ಪ್ರಧಾನಿ ಮೋದಿ ಮಾನವ ಹಕ್ಕು ಹೋರಾಟಗಾರರನ್ನು ಟಾರ್ಗೆಟ್ ಮಾಡುತ್ತಿದ್ದಾರೆ- ಅಮ್ನೆಸ್ಟಿ ಇಂಟರ್ನ್ಯಾಷನಲ್

ಭಾರತದಲ್ಲಿ ಮಾನವ ಹಕ್ಕು ಸಂಘಟನೆಗಳ ವಿರುದ್ದ ನಡೆಯುತ್ತಿರುವ ಶಿಸ್ತುಕ್ರಮವನ್ನು ವಿರೋಧಿಸಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರತಿಭಟನಾಕಾರರು ಯುಕೆಯಲ್ಲಿರುವ ಭಾರತದ ಹೈಕಮಿಷನ್ ಎದುರು ಪ್ರತಿಭಟನೆ ಮಾಡಿದರು.  

Last Updated : Dec 1, 2018, 11:51 AM IST
ಪ್ರಧಾನಿ ಮೋದಿ ಮಾನವ ಹಕ್ಕು ಹೋರಾಟಗಾರರನ್ನು ಟಾರ್ಗೆಟ್ ಮಾಡುತ್ತಿದ್ದಾರೆ- ಅಮ್ನೆಸ್ಟಿ ಇಂಟರ್ನ್ಯಾಷನಲ್ title=

ನವದೆಹಲಿ: ಭಾರತದಲ್ಲಿ ಮಾನವ ಹಕ್ಕು ಸಂಘಟನೆಗಳ ವಿರುದ್ದ ನಡೆಯುತ್ತಿರುವ ಶಿಸ್ತುಕ್ರಮವನ್ನು ವಿರೋಧಿಸಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರತಿಭಟನಾಕಾರರು ಯುಕೆಯಲ್ಲಿರುವ ಭಾರತದ ಹೈಕಮಿಷನ್ ಎದುರು ಪ್ರತಿಭಟನೆ ಮಾಡಿದರು.  

ಅಮ್ನೆಸ್ಟಿ ಯುಕೆ ತನ್ನ ಟ್ವೀಟ್ ನಲ್ಲಿ  "ಭಾರತದ ಪ್ರಧಾನಿ ನರೇಂದ್ರ ಮೋದಿ ಮಾನವ ಹಕ್ಕುಗಳನ್ನು ರಕ್ಷಿಸುವ ಭರವಸೆ ನೀಡಿದ್ದರು.ಆದರೆ ಅದರ ಬದಲಿಗೆ ಅವರು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ದತ್ತಿಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡಿದ್ದಾರೆ! ಇಂದು ಪ್ರಧಾನಿ ಮೋದಿ ಜಿ 20  ಶೃಂಗ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆದ್ದರಿಂದ ಪ್ರಭಾವಿ ನಾಯಕರು ದತ್ತಿ ಸಂಸ್ಥೆಗಳಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ ಎನ್ನುವುದನ್ನು ಅವರಿಗೆ ನೆನಪಿಸುತ್ತೇವೆ" ಎಂದು ಟ್ವೀಟ್ ಮಾಡಿದೆ.

ಶುಕ್ರವಾರದಂದು ಯುಕೆಯಲ್ಲಿರುವ  ಭಾರತದ ಹೈಕಮಿಷನ್ ಕಚೇರಿ ಎದುರು ಪ್ರತಿಭಟನಾಕಾರರು ಭಾರತದ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.ಪ್ರಧಾನಿ ಮೋದಿ ಅವರು ಅರ್ಜೆಂಟಿನಾದಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ಹಿನ್ನಲೆಯಲ್ಲಿ ಈ  ಪ್ರತಿಭಟನೆ ನಡೆದಿದೆ. 

 

 

Trending News