ಪಟ್ನಾ: ಪದವಿ ಮುಗಿಸಿ 2 ವರ್ಷಗಳ ಕಾಲ ಅಲೆದಾಡಿದರೂ ಕೆಲಸ ಸಿಗದ ಕಾರಣ ಅರ್ಥಶಾಸ್ತ್ರ ಪದವೀಧರೆಯೊಬ್ಬರು ಟೀ ಸ್ಟಾಲ್ ಸ್ಟಾಪಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ಪಟ್ನಾದ ಮಹಿಳಾ ಕಾಲೇಜು ಬಳಿ ಬಿಹಾರದ ಪ್ರಿಯಾಂಕಾ ಗುಪ್ತಾ ಅವರು ಉದ್ಯೋಗ ಸಿಗದ ಕಾರಣ ಟೀ ಸ್ಟಾಲ್ ತೆರೆದಿದ್ದಾರೆ.
2019ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪ್ರಿಯಾಂಕಾ ಗುಪ್ತಾ ಪದವಿ ಪಡೆದುಕೊಂಡಿದ್ದರು. ಬಳಿಕ ಉದ್ಯೋಗಕ್ಕಾಗಿ ಅನೇಕ ಬಾರಿ ಹುಡುಕಾಟ ನಡೆಸಿದ್ದರು. ಸೂಕ್ತ ಕೆಲಸಕ್ಕಾಗಿ ಹಲವು ಕಂಪನಿಗಳಿಗೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಪದವಿ ಪಡೆದುಕೊಂಡರೂ ಉದ್ಯೋಗ ಸಿಗದ ಕಾರಣ ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದರು. ಹೀಗಿರುವಾಗಲೇ ಅವರಿಗೆ ತಾನೇಕೆ ಟೀ ಸ್ಟಾಲ್ ತೆರೆಯಬಾರದೆಂಬ ಯೋಚನೆ ಬಂದಿದೆ.
Bihar: Priyanka Gupta, an economics graduate sets up a tea stall near Women's College in Patna
I did my UG in 2019 but was unable to get a job in the last 2 yrs. I took inspiration from Prafull Billore. There are many chaiwallas, why can't there be a chaiwali?, she says pic.twitter.com/8jfgwX4vSK
— ANI (@ANI) April 19, 2022
ಇದನ್ನೂ ಓದಿ: ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ತೆರೆಯಬೇಕೇ? ಈ ನಿಯಮ ಅನುಸರಿಸಿ
ಟೀ ಅಂಗಡಿ ತೆರೆಯುವ ಆಲೋಚನೆ ತಲೆಗೆ ಹೊಳೆದ ತಕ್ಷಣವೇ ಪ್ರಿಯಾಂಕಾ ಹಿಂದೆಮುಂದೆ ಯೋಚಿಸಲಿಲ್ಲ. ಇಂದು ಪದವಿ ಪಡೆದುಕೊಂಡಿದ್ದರೂ ಅನೇಕರು ಕೈಕಟ್ಟಿಕೊಂಡು ಮನೆಯಲ್ಲಿ ಕುಳಿತ್ತಿದ್ದಾರೆ. ಆದರೆ ಪ್ರಿಯಾಂಕಾ ಅವರು ಧೈರ್ಯದಿಂದಲೇ ತಾನು ಟೀ ಸ್ಟಾಲ್ ತೆರೆದು ಬದಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದಾರೆ. ಅದರಂತೆ ಅವರು ಪಟ್ನಾದ ಮಹಿಳಾ ಕಾಲೇಜು ಬಳಿ ಟೀ ಅಂಗಡಿ ಪ್ರಾರಂಭಿಸಿ ಯಶಸ್ವಿಯಾಗಿ ಬ್ಯುಸಿನೆಸ್ ಮಾಡುತ್ತಿದ್ದಾರೆ.
ತಾವು ಟೀ ಸ್ಟಾಲ್ ತೆರೆದಿರುವ ಬಗ್ಗೆ ಸುದ್ದಿಗಾರರ ಜೊತೆಗೆ ಮಾತನಾಡಿರುವ ಪ್ರಿಯಾಂಕಾ, ‘ನಾನು 2019ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದೇನೆ. ಆದರೆ, ಕಳೆದ 2 ವರ್ಷಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ. ಎಂಬಿಎ ಪದವೀಧರರಾಗಿರುವ ಅಹಮದಾಬಾದ್ನ ಪ್ರಫುಲ್ ಬಿಲ್ಲೋರ್ ಅವರಿಂದ ನಾನು ಸ್ಫೂರ್ತಿ ಪಡೆದುಕೊಂಡಿದ್ದೇನೆ. ಪ್ರಸ್ತತ ದೇಶದಲ್ಲಿ ಅನೇಕ ಚಾಯ್ವಾಲಾಗಳಿದ್ದಾರೆ. ಚಾಯ್ವಾಲಿ ಏಕೆ ಇರಬಾರದು’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಗ್ಯಾರಂಟಿಯೊಂದಿಗೆ ಡಬಲ್ ಆಗಲಿದೆ ನಿಮ್ಮ ಹಣ!
ಪ್ರಿಯಾಂಕಾರ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ನಮ್ಮ ದೇಶದಲ್ಲಿ ಪ್ರತಿಭಾವಂತಿಗೆ ಉದ್ಯೋಗ ಸಿಗುತ್ತಿಲ್ಲವೆಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
Please help me to connect with her. 🙏🏻🙏🏻
— Prafull MBA CHAI WALA (@Prafull_mbachai) April 19, 2022
ಉದ್ಯೋಗ ತ್ಯಜಿಸಿ ಅಹಮದಾಬಾದ್ನಲ್ಲಿ ‘ಎಂಬಿಎ ಚಾಯ್ವಾಲಾ’ ಎಂಬ ಟೀ ಸ್ಟಾಲ್ ಆರಂಭಿಸಿ ಜನಪ್ರಿಯರಾಗಿರುವ ಪ್ರಫುಲ್ ಬಿಲ್ಲೋರ್ ಕೂಡ ಪ್ರಿಯಾಂಕಾ ಗುಪ್ತಾರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ANI ಸುದ್ದಿಸಂಸ್ಥೆ ಪ್ರಕಟಿಸಿರುವ ವರದಿಗೆ ಪ್ರತಿಕ್ರಿಯಿಸಿರುವ ಅವರು ಪ್ರಿಯಾಂಕಾರನ್ನು ಸಂಪರ್ಕಿಸಲು ಬೇಕಾದ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.