ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

ಮಂಗಳವಾರ ಬೆಳಿಗ್ಗೆ ನಾಗ್ಪುರದಿಂದ ಹೊರಟ ಈ ವಿಮಾನವು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತು.

Updated: Aug 13, 2019 , 12:18 PM IST
ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹಿತ ಹಲವು ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನದಲ್ಲಿ 'ಗಂಭೀರ ತಾಂತ್ರಿಕ ಸಮಸ್ಯೆ'ಕಂಡು ಬಂದ ಕಾರಣ ಹಾರಾಟ ಸ್ಥಗಿತಗೊಳಿಸಿರುವ ವಿದ್ಯಮಾನ ಮಂಗಳವಾರ ಬೆಳಗ್ಗೆ ನಡೆದಿದೆ. 

ಮಂಗಳವಾರ ಬೆಳಿಗ್ಗೆ ನಾಗ್ಪುರದಿಂದ ಹೊರಟ ದೆಹಲಿ ಮೂಲದ ಇಂಡಿಗೊ ವಿಮಾನದಲ್ಲಿ 'ಗಂಭೀರ ತಾಂತ್ರಿಕ ದೋಷ' ಕಂಡು ಬಂದ ಕಾರಣ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಡಿಬೋರ್ಡ್ ಮಾಡಲಾಗಿದೆ.

ಇಂಡಿಗೊ ಫ್ಲೈಟ್ 6 ಇ 636 ರ ಪೈಲಟ್ ದೋಷವನ್ನು ಗಮನಿಸಿದ ನಂತರ ಟೇಕ್-ಆಫ್ ಸ್ಥಗಿತಗೊಳಿಸಲು ನಿರ್ಧರಿಸಿದರು.  ಇನ್ನೇನು ಟೇಕ್ ಆಫ್ ಗೆ ಕೆಲವೇ ಸೆಕೆಂಡ್‌ಗಳಿದ್ದಾಗ ಗಂಭೀರ ಸಮಸ್ಯೆಯನ್ನು ಪತ್ತೆ ಹಚ್ಚಿ ಪೈಲಟ್ ಸಮಯಪ್ರಜ್ಞೆ ಮೆರೆದರು. ಪೈಲಟ್ ಟೇಆಫ್‌ನ್ನು ಸ್ಥಗಿತಗೊಳಿಸಿದ ಬಳಿಕ ವಿಮಾನ ರನ್‌ವೇನಿಂದ ಟ್ಯಾಕ್ಸಿವೇಗೆ ವಾಪಸಾಯಿತು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.