General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1 - ಯಾವ ದೇಶವನ್ನು ‘ಲ್ಯಾಂಡ್ ಆಫ್ ಥಂಡರ್ಬೋಲ್ಟ್’ ಎಂದು ಕರೆಯುತ್ತಾರೆ?
(ಎ) ಜಪಾನ್
(ಬಿ) ಮಲೇಷ್ಯಾ
(ಸಿ) ಭೂತಾನ್
(ಡಿ) ಜರ್ಮನಿ
ಉತ್ತರ 1 (ಸಿ) ಭೂತಾನ್ - ಭೂತಾನ್ ಅನ್ನು ಲ್ಯಾಂಡ್ ಆಫ್ ಥಂಡರ್ಬೋಲ್ಟ್ ಎಂದು ಕರೆಯಲಾಗುತ್ತದೆ. ಹಿಮಾಲಯ ಕಣಿವೆಯ ಮೂಲಕ ಬರುವ ಅತ್ಯಂತ ದೊಡ್ಡ ಬಿರುಗಾಳಿಗಳಿಂದಾಗಿ ಭೂತಾನ್ ಅನ್ನು ಥಂಡರ್ಬೋಲ್ಟ್ಗಳ ನಾಡು ಎಂದು ಗುರುತಿಸಲಾಗಿದೆ.
ಪ್ರಶ್ನೆ 2 - 'ದೆಹಲಿ'ಯನ್ನು ಯಾವಾಗ ಭಾರತದ ರಾಜಧಾನಿಯನ್ನಾಗಿ ಮಾಡಲಾಯಿತು?
(ಎ) 1955
(ಬಿ) 1974
(ಸಿ) 1911
(ಡಿ) 1947
ಉತ್ತರ 2 (ಸಿ) 1911 - ಕಿಂಗ್ ಜಾರ್ಜ್ V ಅವರು 1911ರ ಡಿಸೆಂಬರ್ 12ರಂದು ದೆಹಲಿ ದರ್ಬಾರ್‌ನಲ್ಲಿ ಅದರ ಅಡಿಪಾಯವನ್ನು ಹಾಕಿದರು. ನಂತರ ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಹರ್ಬರ್ಟ್ ಬೇಕರ್ ಮತ್ತು ಸರ್ ಎಡ್ವಿನ್ ಲುಟ್ಯೆನ್ಸ್ ಹೊಸ ನಗರವನ್ನು ಯೋಜಿಸಿದರು. ಈ ಯೋಜನೆಯನ್ನು ಪೂರ್ಣಗೊಳಿಸಲು 2 ದಶಕಗಳು ಬೇಕಾಯಿತು. ಇದರ ನಂತರ ದೆಹಲಿ ಅಧಿಕೃತವಾಗಿ 13 ಫೆಬ್ರವರಿ 1931ರಂದು ದೇಶದ ರಾಜಧಾನಿಯಾಯಿತು.
ಇದನ್ನೂ ಓದಿ: Daily GK Quiz: ಪ್ರಪಂಚದ 90% ಭಿಕ್ಷುಕರು ವಾಸಿಸುವ ದೇಶ ಯಾವುದು?
ಪ್ರಶ್ನೆ 3 - ಯಾವ ಗ್ರಹವು ಹೆಚ್ಚು ಚಂದ್ರರನ್ನು ಹೊಂದಿದೆ?
(ಎ) ಶುಕ್ರ
(ಬಿ) ನೆಪ್ಚೂನ್
(ಸಿ) ಗುರು
(ಡಿ) ಶನಿ
ಉತ್ತರ 3 (ಡಿ) ಶನಿ - ಅತಿಹೆಚ್ಚು ಚಂದ್ರ ಅಥವಾ ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವ ಗ್ರಹ ಶನಿ. ಇದು 82 ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಶನಿಯ ಅತಿದೊಡ್ಡ ಉಪಗ್ರಹ ಟೈಟಾನ್.
ಪ್ರಶ್ನೆ 4 - ಭಾರತದ ರಾಷ್ಟ್ರಧ್ವಜದ ಅನುಪಾತ ಏನು?
(a) 2:3
(b) 3:2
(c) 6:4
(d) 2:1
ಉತ್ತರ 4 (ಬಿ) 3:2 - ಭಾರತದ ರಾಷ್ಟ್ರೀಯ ಧ್ವಜ 'ತ್ರಿವರ್ಣ'ದ ಉದ್ದ ಮತ್ತು ಅಗಲದ ಅನುಪಾತವು 3:2 ಆಗಿದೆ.
ಪ್ರಶ್ನೆ 5 - ಇಡೀ ಪ್ರಪಂಚದಲ್ಲಿ ಯಾವ ದೇಶವು ಹೆಚ್ಚು ವಿದ್ಯಾವಂತವಾಗಿದೆ?
(ಎ) ಅಮೆರಿಕ
(ಬಿ) ಕೆನಡಾ
(ಸಿ) ಭಾರತ
(ಡಿ) ಯುನೈಟೆಡ್ ಕಿಂಗ್‌ಡಮ್
ಉತ್ತರ 5 (ಬಿ) ಕೆನಡಾ - ವಾಸ್ತವವಾಗಿ ಕೆನಡಾ ಇಡೀ ಪ್ರಪಂಚದಲ್ಲಿ ಹೆಚ್ಚು ವಿದ್ಯಾವಂತ ದೇಶವಾಗಿದೆ.
ಇದನ್ನೂ ಓದಿ: Daily GK Quiz: ಭಾರತದ ಯಾವ ನಗರವನ್ನು "ಸುಗಂಧಗಳ ನಗರ" ಎಂದು ಕರೆಯಲಾಗುತ್ತದೆ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.