ಜಮ್ಮು: ಜಮ್ಮುವಿನ ನಾಗ್ರೋಟಾದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು 4 ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ನಾಗ್ರೋಟಾ ಟೋಲ್ ಪ್ಲಾಜಾ ಬಳಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಕೇವಲ ಎರಡೂವರೆ ಗಂಟೆಗಳಲ್ಲಿ ಭಯೋತ್ಪಾದಕರ ಹುಟ್ಟಡಗಿಸಿದ್ದಾರೆ ಎಂದು ವರದಿಯಾಗಿದೆ.
Jammu and Kashmir: Security tightened in Udhampur as an encounter between terrorists and security forces is underway near Ban toll plaza.
(visuals deferred by unspecified time) pic.twitter.com/tzbTnJPIua
— ANI (@ANI) November 19, 2020
ನಾಲ್ಕು ಜನ ಭಯೋತ್ಪಾದಕರು (Terrorists) ಜಮ್ಮುವಿನಿಂದ ಕಾಶ್ಮೀರಕ್ಕೆ ಟ್ರಕ್ನಲ್ಲಿ ಹೋಗುತ್ತಿದ್ದರು ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಪಡೆಯುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ಭದ್ರತಾ ಪಡೆಗಳು ಮುಂಜಾನೆ 4.45ಕ್ಕೆ ಶೋಧ ಕಾರ್ಯದಲ್ಲಿ ತೊಡಗಿದರು. ಏತನ್ಮಧ್ಯೆ ನಾಗ್ರೋಟಾ ಟೋಲ್ ಪ್ಲಾಜಾದಲ್ಲಿ ಭದ್ರತಾ ಪಡೆಗಳೊಂದಿಗೆ ಮುಖಾಮುಖಿ ಪ್ರಾರಂಭವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH Jammu and Kashmir: An encounter is underway near Ban toll plaza in Nagrota, Jammu. Security tightened, Jammu-Srinagar National Highway closed. More details awaited.
(Visuals deferred by unspecified time) pic.twitter.com/PYI1KI0ykH
— ANI (@ANI) November 19, 2020
ಜಮ್ಮು-ಕಾಶ್ಮೀರ: ಎನ್ಕೌಂಟರ್ನಲ್ಲಿ ಲಷ್ಕರ್ ಕಮಾಂಡರ್ ಸೇರಿದಂತೆ 3 ಭಯೋತ್ಪಾದಕರ ಹತ್ಯೆ
ಭದ್ರತಾ ಪಡೆಗಳು (Security Force) ಎಲ್ಲೆಡೆಯಿಂದ ಭಯೋತ್ಪಾದಕರನ್ನು ಸುತ್ತುವರೆದಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಎನ್ಕೌಂಟರ್ (Encounter) ನಂತರ ಭದ್ರತಾ ಪಡೆಗಳು ನಾಲ್ಕು ಭಯೋತ್ಪಾದಕರನ್ನು ಹೊಡೆದುರುಳಿಸಿದರು.
3 ವರ್ಷಗಳಲ್ಲಿ 15 ದೇಶಗಳಿಗೆ ಭೇಟಿ ನೀಡಿದ್ದ ವಿಕಾಸ್ ದುಬೆ
ಹತ್ಯೆಗೀಡಾದ ಉಗ್ರರ ಬಳಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರನ್ನು ಇನ್ನೂ ಗುರುತಿಸಲಾಗಿಲ್ಲ. ಅವರ ಇತಿಹಾಸವನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.