ಎಂದು ಹೇಳಿದರು.
ಇದನ್ನೂ ಓದಿ : Corona Vaccine : 18 ವರ್ಷ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..!
"ನನ್ನ ಚಿಕ್ಕಮ್ಮ ಕರುಣಾ ಶುಕ್ಲಾ ಇನ್ನಿಲ್ಲ. ನಿರ್ದಯ ಕರೋನಾ(Corona) ಅವಳನ್ನು ಕೂಡ ಕರೆದುಕೊಂಡಿದೆ. ಅವಳು ರಾಜಕೀಯದ ಬಿಟ್ಟು ನಮ್ಮ ಕುಟುಂಬದವರ ಜೊತೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದರು. ನಾನು ಅವರ ಆಶೀರ್ವಾದವನ್ನು ಮುಂದುವರಿಸಿದೆ. ದೇವರು ಅವರ ದೇವಾಲಯಗಳಲ್ಲಿ ಅವಳ ಜಾಗವನ್ನು ನೀಡಲಿ ಮತ್ತು ಅವರ ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ನೀಡಲಿ, " ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.