ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ (Coronavirus) ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಬಗ್ಗೆ ನಿತ್ಯ ಒಂದಲ್ಲಾ ಒಂದು ರೀತಿಯ ಸುಳ್ಳು ವದಂತಿ ಹರಡುತ್ತಿದೆ. ಇತ್ತೀಚೆಗೆ ಸರ್ಕಾರ ವಾಟ್ಸಾಪ್ ಸಂದೇಶಗಳನ್ನು ಸ್ಕ್ರೀನಿಂಗ್ ಮಾಡುತ್ತಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿತ್ತು. ಇದೀಗ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳನ್ನು ಅಕ್ಟೋಬರ್ 15 ರವರೆಗೆ ಮುಚ್ಚುವಂತೆ ಆದೇಶಿಸಿದೆ ಪ್ರವಾಸೋದ್ಯಮ ಸಚಿವಾಲಯವು ಆದೇಶಿಸಿದೆ ಎಂಬ ವದಂತಿ ಹರಿದಾಡುತ್ತಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರಿ ಸುದ್ಧಿ ಸಂಸ್ಥೆ ಪ್ರಸಾರ ಭಾರತಿ ಅಕ್ಟೋಬರ್ 15 ರವರೆಗೆ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳನ್ನು ಮುಚ್ಚುವಂತೆ ಆದೇಶಿಸಿರುವುದಾಗಿ ಹರಿದಾಡುತ್ತಿರುವ ಸುದ್ದಿ ನಕಲಿ ಮತ್ತು ಆಧಾರರಹಿತವಾಗಿದೆ ಎಂದು ತಿಳಿಸಿದೆ.
Be cautious of #Fake order claiming that hotels/resturants will remain closed till 15th October 2020 due to #Coronavirusoutbreak.#PIBFactCheck: The order is Fake and has NOT been issued by Ministry of Tourism.
Do not believe in rumours! pic.twitter.com/efRx3PWTj0
— PIB Fact Check (@PIBFactCheck) April 8, 2020
ಇದಲ್ಲದೆ "ಕರೋನವೈರಸ್ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರವರೆಗೆ ಹೋಟೆಲ್‌ಗಳು / ರೆಸ್ಟಾರೆಂಟ್‌ಗಳು ಮುಚ್ಚಲ್ಪಡುತ್ತವೆ ಎಂದು ಹೇಳುವ ನಕಲಿ ಆದೇಶದ ಬಗ್ಗೆ ಜಾಗರೂಕರಾಗಿರಿ. ಈ ಆದೇಶವು ನಕಲಿ ಮತ್ತು ಪ್ರವಾಸೋದ್ಯಮ ಸಚಿವಾಲಯವು ಈ ರೀತಿಯ ಯಾವುದೇ ಆದೇಶವನ್ನು ಹೊರಡಿಸಿಲ್ಲ. ವದಂತಿಗಳನ್ನು ನಂಬಬೇಡಿ!" ಎಂದು ಪಿಐಬಿ ಟ್ವೀಟ್ ಮಾಡಿದೆ.
ಹಠಾತ್ತನೆ ರಾಷ್ಟ್ರವ್ಯಾಪಿ ಲಾಕ್‌ಡೌನ್ (Lockdown) ಘೋಷಣೆ ಮಾಡುವ ಸಂದರ್ಭದಲ್ಲಿ ರೆಸ್ಟೋರೆಂಟ್‌ಗಳು ತೆರೆಯದಂತೆಯೂ, ರೆಸ್ಟೋರೆಂಟ್‌ಗಳಲ್ಲಿ ಇರುವ ಅತಿಥಿಗಳಿಗೆ ಆಹಾರವನ್ನು ನೀಡುವ ಹೊರತು ಹೊರಗಡೆಯವರಿಗೆ ಹೋಟೆಲ್‌ಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿತ್ತು.
ಆದಾಗ್ಯೂ, 21 ದಿನಗಳ ಲಾಕ್‌ಡೌನ್ ಅವಧಿಯಲ್ಲೂ ಆಹಾರ ವಿತರಣಾ ಕಾರ್ಯಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದ್ದು, ಇವುಗಳು ಅಗತ್ಯ ಸೇವೆಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಏತನ್ಮಧ್ಯೆ, ಕರೋನವೈರಸ್ COVID-19 ಸಾಂಕ್ರಾಮಿಕ ರೋಗದಿಂದಾಗಿ ದೇಶವು "ಸಾಮಾಜಿಕ ತುರ್ತುಸ್ಥಿತಿ" ಯನ್ನು ಎದುರಿಸುತ್ತಿರುವ ಕಾರಣ ಒಂದೇ ಬಾರಿಗೆ ಲಾಕ್‌ಡೌನ್‌ನಿಂದ ಸಂಪೂರ್ಣ ನಿರ್ಗಮನ ಸಾಧ್ಯವಿಲ್ಲ ಎಂಬ ಬಗ್ಗೆ ಹಲವು ಸುಳಿವು ದೊರೆತಿದೆ.