ಹರಿಯಾಣದ ಬಲ್ಲಾಬ್‌ಗರ್ಹ್ ಬಳಿ ತೆಲಂಗಾಣ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಪ್ರಯಾಣಿಕರು ಸುರಕ್ಷಿತ

ಈವರೆಗೆ ಯಾವುದೇ ಗಾಯಳುಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.

Updated: Aug 29, 2019 , 11:05 AM IST
ಹರಿಯಾಣದ ಬಲ್ಲಾಬ್‌ಗರ್ಹ್ ಬಳಿ ತೆಲಂಗಾಣ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಪ್ರಯಾಣಿಕರು ಸುರಕ್ಷಿತ

ಹೈದರಾಬಾದ್-ನವದೆಹಲಿ ತೆಲಂಗಾಣ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 12723 ರಲ್ಲಿ ಗುರುವಾರ ಬೆಳಿಗ್ಗೆ ಹರಿಯಾಣದ ಬಲ್ಲಾಬ್‌ಗರ್ಹ್ ದ ಅಸೋತಿ ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಹಲವಾರು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ತಲುಪಿದ್ದು ಬೆಂಕಿ ನಂದಿಸಲು ಪ್ರಯತ್ನಿಸುತ್ತಿವೆ. ಈವರೆಗೆ ಯಾವುದೇ ಗಾಯಳುಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ.

ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.

ಬೆಳಿಗ್ಗೆ 7.43ರ ಸುಮಾರಿಗೆ ರೈಲಿನ ಬ್ರೇಕ್ ಬೈಂಡಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದಕ್ಕೂ ಮೊದಲು ರೈಲು ಅಸೋತಿ ನಿಲ್ದಾಣವನ್ನು ಹಾದುಹೋಗಿದೆ. ಬಳಿಕ ಅಸೋತಿ ಮತ್ತು ಬಲ್ಲಾಬ್‌ಗರ್ಹ್ ನಿಲ್ದಾಣದ ನಡುವೆ ಈ ಅಪಘಾತ ಸಂಭವಿಸಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.