Shimla Earthquake: ಹಿಮಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ , 3.6 ತೀವ್ರತೆ ದಾಖಲು

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಗುರುವಾರ ಭೂಕಂಪದ ಉಂಟಾಗಿದೆ. 

Written by - Ranjitha R K | Last Updated : Jul 15, 2021, 09:19 PM IST
  • ಶಿಮ್ಲಾದಲ್ಲಿ ಗುರುವಾರ ನಡುಗಿದ ಭೂಮಿ
  • ಭೂಕಂದ ತೀವ್ರತೆ 3.6ರಷ್ಟು ದಾಖಲು
  • ಶಿಮ್ಲಾದಿಂದ 10 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು
Shimla Earthquake: ಹಿಮಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ , 3.6 ತೀವ್ರತೆ ದಾಖಲು  title=
ಶಿಮ್ಲಾದಲ್ಲಿ ಗುರುವಾರ ನಡುಗಿದ ಭೂಮಿ (photo india.com)

ನವದೆಹಲಿ : ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಗುರುವಾರ ಭೂಕಂಪದ (Shimla earthquake) ಉಂಟಾಗಿದೆ.  ರಾತ್ರಿ 7: 47ರ ಸುಮಾರಿಗೆ ಲಘು ಭೂಕಂಪ ಉಂಟಾಗಿದೆ.   ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.6ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದುವು ಶಿಮ್ಲಾದಿಂದ (Shimla) 10 ಕಿ.ಮೀ  ದೂರದಲ್ಲಿತ್ತು ಎನ್ನಲಾಗಿದೆ. 

ಇದಕ್ಕೂ ಮೊದಲು ಜುಲೈ 11 ರಂದು ಮಹಾರಾಷ್ಟ್ರದ (Maharastra) ಯವತ್ಮಾಲ್ ಜಿಲ್ಲೆ ಮತ್ತು  ಅಕ್ಕ ಪಕ್ಕದ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿತ್ತು. ಅಲ್ಲದೆ ಇದರ ತೀವ್ರತೆ 4.4 ರಷ್ಟು ದಾಖಲಾಗಿತ್ತು. 

 

Magnitude 3.6 earthquake hit Shimla, Himachal Pradesh at 7:47 pm today

ಇದನ್ನೂ ಓದಿ : ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಶಂಕಿತ ರಾಜಸ್ತಾನದ ವ್ಯಕ್ತಿ ಬಂಧಿಸಿದ ದೆಹಲಿ ಪೋಲಿಸ್
 
ಬೆಳಿಗ್ಗೆ 8.33 ರ ಸುಮಾರಿಗೆ ಭೂಮಿ ಕಂಪಿಸಿದ್ದು(Earth quake) , ಭೂಕಂಪದ ಕೇಂದ್ರಬಿಂದು ಯವತ್ಮಾಲ್ ಜಿಲ್ಲೆಯ ಸಾಧುನಗರದಲ್ಲಿತ್ತು ಎಂದು, ನೆರೆಯ ನಾಂದೇಡ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ವಿಪಿನ್ ಇಟಾಂಕರ್ ತಿಳಿಸಿದ್ದರು.  ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಅವರು ಮಾಹಿತಿ ನೀಡಿದ್ದರು. ಅಲ್ಲದೆ, ನಾಂದೇಡ್‌ನಲ್ಲೂ  ಭೂಕಂಪದ ಅನುಭವವಾಗಿತ್ತು ಎಂದವರು ಮಾಹಿತಿ ನೀಡಿದ್ದರು. 

ಇದನ್ನೂ ಓದಿ : ಚುನಾವಣಾ ಆಯೋಗವನ್ನು ಭೇಟಿಯಾಗಲಿರುವ ತೃಣಮೂಲ ಕಾಂಗ್ರೆಸ್ ನಿಯೋಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News