ವಲಸೆ ಕಾರ್ಮಿಕರಿಗಾಗಿ ಕೈಗೆಟಕುವ ದರದಲ್ಲಿ ಬಾಡಿಗೆ ಯೋಜನೆ ಘೋಷಿಸಿದೆ ಮೋದಿ ಸರ್ಕಾರ

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ವಲಸೆ ಕಾರ್ಮಿಕರಿಗೆ ಮತ್ತು ನಗರ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಯೋಜನೆ (ಕೈಗೆಟುಕುವ ಬಾಡಿಗೆ ವಸತಿ ಯೋಜನೆ) ಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದ್ದಾರೆ.

Last Updated : May 14, 2020, 07:28 PM IST
ವಲಸೆ ಕಾರ್ಮಿಕರಿಗಾಗಿ ಕೈಗೆಟಕುವ ದರದಲ್ಲಿ ಬಾಡಿಗೆ ಯೋಜನೆ ಘೋಷಿಸಿದೆ ಮೋದಿ ಸರ್ಕಾರ title=

ನವದೆಹಲಿ: 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‌ನ ಎರಡನೇ ಕಂತನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಕಂತಿನಲ್ಲಿ ರೈತರು, ಬಡವರು ಮತ್ತು ಕಾರ್ಮಿಕರತ್ತ ವಿಶೇಷ ಗಮನ ಹರಿಸಲಾಗಿದೆ. ಹಣಕಾಸು ಸಚಿವರು ಈ ಎಲ್ಲ ವರ್ಗದವರಿಗೆ ವಿವಿಧ ಘೋಷಣೆಗಳನ್ನು ಮಾಡಿದ್ದಾರೆ. ಬಡ ಕಾರ್ಮಿಕರಿಗೆ ಕೈಗೆಟುಕುವ ಬಾಡಿಗೆ ವಸತಿ ಯೋಜನೆಯನ್ನು ಘೋಷಿಸಲಾಗಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ, ವಲಸೆ ಕಾರ್ಮಿಕರಿಗೆ ಮತ್ತು ನಗರದಲ್ಲಿ ವಾಸಿಸುತ್ತಿರುವ ಬಡವರಿಗಾಗಿ ಕೈಗೆಟುಕುವ ಬಾಡಿಗೆ ವಸತಿ ಯೋಜನೆ (ಕೈಗೆಟುಕುವ ಬಾಡಿಗೆ ವಸತಿ ಯೋಜನೆ) ಯನ್ನುಪರಿಚಯಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

ಯೋಜನೆಯಲ್ಲಿ ಎನಿರಲಿದೆ?
ಈ ಯೋಜನೆಯಡಿ PPP ಸಹಯೋಗದೊಂದಿಗೆ ಮನೆಗಳನ್ನು ನಿರ್ಮಿಸಿ ಅವುಗಳನ್ನು ವಲಸೆ ಕಾರ್ಮಿಕರು ಹಾಗೂ ನಗರದಲ್ಲಿ ವಾಸಿಸುತ್ತಿರುವ ಬಡವರಿಗೆ ಅತ್ಯಂತ ಕಡಿಮೆ ಬಾಡಿಗೆ ಪಡೆಯುವ ಮೂಲಕ ವಾಸಿಸಲು ನೀಡಲಾಗುವುದು.  ಇದರಿಂದ ಅವರು ಕಡಿಮೆ ಬಾಡಿಗೆಯನ್ನು ಪಾವತಿಸಿ ನಗರದಲ್ಲಿಯೇ ಉಳಿಯಲು ಸಾಧ್ಯವಾಗಲಿದೆ. ಕೈಗಾರಿಕೋದ್ಯಮಿಗಳಿಗೆ ತಮ್ಮ ತಮ್ಮ ಜಮೀನಿನಲ್ಲಿ ಅಂತಹ ಬಾಡಿಗೆ ಮನೆಗಳ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹಿಸಲಾಗುವುದು. ಈ ಕಾರ್ಯವನ್ನು ಆಯಾ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಮಾಡಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

ಸಬ್ಸಿಡಿ ಯೋಜನೆಯನ್ನೂ ಸಹ ಒಂದು ವರ್ಷದ ಅವಧಿಗೆ ವಿಸ್ತರಣೆ
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಹಣಕಾಸು ಸಚಿವರು ಗೃಹ ಸಾಲ ಪಡೆಯುವ ಮಧ್ಯಮ ವರ್ಗದವರಿಗೆ ಸಹಾಯಧನ(ಸಬ್ಸಿಡಿ) ನೀಡುವ ಗಡುವನ್ನು ಸಹ ಮಾರ್ಚ್ 2021 ರವರೆಗೆ ವಿಸ್ತರಿಸಿದ್ದಾರೆ. ಇದರಲ್ಲಿ 6 ಲಕ್ಷದಿಂದ 18 ಲಕ್ಷದವರೆಗಿನ ಆದಾಯವಿರುವ ಜನರು ಗೃಹಸಾಲ ಪಡೆದು ಸರ್ಕಾರದ ಸಬ್ಸಿಡಿ ಪಡೆಯಬಹುದಾಗಿದೆ ಈ ಯೋಜನೆ ಈಗಾಗಲೇ ಮಾರ್ಚ್ 2020ರಲ್ಲಿ ಮುಕ್ತಾಯಗೊಂಡಿದ್ದು, ಇದೀಗ ಮತ್ತೆ ಮಾರ್ಚ್ 2021ರವರೆಗೆ ವಿಸ್ತರಣೆಯಾಗಿದೆ.

Trending News