ಕೆಲವೇ ಗಂಟೆಗಳಲ್ಲಿ ಖಾತೆಗೆ ಜಮಾ ಆಗುತ್ತೆ PF ಹಣ, EPFO ನಡೆಸುತ್ತಿದೆ ಭಾರಿ ತಯಾರಿ!

ನೀವೂ ಕೂಡ ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಅನ್ನು ತೆಗೆಯಲು ಬಯಸಿದರೆ ಪದೇ ಪದೇ ಪಿಎಫ್ ಕಚೇರಿಗೆ ಸುತ್ತುವ ಅಗತ್ಯವಿಲ್ಲ. ವಾಸ್ತವವಾಗಿ, ಇಪಿಎಫ್ಓದಿಂದ ಆನ್ಲೈನ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯವನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.

Last Updated : Apr 18, 2019, 03:15 PM IST
ಕೆಲವೇ ಗಂಟೆಗಳಲ್ಲಿ ಖಾತೆಗೆ ಜಮಾ ಆಗುತ್ತೆ PF ಹಣ, EPFO ನಡೆಸುತ್ತಿದೆ ಭಾರಿ ತಯಾರಿ! title=

ನವದೆಹಲಿ: ನೀವೂ ಕೂಡ ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಅನ್ನು ತೆಗೆಯಲು ಬಯಸಿದರೆ ಪದೇ ಪದೇ ಪಿಎಫ್ ಕಚೇರಿಗೆ ಸುತ್ತುವ ಅಗತ್ಯವಿಲ್ಲ. ವಾಸ್ತವವಾಗಿ, ಇಪಿಎಫ್ಓದಿಂದ ಆನ್ಲೈನ್ ಕ್ಲೈಮ್ ಸೆಟಲ್ಮೆಂಟ್ ಸೌಲಭ್ಯವನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ನೀವು ಪಿಎಫ್ ನಿಧಿಯಿಂದ ಮುಂಚಿತವಾಗಿ ಮುಂಗಡ ಹಣ ಹಿಪಡೆಯಲು ಅಥವಾ ಪೂರ್ಣ ಹಣವನ್ನು ತೆಗೆಯಲು  ಬಯಸಿದರೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ಲೈ ಮಾಡಿದ 3 ಕೆಲಸದ ದಿನಗಳಲ್ಲಿ, ಇಪಿಎಫ್ಒ ತನ್ನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಅದರ ನಂತರ ಬ್ಯಾಂಕ್ ಖಾತೆಗೆ ಹಣ ತಲುಪಲು 3 ದಿನ ಬೇಕಾಗುತ್ತದೆ. ಈ ಮಧ್ಯೆ ರಜಾದಿನಗಳು ಇದ್ದಲ್ಲಿ, ಈ ದಿನಗಳಲ್ಲಿ ಇದನ್ನು ಸೇರಿಸಲಾಗಿಲ್ಲ.

ಕೆಲವೇ ಗಂಟೆಗಳಲ್ಲಿ ಖಾತೆಗೆ ಜಮಾ ಆಗುತ್ತೆ PF ಹಣ;
ಮುಂಚೆ, ಜನರು ತಮ್ಮ ಉದ್ಯೋಗ ಬದಲಿಸಿದಂತೆ ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನೂ ವರ್ಗಾಯಿಸುತ್ತಿದ್ದರು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಇಪಿಎಫ್ಒ ಹಣ ಹಿಂಪಡೆಯುವಿಕೆಗಾಗಿ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಕಾರಣಕ್ಕಾಗಿಯೇ ಪಿಎಫ್ ಹಣ ಹಿಂತೆಗೆದುಕೊಳ್ಳುವಿಕೆಯ ಪ್ರಕ್ರಿಯೆಯನ್ನು ಸುಲಭ ಮಾಡಲಾಗಿದೆ ಎನ್ನಲಾಗಿದೆ. ನಮ್ಮ ಪಾಲುದಾರ ವೆಬ್ಸೈಟ್ www.zeebiz.com/hindi ಪ್ರಕಟಿಸಿದ ಸುದ್ದಿ ಪ್ರಕಾರ, ಪಿಎಫ್ ಹಣವನ್ನು ಹಿಂಪಡೆಯಲು ಅಥವಾ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಲು ಇಪಿಎಫ್ಒ ಮೂಲಕ ತಯಾರಿನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಸಂಭವಿಸಿದಲ್ಲಿ, ಷೇರುದಾರರ ಅರ್ಜಿ ಸಲ್ಲಿಕೆಯಾದ ಕೆಲವೇ ಕೆಲವು ಗಂಟೆಗಳ ಒಳಗೆ ಹಣವನ್ನು ಖಾತೆಗೆ ವರ್ಗಾಯಿಸಲಾಗುವುದು. ಇದಕ್ಕಾಗಿ, ಇಪಿಎಫ್ಓ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗಳ ನಡುವಿನ ಸಿಸ್ಟಂ ಅನ್ನು ಸಹ ಸರಿಪಡಿಸಬಹುದು. ಈಗ NEFT ಮೂಲಕ ಫಂಡ್ ವರ್ಗಾವಣೆ ಪ್ರಕ್ರಿಯೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಸುಮಾರು 3 ಕೆಲಸದ ದಿನಗಳು (3 ದಿನಗಳು) ಅವಶ್ಯಕ.

ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಹೀಗೆ ಮಾಡಿ:
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು EPFO ವೆಬ್ಸೈಟ್ https://unifiedportalmem.epfindia.gov.in/memberinterface/ ಗೆ ಭೇಟಿ ನೀಡಿ. ಇಲ್ಲ್ಲಿ ಯುಎಎನ್(UAN) ನಂಬರ್, ಪಾಸ್ವರ್ಡ್ ಮತ್ತು ಕೆಪ್ಚೆ ನಮೂದಿಸಿ ಲಾಗ್ಇನ್ ಆಗಿರಿ. ನಂತರ ಮ್ಯಾನೇಜ್(Manage) ಎಂಬ ಆಯ್ಕೆಗೆ ತೆರಳಿ ನಿಮ್ಮ KYC ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಿ. ಇದರ ನಂತರ ಆನ್ಲೈನ್ ಸರ್ವಿಸ್(Online Services) ಮೇಲೆ ಕ್ಲಿಕ್ ಮಾಡಿ. ನಿಮ್ಮ ಕ್ಲೈಮ್ ಫಾರ್ಮ್ ಸಲ್ಲಿಸಲು Proceed For Online Claim  ಕ್ಲಿಕ್ ಮಾಡಿ.

ಮೂರು ಆಯ್ಕೆಗಳಲ್ಲಿ ಹಣವನ್ನು ಪಡೆಯಬಹುದು;
ಆನ್ಲೈನ್ ಕ್ಲೈಂ ಫಾರ್ಮ್ ಸಲ್ಲಿಸಲು ನೀವೂ ಆಯ್ಕೆಯನ್ನು ಆರಿಸಬೇಕು. ಅದಕ್ಕಾಗಿ ‘I Want To Apply For’ ಗೆ ಹೋಗಿ. ಅದರಲ್ಲಿ full EPF Settlement, EPF Part withdrawal (loan/advance) ಅಥವಾ pension withdrawal ಆಯ್ಕೆಗಳಿವೆ. ಅದರಲ್ಲಿ ನೀವು ಆಯ್ಕೆ ಮಾಡಲು ಬಯಸುವ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ, ಪರಿಶೀಲನೆಗಾಗಿ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ  OTP ಕಳುಹಿಸಲಾಗುತ್ತದೆ.  OTP ನಮೂದಿಸಿದ ತಕ್ಷಣ ನಿಮ್ಮ ಅಪ್ಲಿಕೇಶನ್ ಅನ್ನು EPFO ಗೆ ತಲುಪುತ್ತದೆ.

5-10 ದಿನಗಳಲ್ಲಿ ಜಮಾ ಆಗುತ್ತೆ ಹಣ;
ಈ ಪ್ರಕ್ರಿಯೆ ಮುಗಿದ ನಂತರ ಸುಮಾರು 5 ರಿಂದ 10 ಕೆಲಸದ ದಿನಗಳಲ್ಲಿ ಇಪಿಎಫ್ಒ ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುತ್ತದೆ. ಈ ಮಾಹಿತಿಯು SMS ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.

Trending News