ಲೋಕಸಭಾ ಚುನಾವಣೆ 2019: ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಕಾಂಗ್ರೆಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೇರಳದ ಅತಿಂಗಲ್ ಕ್ಷೇತ್ರದ ಅಭ್ಯರ್ಥಿಯಾಗಿ ಅಡೂರ್ ಪ್ರಕಾಶ್ ಅವರನ್ನು ಕಣಕ್ಕಿಳಿಸಲಾಗಿದೆ.

Last Updated : Mar 20, 2019, 08:20 AM IST
ಲೋಕಸಭಾ ಚುನಾವಣೆ 2019: ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ title=

ನವದೆಹಲಿ: ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಮಂಗಳವಾರ ರಾತ್ರಿ ತನ್ನ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ, ಕೇರಳದ ಎರಡು  ಮತ್ತು ಮಹಾರಾಷ್ಟ್ರದ 7 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಈ ಪಟ್ಟಿಯನ್ನು ಅನುಮೋದಿಸಲಾಗಿದೆ. ಇದರಿಂದಾಗಿ ಎಪ್ರಿಲ್ 11ರಂದು ಪ್ರಾರಂಭವಾಗಲಿರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ನಿಂದ  146 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದಂತಾಗಿದೆ. 

ಕಾಂಗ್ರೆಸ್ ಅಲಪುಳ ಲೋಕಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಶನ್ಮಾಲ್ ಓಸ್ಮನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ, ಪ್ರಸ್ತುತ ಈ ಕ್ಷೇತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಸಂಸದರಾಗಿದ್ದಾರೆ. ಇದಲ್ಲದೆ ಕೇರಳದ ಅತಿಂಗಲ್ ಕ್ಷೇತ್ರದ ಅಭ್ಯರ್ಥಿಯಾಗಿ ಅಡೂರ್ ಪ್ರಕಾಶ್ ಅವರನ್ನು ಕಣಕ್ಕಿಳಿಸಲಾಗಿದೆ. 

ಮಹಾರಾಷ್ಟ್ರದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ನಂದರ್ಬಾರ್(ST)ನಿಂದ ಪಾಡವಿ, ಧುಲೆ ಯಿಂದ ಕುನಾಲ್ ರೋಹಿದಾಸ್ ಪಾಟೀಲ್, ವರದಾ ಕ್ಷೇತ್ರದಿಂದ ಚಾರುಲತಾ ಖಾಜಸಿನ್ಹಾ ಟೋಕಸ್, ಯಾವತ್ಮಾಲ್-ವಾಶಿಂ ಕ್ಷೇತ್ರದಿಂದ ಮಣಿಕ್ರಾಜ್ಜಿ ಠಾಕರೆ, ಮುಂಬೈ ದಕ್ಷಿಣ ಕೇಂದ್ರ ಕ್ಷೇತ್ರದಿಂದ ಏಕನಾಥ್ ಗಾಯಕ್ವಾಡ್, ಶಿರಡಿ(SC) ಭೌಸೇಹೇಬ್ ಕಾಂಬ್ಳೆ ಮತ್ತು ರತ್ನಾಗಿರಿ -ಸಂಧುದುರ್ಗ ಕ್ಷೇತ್ರದಿಂದ ನವಚಂದ್ರ ಬಾಂದಿದೇಕರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. 

Trending News