EPFO : UAN ಗೆ ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಲಿಂಕ್ ಮಾಡುಹುದು ಹೇಗೆ : ಇಲ್ಲಿದೆ ನೋಡಿ!

ಯುಎಎನ್ ಇಪಿಎಫ್ ಖಾತೆಗೆ ಸಂಪರ್ಕ ಹೊಂದಿದೆ ಮತ್ತು ನೌಕರನ ಬ್ಯಾಂಕ್ ವಿವರಗಳನ್ನು ಸಹ ಒಳಗೊಂಡಿದೆ

Last Updated : Jun 30, 2021, 04:45 PM IST
  • ಉದ್ಯೋಗದಾತರಿಂದ 12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ ನೀಡಲಾಗುತ್ತದೆ
  • ಯುಎಎನ್ ಇಪಿಎಫ್ ಖಾತೆಗೆ ಸಂಪರ್ಕ ಹೊಂದಿದೆ ಮತ್ತು ನೌಕರನ ಬ್ಯಾಂಕ್ ವಿವರಗಳನ್ನು ಸಹ ಒಳಗೊಂಡಿದೆ
  • ಯುಎಎನ್‌ನಲ್ಲಿ ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಬಹುದು
EPFO : UAN ಗೆ ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಲಿಂಕ್ ಮಾಡುಹುದು ಹೇಗೆ : ಇಲ್ಲಿದೆ ನೋಡಿ! title=

ನವದೆಹಲಿ : ನೌಕರರ ಭವಿಷ್ಯ ನಿಧಿ(PF)ಯ ಹಣವನ್ನು ಕಡಿತಗೊಳಿಸಿದರೆ, ಉದ್ಯೋಗದಾತರಿಂದ 12-ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ ನೀಡಲಾಗುತ್ತದೆ. ಇದರಲ್ಲಿ, ಖಾತೆದಾರರ ಪ್ರತಿ ಪಿಎಫ್ ಖಾತೆಯ ವಿವರಗಳು ಒಂದೇ ಸ್ಥಳದಲ್ಲಿ ಉಳಿಯುತ್ತವೆ. ಯುಎಎನ್ ಇಪಿಎಫ್ ಖಾತೆಗೆ ಸಂಪರ್ಕ ಹೊಂದಿದೆ ಮತ್ತು ನೌಕರನ ಬ್ಯಾಂಕ್ ವಿವರಗಳನ್ನು ಸಹ ಒಳಗೊಂಡಿದೆ. ಹಳೆಯ ಬ್ಯಾಂಕ್ ಖಾತೆಯನ್ನು ನಿಮ್ಮ ಯುಎಎನ್‌ನೊಂದಿಗೆ ಲಿಂಕ್ ಮಾಡಿದ್ದರೆ ಅಥವಾ ತಪ್ಪು ವಿವರಗಳನ್ನು ಸೇರಿಸಿದ್ದರೆ, ನೀವು ಯುಎಎನ್‌ನಲ್ಲಿ ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ನವೀಕರಿಸಬಹುದು. ಅದರ ಸಂಪೂರ್ಣ ಪ್ರಕ್ರಿಯೆ ನುಮಗಾಗಿ..

ಯುಎಎನ್‌ನಲ್ಲಿ ಬ್ಯಾಂಕ್ ವಿವರಗಳನ್ನು ನವೀಕರಿಸುವುದು ಹೇಗೆ?

ಯುಎಎನ್‌ನಲ್ಲಿ ಬ್ಯಾಂಕ್ ವಿವರಗಳನ್ನು ನವೀಕರಿಸುವ ಬಗ್ಗೆ ಇಪಿಎಫ್‌ಒ(EPFO) ಮಾಹಿತಿ ನೀಡಿದೆ. ವಾಸ್ತವವಾಗಿ, ಇಪಿಎಫ್‌ಒ ಟ್ವೀಟ್ ಮಾಡಿದ ಮಾಹಿತಿಯ ಪ್ರಕಾರ, ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನೀವು ಯುಎಎನ್‌ನಲ್ಲಿ ಬ್ಯಾಂಕ್ ವಿವರಗಳನ್ನು ನವೀಕರಿಸಬಹುದು. ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ನೋಡಿ.

ಇದನ್ನೂ ಓದಿ : ದುಬಾರಿ ದುನಿಯಾ : ಹಾಲಿನ ದರ ಏರಿಸಿದ ಅಮುಲ್, ನಾಳೆಯಿಂದಲೇ ಹೊಸ ದರ ಜಾರಿ

1. ಮೊದಲನೆಯದಾಗಿ ಇಪಿಎಫ್‌ಒನ ಏಕೀಕೃತ ಸದಸ್ಯ ಪೋರ್ಟಲ್ https://unifiedportal-mem.epfindia.gov.in/memberinterface/ ಗೆ ಹೋಗಿ.

2. ಈಗ ನಿಮ್ಮ ಯುಎಎನ್ ಮತ್ತು ಪಾಸ್ ವರ್ಡ್(Password) ಅನ್ನು ನಮೂದಿಸುವ ಮೂಲಕ ಇಲ್ಲಿ ಲಾಗ್ ಇನ್ ಮಾಡಿ.

3. ನಂತರ 'ನಿರ್ವಹಿಸು' ಟ್ಯಾಬ್ ಕ್ಲಿಕ್ ಮಾಡಿ.

ಇದನ್ನೂ ಓದಿ : WhatsApp Pay: ಈಗ ನೀವು ಚಾಟ್ ಮೂಲಕವೂ ಪಾವತಿಸಬಹುದು, ಅದನ್ನು ಹೇಗೆ? ಯಾರು ಬಳಸಬಹುದು ಎಂದು ತಿಳಿಯಿರಿ

4. ಈಗ ಡ್ರಾಪ್ ಡೌನ್ ಮೆನು ನಿಮ್ಮ ಮುಂದೆ ಕಾಣಿಸುತ್ತದೆ. ಈ ಮೆನುವಿನಲ್ಲಿ 'ಡಾಕ್ಯುಮೆಂಟ್‌ಗಳು' ಆಯ್ಕೆಮಾಡಿ.

5. ಇಲ್ಲಿ ಬ್ಯಾಂಕ್ ಖಾತೆ ಸಂಖ್ಯೆ(Account Number), ಹೆಸರು ಮತ್ತು ಐಎಫ್‌ಎಸ್‌ಸಿ ವಿವರಗಳನ್ನು ನಮೂದಿಸಿ ಮತ್ತು ಸೇವ್ ಕ್ಲಿಕ್ ಮಾಡಿ.

6. ಇದರ ನಂತರ ನೀವು 'ಅನುಮೋದನೆಗಾಗಿ KYC ಬಾಕಿ ಇದೆ' ಎಂದು ನೋಡುತ್ತೀರಿ.

ಇದನ್ನೂ ಓದಿ : Amarnath Cave Shivling Darshan 2021: ಹೀಗಿದೆ ಅಮರನಾಥ ಗುಹೆಯ ಈ ಬಾರಿಯ ಪವಿತ್ರ ಶಿವಲಿಂಗದ ಆಕಾರ

7. ಈಗ ಅದನ್ನು ಉದ್ಯೋಗದಾತರು(Employees) ಅನುಮೋದಿಸುತ್ತಾರೆ, ನಂತರ ನೀವು 'ಅನುಮೋದನೆಗಾಗಿ KYC ಬಾಕಿ ಇದೆ' ಅನ್ನು ಬದಲಾಯಿಸುವ ಮೂಲಕ 'ಡಿಜಿಟಲ್ ಅನುಮೋದಿತ KYC' ಅನ್ನು ನೋಡುತ್ತೀರಿ.

8. ಉದ್ಯೋಗದಾತರಿಂದ ನಿಮ್ಮೊಂದಿಗೆ ವಿವರಗಳನ್ನು ಪರಿಶೀಲಿಸಿದ ನಂತರ, ನೀವು ಇಪಿಎಫ್‌ಒನಿಂದ ದೃಡೀಕೃತ ಸಂದೇಶವನ್ನು ಸಹ ಪಡೆಯುತ್ತೀರಿ.

ಇದನ್ನೂ ಓದಿ : Covid-19 Vaccine News: ಇನ್ಮುಂದೆ ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ

ನಿಮ್ಮ ಬ್ಯಾಂಕ್ ವಿವರಗಳ ನವೀಕರಣ ಕೋರಿಕೆಗೆ ಉದ್ಯೋಗದಾತ ಪ್ರತಿಕ್ರಿಯಿಸದಿದ್ದರೆ, ನೀವು ಮೊದಲು ನಿಮ್ಮ ಮಾನವ ಸಂಪನ್ಮೂಲ ಇಲಾಖೆ(Department of Human Resources) ಅಥವಾ ಆಡಳಿತ ಅಥವಾ ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು. ಇದರ ನಂತರವೂ ಕಂಪನಿಯು ಯಾವುದೇ ಹೆಜ್ಜೆ ಇಡದಿದ್ದರೆ, ನೀವು ಇಪಿಎಫ್ ಕುಂದುಕೊರತೆಯ ಮೇಲೆ ದೂರು ಸಲ್ಲಿಸಬಹುದು.

ಇದನ್ನೂ ಓದಿ : International Flights : ಜು. 31 ರವರೆಗೆ ಇಂಟೆರ್ ನ್ಯಾಷನಲ್ ಫ್ಲೈಟ್ ಬಂದ್ : ಕೇಂದ್ರ ಸರ್ಕಾರ ಆದೇಶ

ನೀವು ಎಸ್‌ಬಿಐನಲ್ಲಿ ಖಾತೆಯನ್ನು ಹೊಂದಿದ್ದರೆ, ನಿಮಗೆ ಲಾಭ ಸಿಗುತ್ತದೆ : ಮೇಲಿನ ಕಾರ್ಯವಿಧಾನದ ಮೂಲಕ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್‌(UAN)ನಲ್ಲಿ ನವೀಕರಿಸಬಹುದು. ನಿಮ್ಮ ಬ್ಯಾಂಕ್ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಇದ್ದರೆ, ಅದನ್ನು ಬ್ಯಾಂಕಿನಿಂದಲೇ ಡಿಜಿಟಲ್ ಪರಿಶೀಲಿಸಲಾಗುತ್ತದೆ. ಆದರೆ ಈ ಸೌಲಭ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಮಾತ್ರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News