/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಯಾವುದೇ ಕಾರಣಕ್ಕಾಗಿ ನಿಮ್ಮ ಆಧಾರ್ (Aadhaar) ಕಳೆದುಹೋಗಿದ್ದರೆ ಅಥವಾ ಮಿಸ್ ಆಗಿದ್ದರೆ ನೀವು ಬದಲಿಗೆ ಇ-ಆಧಾರ್ ಅನ್ನು ಬಳಸಬಹುದು. ಆಧಾರ್ ಕಾಯ್ದೆಯ ಪ್ರಕಾರ ಆಧಾರ್‌ನ ಭೌತಿಕ ನಕಲು ಅಂದರೆ ಭೌತಿಕ ನಕಲಿನಂತೆ ಎಲ್ಲಾ ಉದ್ದೇಶಗಳಿಗೆ ಇ-ಆಧಾರ್ ಸಮಾನವಾಗಿ ಮಾನ್ಯವಾಗಿರುತ್ತದೆ. ಕೆಲವು ಕಾರಣಗಳಿಂದಾಗಿ ನಾಗರಿಕರು ದಾಖಲಾತಿಯ ನಂತರ ಆಧಾರ್ ಕಾರ್ಡ್ ತಲುಪಲು ವಿಳಂಬವಾಗಿದ್ದರೆ ಅಥವಾ ಅವನ ಕಾರ್ಡ್ ಕಳೆದುಹೋದರೆ, ಅವನು ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಣವನ್ನು ತೆಗೆದುಕೊಳ್ಳಬಹುದು.

ಈಗ ನಿಮ್ಮ ಬ್ಯಾಂಕಿಂಗ್ ಕೆಲಸವನ್ನು ವಾಟ್ಸಾಪ್ನಿಂದ ಸುಲಭವಾಗಿ ಪೂರ್ಣಗೊಳಿಸಿ

ಅದನ್ನು ಪಡೆಯಲು ನಿಮಗೆ ವಿಶೇಷ ಸಾಫ್ಟ್‌ವೇರ್ ಜೊತೆಗೆ ವಿಶೇಷ ಪಾಸ್‌ವರ್ಡ್ ಅಗತ್ಯವಿದೆ. ಇಂದು ನಾವು ಅದರ ಬಗ್ಗೆ ಎಲ್ಲಾ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ಇ-ಆಧಾರ್‌ಗೆ (e-aadhaar) ಸಂಬಂಧಿಸಿದ ಸಾಫ್ಟ್‌ವೇರ್ ಅನ್ನು ನೀವು ಎಲ್ಲಿಂದ ಡೌನ್‌ಲೋಡ್ ಮಾಡಬಹುದು. ಅದನ್ನು ಹೇಗೆ ಬಳಸಬೇಕೆಂದು ಎಂದು ನಾವು ನಿಮಗೆ ತಿಳಿಸುತ್ತೇವೆ. ಇದಲ್ಲದೆ ಮುದ್ರಣದ ಸಮಯದಲ್ಲಿ ನಿಮ್ಮನ್ನು ಪಾಸ್‌ವರ್ಡ್ ಕೇಳಲಾಗುತ್ತದೆ.

ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಇ-ಆಧಾರ್ (e- Aadhaar) ಡೌನ್‌ಲೋಡ್ ಪ್ರಕ್ರಿಯೆ:
1. https://uidai.gov.in/ ನಲ್ಲಿ 'ನನ್ನ ಆಧಾರ್' ವಿಭಾಗದಲ್ಲಿ 'ಡೌನ್‌ಲೋಡ್ ಆಧಾರ್' ಕ್ಲಿಕ್ ಮಾಡಿ.
2. ಇದರ ನಂತರ ಹೊಸ ಪುಟವನ್ನು https://eaadhaar.uidai.gov.in/#/ ನಲ್ಲಿ ತಲುಪಲಾಗುವುದು.
3. ಇಲ್ಲಿ ನಿಮ್ಮೊಂದಿಗೆ ಲಭ್ಯವಿರುವ ಆಧಾರ್ ಸಂಖ್ಯೆ ದಾಖಲಾತಿ ಐಡಿ ಅಥವಾ ವರ್ಚುವಲ್ ಐಡಿ ಆಯ್ಕೆಮಾಡಿ.
4. ನಿಗದಿತ ಜಾಗದಲ್ಲಿ ಆಧಾರ್ ಸಂಖ್ಯೆ ಅಥವಾ ದಾಖಲಾತಿ ಸಂಖ್ಯೆ ಅಥವಾ ವರ್ಚುವಲ್ ಐಡಿ ನಮೂದಿಸಿ.
5. ಇದರ ನಂತರ ಹೆಸರು, ಪಿನ್ ಕೋಡ್, ಸೆಕ್ಯುರಿಟಿ ಕೋಡ್ ಮುಂತಾದ ಅಗತ್ಯ ವಿವರಗಳನ್ನು ನಮೂದಿಸಬೇಕು.
6. ನೀವು ಮಾಸ್ಕ್ಡ್ ಆಧಾರ್ ಬಯಸಿದರೆ, ಅದರ ಆಯ್ಕೆಯನ್ನು ಟಿಕ್ ಮಾಡಿ. ಮಾಸ್ಕ್ಡ್ ಆಧಾರ್ ಆಯ್ಕೆಯನ್ನು ಆರಿಸಿದಾಗ ಡೌನ್‌ಲೋಡ್ ಮಾಡಲಾದ ಇ-ಆಧಾರ್‌ನಲ್ಲಿ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳು ಮಾತ್ರ ಗೋಚರಿಸುತ್ತವೆ. ಆರಂಭದ 8 ಅಂಕಿಗಳನ್ನು ಮರೆಮಾಡಲಾಗಿದೆ.
7. ನಂತರ ಒಟಿಪಿ ವಿನಂತಿಯನ್ನು ಕಳುಹಿಸಿ. ಆಧಾರ್ ಮಾಡುವಾಗ ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ.
8. ನಿಗದಿತ ಜಾಗದಲ್ಲಿ ಒಟಿಪಿ ಸೇರಿಸಿ. ಇದರ ನಂತರ, 'ಪರಿಶೀಲಿಸಿ ಮತ್ತು ಆಧಾರ್ ಡೌನ್‌ಲೋಡ್ ಮಾಡಿ' ಕ್ಲಿಕ್ ಮಾಡಿ.
9. ನಿಮ್ಮ ಆಧಾರ್ ಇ-ನಕಲನ್ನು ಡೌನ್‌ಲೋಡ್ ಮಾಡಲಾಗುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ

ಏನಿದು ಇ-ಪಾಸ್ವರ್ಡ್ ?
ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳು ಅಂದರೆ ಇಂಗ್ಲಿಷ್‌ನ ಮೊದಲ ನಾಲ್ಕು ಅಕ್ಷರಗಳನ್ನು ಮೊದಲು ದೊಡ್ಡ ಅಕ್ಷರಗಳಲ್ಲಿ ನಮೂದಿಸಬೇಕಾಗುತ್ತದೆ. ಇದರ ನಂತರ ನೀವು ಹುಟ್ಟಿದ ವರ್ಷವನ್ನು ನಮೂದಿಸಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಹೆಸರು ಅದಿತಿ ಕುಮಾರಿ ಮತ್ತು ನೀವು 1990 ರಲ್ಲಿ ಜನಿಸಿದ್ದರೆ, ನೀವು ASHW1990 ಅನ್ನು ಪಾಸ್‌ವರ್ಡ್ ಆಗಿ ಇಲ್ಲಿ ನಮೂದಿಸಬೇಕು. ಯಾರೊಬ್ಬರ ಹೆಸರು ಕೇವಲ ಮೂರು ಅಕ್ಷರಗಳಾಗಿದ್ದರೆ, ನೀವು ಹೆಸರಿನ ಮೊದಲ ಮೂರು ಅಕ್ಷರಗಳನ್ನು ನಮೂದಿಸಬೇಕು ಮತ್ತು ನಂತರ ನಿಮ್ಮ ಆರ್ಥಿಕ ವರ್ಷವನ್ನು ಈ ಪಾಸ್‌ವರ್ಡ್‌ನೊಂದಿಗೆ ನೀವು ಡೌನ್‌ಲೋಡ್ ಮಾಡಿ ಇ-ಆಧಾರ್ ಅನ್ನು ಮುದ್ರಿಸಬಹುದು.

Section: 
English Title: 
Downloading e-Aadhaar is now very easy, just follow these tips
News Source: 
Home Title: 

e- Aadhaar ಡೌನ್‌ಲೋಡ್ ಮಾಡುವುದು ಈಗ ಇನ್ನೂ ಸುಲಭ

e- Aadhaar ಡೌನ್‌ಲೋಡ್ ಮಾಡುವುದು ಈಗ ಇನ್ನೂ ಸುಲಭ
Yes
Is Blog?: 
No
Tags: 
Facebook Instant Article: 
Yes
Mobile Title: 
e- Aadhaar ಡೌನ್‌ಲೋಡ್ ಮಾಡುವುದು ಈಗ ಇನ್ನೂ ಸುಲಭ
Publish Later: 
No
Publish At: 
Tuesday, July 14, 2020 - 12:06
Created By: 
Yashaswini V
Updated By: 
Yashaswini V
Published By: 
Yashaswini V