ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ -19 ಲಸಿಕೆ ನೀಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್(Arvind Kejriwal), ಇಂದು ನಾವು 1.34 ಕೋಟಿ ಕೊರೋನಾ ಲಸಿಕೆ ಖರೀದಿಸಲು ಅನುಮೋದನೆ ನೀಡಿದ್ದೇವೆ. ಅದನ್ನು ಶೀಘ್ರದಲ್ಲೇ ಖರೀದಿಸಿ ಜನರಿಗೆ ಬೇಗನೆ ನೀಡಲಾಗುವುದುದ್ ಎಂದು ಹೇಳಿದ್ದಾರೆ.
ಇದನ್ನೂ ಓದಿ : Vaccination In India: ನಿಮ್ಮ ನೆಚ್ಚಿನ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೇ?ಕೊವಿನ್ ನಲ್ಲಿ ಸಿಗಲಿದೆ ನಿಮಗೆ ಆದ್ಯತೆಯ ಆಯ್ಕೆ
ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೋವಿಡ್ -19 ವ್ಯಾಕ್ಸಿನೇಷನ್(Covid-19 Vaccine) ನೀಡಲಾಗುತ್ತದೆ. ಕೊರೋನಾ ಮೂರನೇ ಅಲೆ ಪ್ರಾರಂಭವಾಗುವ ಮುನ್ನವೇ ನಾವು ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗುತ್ತದೆ.
ಇದನ್ನೂ ಓದಿ : Covid Care Center: ರಾಷ್ಟ್ರ ರಾಜಧಾನಿಯಲ್ಲಿ ನಗರದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು(Childrens) ಸಹ ಸೋಂಕಿಗೆ ಒಳಗಾಗುವುದನ್ನ ನಾವು ನೋಡಿದ್ದೇವೆ. ಕೆಲವರು ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಮಕ್ಕಳಿಗೂ ಸಹ ನೀಡುವ ಗುರಿ ಇದೆ. ಈ ಲಸಿಕೆ ಅವರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ, ಇಲ್ಲದಿದ್ದರೆ, ಹೊಸ ಲಸಿಕೆ ಅಭಿವೃದ್ಧಿಪಡಿಸಲಾಗುವುದು ಎಂದು ನಾನು ಭಾವಿಸುತ್ತೇನೆ ಶೀಘ್ರದಲ್ಲೇ ಅದು ಮಕ್ಕಳಿಗೆ ಪರಿಣಾಮಕಾರಿ ಮತ್ತು ಸುರಕ್ಷಿತವಾಗಲಿದೆ "ಎಂದು ಹೇಳಿದ್ದಾರೆ.
ಇದನ್ನೂ ಓದಿ : LPG ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ದೊಡ್ಡ ಬದಲಾವಣೆ!
ಲಸಿಕೆ ಉತ್ಪಾದಕರು ರಾಜ್ಯ ಸರ್ಕಾರ(State Govt)ಗಳಿಗೆ ಒಂದು ಡೋಸ್ 400 ರೂ. ದರದಲ್ಲಿ ನೀಡುವುದಾಗಿ ಹೇಳಿದರು ಮತ್ತು ಎರಡನೇ ಉತ್ಪಾದಕರು ಡೋಸ್ ಒಂದು 600 ರೂ. ದರದಲ್ಲಿ ನೀಡಲಾಗುತ್ತಿದೆ. ಇವೆರಡೂ ಬೆಲೆಗಳ ನಡುವೆ ಕೇಂದ್ರ ಸರ್ಕಾರ ಕೂಡ ಒಂದು ಬೆಲೆ ನಿರ್ಧರಿಸಿದೆ. ಒಂದು ಡೋಸ್ ಲಸಿಕೆ ಬೆಲೆ 150 ರೂ. ಆಗಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.