ಬಿಕಾನೆರ್: ರಾಜಸ್ಥಾನದ ಬಿಕಾನೆರ್‌ನಲ್ಲಿ ಬಲವಾದ ಭೂಕಂಪನ (Earthquake in Bikaner) ಸಂಭವಿಸಿದೆ, ಇದರ ತೀವ್ರತೆಯು ರಿಕ್ಟರ್ ಪ್ರಮಾಣದಲ್ಲಿ 5.3 ಎಂದು ದಾಖಲಾಗಿದೆ. ಮುಂಜಾನೆ 5: 24 ಕ್ಕೆ ಬಿಕಾನೇರ್‌ನಲ್ಲಿ ಈ ಭೂಕಂಪ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Centre for Seismology) ತಿಳಿಸಿದೆ. ಭೂಕಂಪದಿಂದ ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ.
An earthquake of magnitude 5.3 on the Richter scale hit Bikaner, Rajasthan at 5:24 am today: National Centre for Seismology
— ANI (@ANI) July 21, 2021
ಮೇಘಾಲಯ-ಲಡಾಖ್‌ನಲ್ಲೂ ನಡುಗಿದ ಭೂಮಿ :
ರಾಜಸ್ಥಾನದ ಬಿಕಾನೆರ್‌ನಲ್ಲಿ ಭೂಕಂಪ (Earthquake in Bikaner) ಸಂಭವಿಸುವ ಮೊದಲು ಮಧ್ಯರಾತ್ರಿ 2.10 ರ ಸುಮಾರಿಗೆ ಮೇಘಾಲಯದಲ್ಲಿ ಭೂಕಂಪದ ನಡುಕ ಉಂಟಾಗಿದೆ, ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.1 ಎಂದು ಅಳೆಯಲಾಗಿದೆ. ವರದಿಯ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಪಶ್ಚಿಮ ಗಾರೊ ಹಿಲ್ಸ್, ಆದರೆ ಇದುವರೆಗೂ ಮೇಘಾಲಯದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.
An earthquake of magnitude 4.1 on the Richter scale hit West Garo Hills, Meghalaya at 2:10 am today: National Centre for Seismology
— ANI (@ANI) July 20, 2021
ಇದನ್ನೂ ಓದಿ- Shimla Earthquake: ಹಿಮಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ , 3.6 ತೀವ್ರತೆ ದಾಖಲು
ಇದಲ್ಲದೆ ಬೆಳಿಗ್ಗೆ 4.57 ರ ಸುಮಾರಿಗೆ ಲೇಹ್-ಲಡಾಖ್ ಪ್ರದೇಶದಲ್ಲಿ ಭೂಕಂಪದ (Earthquake) ನಡುಕ ಉಂಟಾಯಿತು, ರಿಕ್ಟರ್ ಪ್ರಮಾಣದಲ್ಲಿ ಇದರ ತೀವ್ರತೆಯು 3.6 ಆಗಿತ್ತು.
ಭೂಕಂಪ ಏಕೆ ಸಂಭವಿಸುತ್ತದೆ?
ಭೂಮಿಯೊಳಗೆ 7 ಫಲಕಗಳಿದ್ದು, ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಫಲಕಗಳು ಹೆಚ್ಚು ಘರ್ಷಿಸಿದಾಗ, ಆ ವಲಯವನ್ನು ದೋಷ ರೇಖೆ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ, ಫಲಕಗಳ ಮೂಲೆಗಳು ತಿರುಚಲ್ಪಟ್ಟು ಒತ್ತಡವು ಹೆಚ್ಚಾದಾಗ, ಫಲಕಗಳು ಒಡೆಯುತ್ತವೆ ಮತ್ತು ಕೆಳಗಿನ ಶಕ್ತಿಯು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ನಂತರ ಭೂಕಂಪ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Earthquake Hits Jammu and Kashmir : ಕಾಶ್ಮೀರದಲ್ಲಿ ಭೂಕಂಪ , ಹಿಮಾಲಯದ ಮಡಿಲಲ್ಲೇಕೆ ಭೂಮಿ ಕಂಪಿಸುತ್ತಿದೆ..?
ರಿಕ್ಟರ್ ಸ್ಕೇಲ್ | ಪರಿಣಾಮ |
0 ರಿಂದ 1.9 ತೀವ್ರತೆ | ಇದನ್ನು ಸೀಸ್ಮೋಗ್ರಾಫ್ ಮೂಲಕ ಮಾತ್ರ ನೋಡಬಹುದು. |
2 ರಿಂದ 2.9 ತೀವ್ರತೆ | ಸೌಮ್ಯ ನಡುಕ |
3 ರಿಂದ 3.9 ತೀವ್ರತೆ | ಹೆವಿ ಟ್ರಕ್ ನಿಮ್ಮ ಹತ್ತಿರ ಹಾದು ಹೋದಾಗ ಆಗುವಂತಹ ಅನುಭವ |
4 ರಿಂದ 4.9 ತೀವ್ರತೆ | ಕಿಟಕಿಗಳನ್ನು ಮುರಿಯಬಹುದು. ಗೋಡೆಗಳ ಮೇಲೆ ನೇತಾಡುವ ಚೌಕಟ್ಟುಗಳು ಬೀಳಬಹುದು. |
5 ರಿಂದ 5.9 ತೀವ್ರತೆ | ಪೀಠೋಪಕರಣಗಳು ಚಲಿಸಬಹುದು. |
6 ರಿಂದ 6.9 ತೀವ್ರತೆ | ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳು ಹಾನಿಗೊಳಗಾಗಬಹುದು. |
6 ರಿಂದ 6.9 ತೀವ್ರತೆ | ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳು ಹಾನಿಗೊಳಗಾಗಬಹುದು. |
7 ರಿಂದ 7.9 ತೀವ್ರತೆ | ಕಟ್ಟಡಗಳು ಬೀಳುತ್ತವೆ. ಪೈಪ್‌ಗಳು ನೆಲದೊಳಗೆ ಸಿಡಿಯುತ್ತವೆ. |
8 ರಿಂದ 8.9 ತೀವ್ರತೆ | ಕಟ್ಟಡಗಳು ಸೇರಿದಂತೆ ದೊಡ್ಡ ಸೇತುವೆಗಳು ಸಹ ಕುಸಿಯುತ್ತವೆ, ಸುನಾಮಿಯ ಅಪಾಯವಿದೆ. |
9 ಮತ್ತು ಅದಕ್ಕಿಂತ ಹೆಚ್ಚಿನ ತೀವ್ರತೆ | ಸಂಪೂರ್ಣ ವಿನಾಶ. ಸಮುದ್ರ ಸಮೀಪದಲ್ಲಿದ್ದರೆ, ಅಲ್ಲಿ ಸುನಾಮಿ ಅಪಾಯ |
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ