ನವದೆಹಲಿ: ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ಭಾರತ್ ಬಂದ್ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದ ರೈತ ಸಂಘಟನೆಗಳು, ಇಂದು ದೆಹಲಿ, ಆಗ್ರಾ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಗಡಿಯಲ್ಲಿ ನ. 26 ರಿಂದ ನಡೆಯುತ್ತಿರುವ ರೈತ ಪ್ರತಿಭಟನೆಗೆ ಕೆಲವಿಷ್ಟು ರೈತ ಸಂಘಟನೆಗಳು ಬೆನ್ನೆಲುಬಾಗಿ ನಿಂತಿವೆ. ಸರ್ಕಾರ ನಡೆಸಿದ 5 ಸುತ್ತಿನ ಮಾತುಕತೆ ವಿಫಲವಾಗಿದೆ. ಆದರೆ ರೈತ ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡುತ್ತಿರುವ, ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ರೈತ ಸಂಘಟನೆಗಳ ಮುಖಂಡರು ಅಸಲಿಗೆ ರೈತರೇ ಅಲ್ಲವಂತೆ.
ಯೋಗೇಂದ್ರ ಯಾದವ್: ಸ್ವರಾಜ್ ಇಂಡಿಯಾ ಸಂಘಟನೆಯ ಕನ್ವೀನರ್ ಆಗಿದ್ದರು. ಹಿನ್ನಲೆ ಹಾಗೂ ಉದ್ಯೋಗ: ಸಾಮಾಜಿಕ ಕಾರ್ಯಕರ್ತ ಹಾಗೂ ರಾಜಕೀಯ(Politacal) ಚಿಂತಕನಾಗಿ ಗುರಿತಿಸಿಕೊಂಡಿದ್ದಾರೆ. ವಿಶೇಷ ಅಂದರೆ ರೈತ ನಿಯೋಗದ ಭಾಗವಲ್ಲದಿದ್ದರೂ, ಸರ್ಕಾರದ ಪ್ರತಿನಿಧಿಗಳೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಇನ್ನು ರೈತ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಯೋಗಂದ್ರ ಯಾದವ್, ಸಂಯುಕ್ತ ಕಿಸಾನ್ ಮೋರ್ಚಾದ ಸಕ್ರೀಯ ಸದಸ್ಯರಾಗಿದ್ದಾರೆ. ಯುಜಿಸಿ ಮತ್ತು ಶಿಕ್ಷಣ ಹಕ್ಕಿನ ರಾಷ್ಟ್ರೀಯ ಸಲಹಾ ಮಂಡಳಿಯ ಮಾಜಿ ಸದಸ್ಯ.
ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿದ ಮಾಜಿ ಸಿಎಂ: ಯಾಕೆ ಗೊತ್ತಾ?
ಅಕ್ಷಯ್ ಕುಮಾರ್: ಅಕ್ಷಯ್ ಕುಮಾರ್ ನವಿ ನಿರ್ಮಾಣ ವಿಕಾಸ್ ಸಂಘಟನೆ(NNVS)ಸದಸ್ಯರಾಗಿದ್ದಾರೆ. ಹಿನ್ನಲೆ ಹಾಗೂ ಉದ್ಯೋಗ: ಒಡಿಶಾದ ಜಗತ್‌ಸಿಂಗ್‌ಪುರದ ನಿವಾಸಿಯಾದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಷಯ್ ಕುಮಾರ್ ಅಣ್ಣಾ ಹಜಾರೆ ಹಾಗೂ ಮೇಧಾ ಪಾಟ್ಕರ್ ನಿಕಟವರ್ತಿಯಾಗಿದ್ದಾರೆ. ನರ್ಮದಾ ಬಚಾವ್ ಅಂದೋಲನ ಹಾಗೂ ಆಝಾದಿ ಬಚಾವ್ ಆಂದೋಲನದ ಪ್ರಮುಖ ಸದಸ್ಯರಾಗಿದ್ದರು. ಸದ್ಯ ಅಕ್ಷಯ್ ಕುಮಾರ್ NNVS ಹಾಗೂ ಫಾರ್ಮರ್ ಫ್ರಂಟ್ ಆಫ್ ನವ ನಿರ್ಮಾಣ ಸಮಿತಿ ವಕ್ತಾರರಾಗಿದ್ದಾರೆ. ಯುವ ಭಾರತಿ ಸಂಘಟನೆ ಸಂಚಾಲಕರಾಗಿ ದುಡಿದಿದ್ದಾರೆ. ಇನ್ನು ವಿನೋಬ ಭಾವೆಯ ಹಿಂಬಾಲಕರಾಗಿದ್ದಾರೆ.
ಗ್ರಾ.ಪಂ. ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ್ರೆ ಸದ್ಯಸತ್ವ ಅಸಿಂಧು..!?
ದರ್ಶನ್ ಪಾಲ್: ದರ್ಶನ್ ಪಾಲ್, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಪಂಜಾಬ್ ಸಂಘಟನೆ ರಾಜ್ಯಾಧ್ಯಕ್ಷರಾಗಿದ್ದಾರೆ. ಸಿಪಿಐ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ ಹಿನ್ನಲೆ ಹಾಗೂ ಪಟಿಯಾಲದ ನಿವಾಸಿಯಾಗಿರುವ ದರ್ಶನ್ ಪಾಲ್, ಪಂಜಾಬ್ ಆರೋಗ್ಯ ವಿಭಾಗದ ನಿವೃತ್ತ ವೈದ್ಯರಾಗಿದ್ದಾರೆ. ಎಐಕೆಎಸ್ ಸಿಸಿ ರಾಜ್ಯ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಸಾರಿಗೆ ಸಚಿವರ ಮೇಲೆ ಗರಂ ಆದ ಸಿಎಂ ಬಿಎಸ್ ವೈ, ಗೃಹಸಚಿವ..!
ಕೀರನ್‌ಜೀತ್ ಸೆಖೋ: ಕುಲ್‌ಹಿಂದ್ ಕಿಸಾನ್ ಫೆಡರೇಶನ್ ಸದಸ್ಯರಾಗಿದ್ದಾರೆ. ಸಿಪಿಐ ಪಕ್ಷದ ನಿಕಟವರ್ತಿಯಾಗಿದ್ದಾರೆ. ಹಿನ್ನಲೆ ಹಾಗೂ ಉದ್ಯೋಗ: ವೃತ್ತಿಯಲ್ಲಿ ವಕೀರಲಾಗಿದ್ದಾರೆ.
ಪ್ರೇಮ್ ಸಿಂಗ್ ಬ್ನಾಂಗು: ಕುಲ್‌ಹಿಂದ್ ಕಿಸಾನ್ ಫೆಡರೇಶನ್ ಸದಸ್ಯರಾಗಿದ್ದಾರೆ. ಹಿನ್ನಲೆ ಹಾಗೂ ಉದ್ಯೋಗ: ವೃತ್ತಿಯಲ್ಲಿ ವಕೀರಲಾಗಿದ್ದಾರೆ.
ಕೋಲಾರದ ನರಸಾಪುರದಲ್ಲಿ ತಲೆ ಎತ್ತಿದ್ದ 'ದೇಶದ ಮೊದಲ iPhone ಕಂಪನಿ' ಧ್ವಂಸ!
ಕವಿತಾ ಕುರುಗಂಟಿ: ಕವಿತಾ ಕುರುಗಂಟಿ AIKS ಸಂಘಟನೆ ಸದಸ್ಯರಾಗಿದ್ದಾರೆ ಹಿನ್ನಲೆ ಹಾಗೂ ಉದ್ಯೋಗ: ಸಾಮಾಜಿಕ ಕಾರ್ಯಕರ್ತರಾಗಿರುವ ಕವಿತಾ ಎರಡೂ NGO ನಡೆಸುತ್ತಿದ್ದಾರೆ. ಮಹಿಳಾ ಕಿಸಾನ್ ಅಧಿಕಾರ್ ಮಂಚ್((MAKAAM)ಹಾಗೂ ಅಲೈಯನ್ಸ್ ಫಾರ್ ಸಸ್ಟೆನೇಬಲ್ ಹೊಲಿಸ್ಟಿಕ್ ಅಗ್ರಿಕಲ್ಚರ್(ASHA) ಸ್ಥಾಪಕರಾಗಿದ್ದಾರೆ.
KSRTC-BMTC: 2ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪ್ರಯಾಣಿಕರ ಪರದಾಟ
ಹನನ್ ಮೊಲ್ಲ: ಹನನ್ ಮೊಲ್ಲ ಕುಲ್‌ಹಿಂದ ಕಿಸಾನ್ ಸಂಘರ್ಷ ತಾಲ್‌ಮೇಲ್ ಕಮಿಟಿ ಸದಸ್ಯರಾಗಿದ್ದಾರೆ. cpi ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಹಿನ್ನಲೆ ಹಾಗೂ ಉದ್ಯೋಗ: ಪಶ್ಚಿಮ ಬಂಗಾಳದ ಹೋವ್ರಾ ನಿವಾಸಿಯಾಗಿದ್ದಾರೆ. ಉಲುಬೆರಿಯಾ ಪಿಸಿ ಕ್ಷೇತ್ರದ CPI ಸಂಸದರಾಗಿದ್ದರು. 1980 ರಿಂದ 2009ರ ವರೆಗೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. 1980 ರಿಂದ 1991ರ ವರೆಗೆ DYFI ಸಂಘಟನೆಯ ಮುಖ್ಯ ಕಾರ್ಯದರ್ಶಿಯಾಗಿದ್ದರು. ಸದ್ಯ ಹನನ್ ಮೊಲ್ಲ AIKS ಮುಖ್ಯ ಕಾರ್ಯದರ್ಶಿ ಹಾಗೂ ಆಲ್ ಇಂಡಿಯಾ ಎಗ್ರಿಕಲ್ಚರ್ ವರ್ಕರ್ಸ್ ಯೂನಿಯನ್ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಜಗ್‌ಮೋಹನ್ ಸಿಂಗ್ ಪಟಿಯಾಲ: ಜಗ್‌ಮೋಹನ್ ಸಿಂಗ್ BKU(ದಕೌಂದ) ಸಂಘಟನೆ ಸದಸ್ಯರಾಗಿದ್ದಾರೆ. CPI(ವಾವೋವಾದಿ) ಪಕ್ಷದ ನಿಕವರ್ತಿಯಾಗಿದ್ದಾರೆ. ಹಿನ್ನಲೆ ಹಾಗೂ ಉದ್ಯೋಗ: ವೃತ್ತಿಯಲ್ಲಿ ವಕೀರಲಾಗಿದ್ದಾರೆ.
ಸರ್ಕಾರವೇ ರೈತರಿಂದ ಹಸುಗಳನ್ನು ಖರೀದಿಸಲಿ: ಡಿ.ಕೆ. ಶಿವಕುಮಾರ್