Corona Vaccination Today- ಕೊರೊನಾ ಅಂತ್ಯಕ್ಕೆ ಇಂದು ಆರಂಭ, Fake News ಬಗ್ಗೆ ಎಚ್ಚರ

Corona Vaccination Today-ಮೇಡ್ ಇನ್ ಇಂಡಿಯಾ ಎರಡು ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಸುರಕ್ಷಿತವಾಗಿವೆ  ಎಂದು ಕೇಂದ್ರ ಸರ್ಕಾರ ರಚಿಸಿರುವ Covid -19 ಲಸಿಕೆ ತಜ್ಞರ ಸಮಿತಿಯ ಅಧ್ಯಕ್ಷ ಡಾ.ವಿ.ಕೆ. ಪಾಲ್ ಹೇಳಿದ್ದಾರೆ. ಎರಡೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.

Written by - Nitin Tabib | Last Updated : Jan 16, 2021, 10:59 AM IST
  • ವಿಶ್ವದ ಅತ್ಯಂತ ದೊಡ್ಡ ಲಸಿಕಾಕರಣ ಅಭಿಯಾನ.
  • ಭಾರತೀಯ ವ್ಯಾಕ್ಸಿನ್ ಗಳು ಸುರಕ್ಷಿತವಾಗಿವೆ.
  • ಫ್ರಂಟ್ ಲೈನ್ ವಾರಿಯರ್ಸ್ ಗೆ ಎಲ್ಲಕ್ಕಿಂತ ಮೊದಲು ಉಚಿತ ಲಸಿಕೆ ನೀಡಲಾಗುವುದು
Corona Vaccination Today- ಕೊರೊನಾ ಅಂತ್ಯಕ್ಕೆ ಇಂದು ಆರಂಭ, Fake News ಬಗ್ಗೆ ಎಚ್ಚರ title=
Corona Vaccination (File Photo)

Corona Vaccination Today-ನವದೆಹಲಿ: ವಿಶ್ವದ ಅತಿ ದೊಡ್ಡ ಕೊರೊನಾ ವ್ಯಾಕ್ಸಿನೇಷನ್ ಕಾರ್ಯಕ್ರಮದ ಕುರಿತು ದೇಶದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಇನ್ನೊಂದೆಡೆ ನಿಮಗೆ ನೀಡಲಾಗುತ್ತಿರುವ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸರ್ಕಾರ ಕೂಡ ಪದೇ ಪದೇ ಹೇಳುತ್ತಲೇ ಇದೆ. ದೇಶದ ಖ್ಯಾತ ತಜ್ಞ ವ್ಯಾಕ್ಸಿನೇಷನ್ ಆರಂಭದ ಶುಭ ದಿನದಂದು ಈ ಭರವಸೆ ವ್ಯಕ್ತಪಡಿಸಿದ್ದಾರೆ. ಇಡೀ ವಿಶ್ವ ಈ ಶುಭದಿನಕ್ಕಾಗಿ ಕಾತರದಿಂದ ಕಾಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಕೊರೊನಾ (Corona Virus)ವೈರಸ್ ಅಂತ್ಯಕ್ಕಾಗಿ ಬ್ರಹ್ಮಾಸ್ತ್ರ ಪ್ರಯೋಗ ನಡೆಯಲಿದೆ. ಭಾರತದ ಕೊರೊನಾ ಲಸಿಕೆಗಲಾಗಿರುವ ಕೋವಿಶೀಲ್ಡ್ (Covishield) ಹಾಗೂ ಕೊವ್ಯಾಕ್ಸಿನ್ (Covaxin) ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ವ್ಯಕ್ತಪಡಿಸಲಾಗುತ್ತಿದೆ.

ಭಯ ಬೇಡ, ಎರಡೂ ಲಸಿಕೆಗಳು ಸುರಕ್ಷಿತವಾಗಿವೆ
ಈ ಕುರಿತು ಶನಿವಾರ ಬೆಳಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ Covid-19 ತಜ್ಞರ ಸಮಿತಿ ಅಧ್ಯಕ್ಷ ಡಾ. ವಿ.ಕೆ . ಪಾಲ್, ಭಾರತದಲ್ಲಿ ನಿರ್ಮಿತಗೊಂಡ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಸುರಕ್ಷಿತವಾಗಿದ್ದು, ದೇಹದಲ್ಲಿ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಭಾವಶಾಲಿಯಾಗಿವೆ ಎಂದು ಹೇಳಿದ್ದಾರೆ.

ಕೊರೊನಾ ವಿಷಯದಲ್ಲಿ ಪರಿಣಿತಿ ಹೊಂದಿದ ಹಾಗೂ ನಿಟಿ ಆಯೋಗದ ಈ ಅಧಿಕಾರಿಯ ಹೇಳಿಕೆಯಿಂದ ದೇಶದ ನಾಗರಿಕರ ಭ್ರಮೆ ದೂರವಾಗಲಿದೆ ಎಂದು ನಿರೀಕ್ಷೆವ್ಯಕ್ತಪಡಿಸಲಾಗುತ್ತಿದೆ.

ಇದನ್ನು ಓದಿ- Coronavaccine ಹಾಕಿಸಿಕೊಂಡ ಬಳಿಕ ಮಹಾಮಾರಿಯ ಅಪಾಯ ತಪ್ಪುತ್ತಾ....? ಉತ್ತರಕ್ಕಾಗಿ ಇಲ್ಲಿಗೆ ಭೇಟಿ ನೀಡಿ

ಕೊರೊನಾ ಹೆಮ್ಮಾರಿ ಜೀವನ ಬದುಕುವ ಶೈಲಿಯನ್ನೇ ಬದಲಾಯಿಸಿದೆ. ಭಾರತದ ಕೊರೊನಾ ಫೈಟರ್ ಗಳ ಕುರಿತು ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಮುಂಚೂಣಿಯಲ್ಲಿರುವ ಇವರಿಗೆ ಮೊಟ್ಟಮೊದಲು ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಏತನ್ಮಧ್ಯೆ ದೇಶದ ಆರೋಗ್ಯ ಸಚಿವಾಲಯ ಕೂಡ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಇದನ್ನು ಓದಿ-ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ?

ಸಂತಸದ ಸುದ್ದಿಯ ಜೊತೆಗೆ ಈ ಸಂಗತಿಯ ಬಗ್ಗೆ ಜಾಗ್ರತೆ
ಭಾರತದಲ್ಲಿ ಕೊರೊನಾ ಮಹಾಮಾರಿಯಿಂದ ಪಾರಾಗಲು ಲಸಿಕಾಕರಣ (Corona Vaccination) ಅಭಿಯಾನ ಆರಂಭಕ್ಕೂ ಮೊದಲೇ ವ್ಯಾಕ್ಸಿನ್ ಹೆಸರಿನಲ್ಲಿ ವಂಚನೆ ಕೂಡ ಆರಂಭಗೊಂಡಿದೆ. ಲಸಿಕೆ ಹಾಕಿಸಿಕೊಳ್ಳುವ ಉತ್ಸಾಹದಲ್ಲಿ ಕೆಲ ಜನರು ಫೇಕ್ ನ್ಯೂಸ್ ಬಲೆಗೆ ಬಿದ್ದಿದ್ದಾರೆ. ದೇಶಾದ್ಯಂತ CoWIN ಆಪ್ ಮೂಲಕ ಈ ಅಮೃತಂಗಮಯ ಅಭಿಯಾನ ನಡೆಸಲಾಗುತ್ತಿದೆ. ಆದರೆ ಇದುವರೆಗೆ ಈ ಆಪ್ ಬಿಡುಗಡೆ ಮಾಡಲಾಗಿಲ್ಲ. ಇನ್ನೊಂದೆಡೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ CoWINಗೆ ಹೋಲಿಕೆಯಾಗುವ ಹೆಸರಿನಡಿ ಅರ್ಧ ಡಜನ್ ಗೂ ಅಧಿಕ ಆಪ್ ಗಳು ಪ್ರಕಟಗೊಂಡಿವೆ. ಪ್ಲೇ ಸ್ಟೋರ್ ನಲ್ಲಿ 3 ಆಪ್ ಗಳು CoWIN ಹೆಸರನ್ನು ಹೋಲುತ್ತವೆ. ಇದುವರೆಗೆ ಸುಮಾರು 10 ಸಾವಿರಕ್ಕೂ ಅಧಿಕ ಜನರು ಈ ಆಪ್ ಅನ್ನು ಡೌನ್ ಲೋಡ್ ಮಾಡಿದ್ದಾರೆ. ಈ ಆಪ್ ಗಳನ್ನು ಮೊಬೈಲ್ ನಲ್ಲಿ ಸ್ಥಾಪಿಸುತ್ತಲೇ ಇವು ನಿಮ್ಮ ಫೋನ್ ನಲ್ಲಿರುವ ಫೋಟೋ, ಕಾಂಟಾಕ್ಟ್ ಇತ್ಯಾದಿ ಮಾಹಿತಿಗಳನ್ನು ಕಲೆಹಾಕುತ್ತವೆ. ಇದುವರೆಗೆ ಹಲವು ಜನರು ಈ ಆಪ್ ಗಳಿಗೆ ತಮ್ಮ ವೈಯಕ್ತಿಕ ಮಾಹಿತಿ ಒದಗಿಸಿದ್ದಾರೆ. ಆದರೆ ಹಲವು ಜನರು ಈ ಆಪ್ ಗಳಿಗೆ ರಿವ್ಯೂ ಬರೆದು ಇವು ಫೇಕ್ ಆಪ್ ಗಳಾಗಿವೆ ಎಂದು ಹೇಳಿದ್ದಾರೆ. ಈ ನಕಲಿ ಆಪ್ ಗಳು ಜನರ ಸಂಕಷ್ಟ ಹೆಚ್ಚಿಸಲಿರುವ ಕಾರಣ ಎಚ್ಚರಿಕೆ ವಹಿಸುವ ಆವಶ್ಯಕತೆ ಇದೆ. ಯಾವುದೇ ರೀತಿಯ ಆಮೀಷಗಳಿಗೆ ಅಥವಾ ಫೇಕ್ ನ್ಯೂಸ್ ಗಳಿಗೆ ಬಲಿಯಾಗಬೇಡಿ ಹಾಗೂ ಇತರರನ್ನು ಕೂಡ ಇದರಿಂದ ರಕ್ಷಿಸಿ.

ಇದನ್ನು ಓದಿ- ಇಂದಿನಿಂದ ದೇಶಾದ್ಯಂತ ಮೊದಲ ಹಂತದ Covid Vaccine ನೀಡುವ ಅಭಿಯಾನ ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News