Corona Curry : ಕೊರೊನಾ ಮಹಾಮಾರಿಯ ಹೆಸರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಕಾಣದ ವೈರಸ್ನಿಂದ ಮನುಷ್ಯ ಸಂಕುಲ ನಲುಗಿ ಹೋಗಿದೆ. ಸೋಂಕಿಗೆ ತಮ್ಮವರನ್ನು ಕಳೆದುಕೊಂಡವರ ನೋವು ಒಂದೆಡೆಯಾದ್ರೆ, ಲಾಕ್ಡೌನ್ ಹೇರಿಕೆಯಿಂದ ಕಂಗೆಟ್ಟು ಆರ್ಥಿಕವಾಗಿ ಕುಗ್ಗಿದವರ ಗೋಳು ಮತ್ತೊಂದೆಡೆ. ಕೊರೊನಾ ವೈರಸ್ ಹಾವಳಿ ಸದ್ಯಕ್ಕೇನೋ ತಣ್ಣಗಾಗಿದೆ. ಆದರೆ ಅದರ ಹೆಸರು ಮಾತ್ರ ಯಾರೂ ಮರೆತಿಲ್ಲ. ಜೋಧ್ಪುರದ ಈ ರೆಸ್ಟೋರೆಂಟ್ ಕೊರೊನಾ ವಿಷಯದ ಭಕ್ಷ್ಯಗಳನ್ನು ತನ್ನ ಮೆನುವಿನಲ್ಲಿ ಸೇರಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : Video Viral : ರಾತ್ರಿಹೊತ್ತು ರಸ್ತೆ ಮಧ್ಯೆ ಈ Zomato ಬಾಯ್ ಮಾಡಿದ್ದೇನು ನೋಡಿ? ಶಾಕ್ ಆಗ್ತೀರಾ!
ಜೋಧ್ಪುರದ ವೈದಿಕ್ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹೊಸ ಮತ್ತು ವಿಶಿಷ್ಟವಾದ "ಕೊರೊನಾ ಕರಿ" ಮತ್ತು "ಮಾಸ್ಕ್ ನಾನ್" ಅನ್ನು ತಯಾರಿಸುತ್ತಿದೆ. ಕೋವಿಡ್ ಕರಿ ಮೂಲತಃ "ಮಲೈ ಕೋಫ್ತಾ". ಅದನ್ನು ಕೊರೊನಾ ವೈರಸ್ ಆಕಾರದಲ್ಲಿ ಮಾಡಿದ್ದಾರೆ. ಇನ್ನೂ ಮಾಸ್ಕ್ ನಾನ್ ಎಂದರೆ ಫೇಸ್ಮಾಸ್ಕ್ ಆಕಾರದ ನಾನ್ ಮಾಡುತ್ತಾರೆ.
Mask Naan and Corona Curry...
It happens only in India 😄😄 pic.twitter.com/RSdlyEIh2j— Ashi.... (@ashita09) July 31, 2020
ಕೊರೊನಾ ಕರಿ ಮತ್ತು ಮಾಸ್ಕ್ ನಾನ್ ಈ ಎರಡು ಹೊಸ ತಿನಿಸುಗಳು ಗ್ರಾಹಕರಿಗೆ ಸೋಜಿಗವೆನಿಸುತ್ತದೆ. ಅನೇಕರು ಇಲ್ಲಿಗೆ ಬಂದು ಟೆಸ್ಟ್ ಕೂಡ ಮಾಡುತ್ತಿದ್ದಾರೆ. ವೈದಿಕ್ ರೆಸ್ಟೋರೆಂಟ್ ಮಾಲೀಕ ಅನಿಲ್ ಕುಮಾರ್ ಮಾತನಾಡಿ, ಕರಿಯು ಮಲೈ ಕೋಫ್ತಾದ ಒಂದು ರೂಪಾಂತರವಾಗಿದೆ, ಇದರಲ್ಲಿ ಕೋಫ್ತಾವನ್ನು ವಿವಿಧ ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ ಮತ್ತು ಬಟರ್ ನಾನ್ ಅನ್ನು ಮಾಸ್ಕ್ ಆಕಾರದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ನೀವು ಹೊಸದನ್ನು ಪ್ರಯತ್ನಿಸಿದರೆ ಮಾತ್ರ ಜನರು ಆಕರ್ಷಿತರಾಗುತ್ತಾರೆ. ಆದ್ದರಿಂದ, ನಾವು ನಮ್ಮ ಮೆನುವಿನಲ್ಲಿ ಕೊರೊನಾ ಕರಿ ಮತ್ತು ಮಾಸ್ಕ್ ನಾನ್ ಅನ್ನು ಸೇರಿಸಿದ್ದೇವೆ. ಆದ್ದರಿಂದ ಜನರು ಅದನ್ನು ಇಷ್ಟಪಡುತ್ತಾರೆ ಎಂದರು.
ಇದನ್ನೂ ಓದಿ : Weird News : ವಿಚಿತ್ರವಾದ್ರೂ ನಿಜ! ಈ ಹಳ್ಳಿಯಲ್ಲಿದೆ ಬಾವಲಿಗಳನ್ನು ಪೂಜಿಸುವ ಪದ್ಧತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.