ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ಮೂರುವರೆ ದಿನಗಳಲ್ಲಿ ರಾಜೀನಾಮೆ ನೀಡಿದ ದೇವೇಂದ್ರ ಫಡ್ನವೀಸ್(Devendra Fadnavis), ಅವರ ಪತ್ನಿ ಅಮೃತ ಫಡ್ನವೀಸ್(Amruta Fadnavis) ಟ್ವೀಟ್ ಮಾಡಿದ್ದಾರೆ.
ದೇವೇಂದ್ರ ಫಡ್ನವೀಸ್(Devendra Fadnavis) ರಾಜೀನಾಮೆ ಬಳಿಕ ಟ್ವೀಟ್ ಮಾಡಿರುವ ಅವರ ಪತ್ನಿ ಅಮೃತ ಫಡ್ನವೀಸ್, ಮತ್ತೆ ನಾವು ಜನರ ಪ್ರೀತಿಯಿಂದಲೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹವಾಮಾನ ಬದಲಾವಣೆಗೆ ಅವಕಾಶ ನೀಡಲು ನಾವು ಸಿದ್ಧರಿದ್ದೇವೆ. 5 ವರ್ಷಗಳವರೆಗೆ ನಮಗೆ ನೀವು ನೀಡಿದ ಸಹಕಾರ ಅವಿಸ್ಮರಣೀಯ. ಅದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ಲಭಿಸಿದ ಪ್ರೀತಿ ಯಾವಾಗಲೂ ಹಚ್ಚ ಹಸಿರಾಗಿರುತ್ತದೆ! ನನ್ನ ಸಾಮರ್ಥ್ಯವನ್ನು ಉತ್ತಮವಾಗಿ ನಿರ್ವಹಿಸಲು ನಾನು ಪ್ರಯತ್ನಿಸಿದೆ-ಸೇವೆ ಮಾಡಲು ಮತ್ತು ಸಕಾರಾತ್ಮಕ ವ್ಯತ್ಯಾಸವನ್ನು ಮಾಡುವ ಬಯಕೆಯೊಂದಿಗೆ... ಎಂದು ಟ್ವೀಟ್ ಮಾಡಿದ್ದಾರೆ.
पलट के आऊंगी शाखों पे खुशबुएँ लेकर,
खिज़ां की ज़द में हूँ मौसम ज़रा बदलने दे! Thanks Mah for memorable 5yrs as your वहिनी !The love showered by you will always make me nostalgic! I tried to perform my role to best of my abilities-with desire only to serve & make a positive diff🙏 pic.twitter.com/ePUzQgR9o5— AMRUTA FADNAVIS (@fadnavis_amruta) November 26, 2019
ನಿನ್ನೆ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜೀನಾಮೆ ಪ್ರಕಟಿಸಿದ ದೇವೇಂದ್ರ ಫಡ್ನವೀಸ್, ಶಿವಸೇನೆ(Shiv Sena), ಕಾಂಗ್ರೆಸ್(Congress) ಮತ್ತು ಎನ್‌ಸಿಪಿ(NCP) ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸುವವರು ಯಾರೆಂದು ನಾನು ಚೆನ್ನಾಗಿ ಬಲ್ಲೆ, ಅದೊಂದು ಅಸ್ಥಿರವಾದ ಸರ್ಕಾರ. ಈ ಸರ್ಕಾರದಲ್ಲಿ ಚಕ್ರಗಳು ಮೂರು ವಿಭಿನ್ನ ದಿಕ್ಕುಗಳಲ್ಲಿ ಸಾಗುತ್ತದೆ ಎಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ಜನರ ಆದೇಶವಿತ್ತು. ಹಾಗಾಗಿ ನಾವು ಸರ್ಕಾರ ರಚಿಸಲು ಪ್ರಯತ್ನಿಸಿದ್ದೆವು. ಆದರೆ ಇದೊಂದು ಸಂಖ್ಯೆಯ ಆಟ ಎಂದು ಶಿವಸೇನೆ ಅರಿತುಕೊಂಡಿದೆ. ಇದೇ ವೇಳೆ ಅವರ ಚೌಕಾಶಿಯ ಶಕ್ತಿ ಹೆಚ್ಚಾಗಬಹುದು ಎಂದು ನಾವೂ ಅರಿತುಕೊಂಡಿದ್ದೇವೆ ಎಂದು ತನ್ನ ಒಂದು ಕಾಲದ ಮಿತ್ರ ಪಕ್ಷವಾಗಿದ್ದ ಶಿವಸೇನೆ ವಿರುದ್ಧ ವಾಗ್ಧಾಳಿ ನಡೆಸಿದರು.