EXCLUSIVE: ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಹೊರಬಂದಿದೆ. ಹೌದು, ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆಯನ್ನು ನೀಡಿರುವ ಕೇಂದ್ರದ ಮೋದಿ ನೇತೃತ್ವದ ಸರ್ಕಾರ, ಜನವರಿ 1, 2004 ಅಥವಾ ಅದಕ್ಕಿಂತಲೂ ಮೊದಲು ಸೇವೆಗೆ ಸೇರಿದ ನೌಕರರಿಗೆ ಇದರ ಲಾಭ ಸಿಗಲಿದೆ ಎಂದು ಹೇಳಿದೆ.

Last Updated : Feb 18, 2020, 07:15 PM IST
EXCLUSIVE: ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆ ನೀಡಿದ ಕೇಂದ್ರ ಸರ್ಕಾರ title=

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಸರ್ಕಾರ ಕೇಂದ್ರ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಹಳೆ ಪೆನ್ಷನ್ ಯೋಜನೆಯ ಲಾಭ ನೀಡುವುದಾಗಿ ಘೋಷಣೆ ಮಾಡಿದೆ. ಜನವರಿ 1, 2004 ಹಾಗೂ ಆದಕ್ಕಿಂತ ಮೊದಲು ಕೇಂದ್ರ ಸರ್ಕಾರಿ ನೌಕರಿಗೆ ಸೇರಿದ ನೌಕರರಿಗೆ ಈ ಲಾಭ ನೀಡಲಿದ್ದು, ಈ ದಿನಾಂಕದ ಬಳಿಕ ಅಪಾಯಿಂಟ್ ಮೆಂಟ್ ಲೆಟರ್ ಸಿಕ್ಕ ನೌಕರರಿಗೂ ಇದು ಅನ್ವಯಿಸಲಿದೆ ಎಂದು ಹೇಳಿದೆ. ಈ ಎಲ್ಲ ನೌಕರರಿಗೆ ಹಳೆ ಪೆನ್ಶನ್ ಯೋಜನೆಯ ಲಾಭ ಸಿಗಲಿದೆ.

ಕೇಂದ್ರ ಹಾಗೂ ರಾಜ್ಯಗಳಲ್ಲಿ ಇಂತಹ ಅನೇಕ ನೌಕರರಿದ್ದು, ಅವರಿಗೆ ಅಪಾಯಿಂಟ್ ಮೆಂಟ್ ಲೆಟರ್ ಜನವರಿ 1, 2004ರ ಬಳಿಕ ದೊರೆತಿದ್ದು, ಅವರ ಆಯ್ಕೆ ಪ್ರಕ್ತಿಯೇ ಈ ದಿನಾಂಗದ ಮೊದಲೇ ನಡೆದಿತ್ತು. ರಾಜ್ಯ ಕರ್ಮಚಾರಿಗಳ ಸಂಯುಕ್ತ ಪರಿಷತ್ ಹಾಗೂ ಉತ್ತರ ಪ್ರದೇಶದ ಮಹಾಮಂತ್ರಿ ಆರ್.ಕೆ. ನಿಗಮ್ ಸರ್ಕಾರದ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಹಳೆ ಪೆನ್ಶನ್ ಯೋಜನೆಯ ಲಾಭ ದೊರೆಯದ ಹಲವು ನೌಕರರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ಕಾರದ ಈ ನಿರ್ಧಾರದಿಂದ ಅವರು ತಮ್ಮ ಪ್ರಕರಣಗಳನ್ನು ಇದೀಗ ಕೈಬಿಡಲಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಇದ್ದಾರೆ ಎಂದು ಹೇಳಿದ್ದಾರೆ.

ಏನಿದು ಸಂಪೂರ್ಣ ಪ್ರಕರಣ
ಆದೇಶದ ಪ್ರಕಾರ ಸರ್ಕಾರಿ ಸೇವೆಯಲ್ಲಿ ಆಯ್ಕೆ ಪ್ರಕ್ರಿಯೆಯ ಫಲಿತಾಂಶ ಜನವರಿ 1,2004 ಕ್ಕೂ ಮುಂಚಿತವಾಗಿಯೇ ಪ್ರಕಟಗೊಂಡಿತ್ತು. ಆದರೆ, ಇಂತಹ ಅಭ್ಯರ್ಥಿಗಳಿಗೆ ಜನವರಿ 1ರ ಬಳಿಕ ನೇಮಕಾತಿ ಪತ್ರ ನೀಡಲಾಗಿತ್ತು. ಪೊಲೀಸ್ ವೆರಿಫಿಕೆಶನ್ ಹಾಗೂ ಮೆಡಿಕಲ್ ಎಕ್ಸಾಮ್ ಗಳ ಕಾರಣ ಈ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಹೀಗಾಗಿ ನೌಕರರು ಇದಕ್ಕೆ ಕಾರಣರಲ್ಲ ಎಂದು ಸರ್ಕಾರ ಹೇಳಿದ್ದು, ಇದು ಆಡಳಿತ ವ್ಯವಸ್ಥೆಯ ಒಂದು ನ್ಯೂನ್ಯತೆಯಾಗಿತ್ತು ಎಂದು ಹೇಳಿದೆ. ಹೀಗಾಗಿ ಇಂತಹ ನೌಕರರಿಗೆ ಒನ್ ಟೈಮ್ ಆಪ್ಷನ್ ನೀಡಲಾಗುತ್ತಿದೆ. ಈ ಕುರಿತು ಅವರು ಪೆನ್ಶನ್ ವಿಭಾಗಕ್ಕೆ ಪತ್ರ ಬರೆದು ಹಳೆ ಪೆನ್ಶನ್ ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದೆ. ಇದಕ್ಕಾಗಿ ಮೇ 1, 2020ರವರೆಗೆ ಅಂತಿಮ ಗಡವು ನೀಡಲಾಗಿದೆ.

ಹಳೆ ಪೆನ್ಷನ್ ಯೋಜನೆಯ ಮೂರು ಲಾಭಗಳು
1- OPS ಯೋಜನೆ ಅಡಿ ನಿಮ್ಮ ಸೇವಾ ಅವಧಿಯ ಕೊನೆಯ ತಿಂಗಳಲ್ಲಿ ನೀವು ಪಡೆಯುವ ಸಂಬಳವನ್ನು ಆಧರಿಸಿ ಈ ಪೆನ್ಷನ್ ಸಿಗುತ್ತಿತ್ತು.
2- OPS ಯೋಜನೆ ಅಡಿ ಹಣದುಬ್ಬರ ಹೆಚ್ಚಾಗುತ್ತಿದ್ದಂತೆ ತುಟ್ಟಿಭತ್ಯೆ ಕೂಡ ಹೆಚ್ಚಾಗುತ್ತಿತ್ತು.
3- ಸರ್ಕಾರ ನೂತನ ವೇತನ ಆಯೋಗ ಜಾರಿಗೆಗೊಳಿಸಿದ ಸಂದರ್ಭದಲ್ಲಿಯೂ ಕೂಡ ಪೆನ್ಷನ್ ಹೆಚ್ಚಾಗುತ್ತಿತ್ತು.

Trending News